ಮನೆಯಲ್ಲಿ ಮೂವರು, ಚಲಿಸುತ್ತಿದ್ದ ಆಟೋದಲ್ಲಿ ಇಬ್ಬರಿಂದ ಮಹಿಳೆಯ ಮೇಲೆ ಗ್ಯಾಂಗ್‍ರೇಪ್

– ಚಲಿಸುತ್ತಿದ್ದ ಆಟೋದಲ್ಲಿಯೇ ಗ್ಯಾಂಗ್ ರೇಪ್
– ಫ್ಲೈ ಓವರ್ ಮೇಲೆ ಸಂತ್ರಸ್ತೆಯನ್ನ ಎಸೆದು ಪರಾರಿ

ಚಂಡೀಗಢ: 42 ವರ್ಷದ ಮಹಿಳೆಯನ್ನು ಮನೆ ಮತ್ತು ಚಲಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಎರಡು ಕಡೆ ಐವರು ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಹರಿಯಾಣದಲ್ಲಿ ನಡೆದಿದೆ.

ಮೊದಲಿಗೆ ಗುರುಗ್ರಾಮ್‍ನ ಭಂಗೊಲೋ ಗ್ರಾಮದ ಮನೆಯಲ್ಲಿ ಮೂವರು ಅತ್ಯಾಚಾರ ಮಾಡಿದ್ದು, ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಇಬ್ಬರು ಸಂತ್ರಸ್ತೆಯನ್ನು ಅತ್ಯಾಚಾರ ಮಾಡಿದ್ದಾರೆ.

ಏನಿದು ಪ್ರಕರಣ?
ಸಂತ್ರಸ್ತೆ ದೆಹಲಿಯ ನಿವಾಸಿಯಾಗಿದ್ದು, 2013 ರಲ್ಲಿ ಪತಿ ಮೃತಪಟ್ಟಿದ್ದರು. ಪತಿ ಕೆಲಸ ಮಾಡುತ್ತಿದ್ದ ಸಂಸ್ಥೆಯಲ್ಲಿ ಆರ್ಥಿಕ ವಿವಾದವೊಂದನ್ನು ಪರಿಹರಿಸಲು ಗುರುಗ್ರಾಮಕ್ಕೆ ಹೋಗಿದ್ದರು. ಸಂತ್ರಸ್ತೆ ಶನಿವಾರ ಅಂದರೆ ಡಿಸೆಂಬರ್ 29 ರಂದು ಮಧ್ಯಾಹ್ನ ಸುಮಾರು 2.30 ಗಂಟೆಗೆ ನಖ್ರೋಲಾ ಚೌಕ್ ರಾಷ್ಟ್ರೀಯ ಹೆದ್ದಾರಿ 8ರಲ್ಲಿ ಆಟೋ-ರಿಕ್ಷಾಗೆ ಹತ್ತಿದ್ದಾರೆ. ಆದರೆ ಆಟೋ ಚಾಲಕ ಅಂಕಿತ್ ಸಂತ್ರಸ್ತೆಯನ್ನು ಈಎಮ್‍ಟಿ ಮನೇಸಾರ್ ಸ್ಥಳಕ್ಕೆ ಕರೆದುಕೊಂಡು ಹೋಗುವ ಬದಲು ಅವರನ್ನು ಭಾಂಗ್ರೋಲಾದಲ್ಲಿ ಒಂದು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಆಟೋ ಚಾಲಕ ತನ್ನ ಇಬ್ಬರು ಸ್ನೇಹಿತರ ಜೊತೆ ಸೇರಿ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಷ್ಟೇ ಅಲ್ಲದೇ ಕಾಮುಕರು ಅಂದು ರಾತ್ರಿಯೇ ಸಂತ್ರಸ್ತೆಯನ್ನು ಇಬ್ಬರು ಆಟೋ ಚಾಲಕರಿಗೆ ಒಪ್ಪಿಸಿದ್ದಾರೆ. ನಂತರ ಅವರಿಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ಚಲಿಸುತ್ತಿದ್ದ ಆಟೋದಲ್ಲಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ. ಬಳಿಕ ಮಧ್ಯರಾತ್ರಿ ರಾಂಪುರಾ ಫ್ಲೈಓವರ್ ಸಮೀಪದ ಫುಡ್ ಸ್ಟಾಲ್ ಬಳಿ ಸಂತ್ರಸ್ತೆಯನ್ನು ಎಸೆದು ಪರಾರಿಯಾಗಿದ್ದಾರೆ.

ದಾರಿಹೋಕರು ಮಹಿಳೆಯನ್ನು ನೋಡಿ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಮಹಿಳೆ ಗುರುಗ್ರಾಮ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪೊಲೀಸರು ಅಂಕಿತ್ ಮತ್ತು ಆತನ ಸಹಚರರನ್ನು ಬಂಧಿಸಿದ್ದಾರೆ.

ಆರೋಪಿಗಳನ್ನು ದೀಪಕ್, ಮಹೀಪಾಲ್, ಅಜಿತ್ ಮತ್ತು ಸುನ್ನ ಎಂದು ಗುರುತಿಸಲಾಗಿದೆ. ಇತರ ಇಬ್ಬರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ. ಸದ್ಯಕ್ಕೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ವರದಿಯಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *