ನಾಲ್ಕು ಜನರ ಗುಂಪಿನಿಂದ ಅಪಹರಣವಾಗಿದ್ದ ಮಹಿಳೆ ಗ್ರೇಟ್ ಎಸ್ಕೇಪ್!

ಚೆನ್ನೈ: ಮಹಿಳೆಯೊಬ್ಬರನ್ನು ನಾಲ್ಕು ಜನರ ಗುಂಪೊಂದು ಅಪಹರಿಸಿತ್ತು. ಆದ್ರೆ ಇದೀಗ ಮಹಿಳೆ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡು ಬಂದಿರುವ ಘಟನೆ ತಿರುವಲೂರು ಜಿಲ್ಲೆಯ ಪೂನಮಲ್ಲಿ ನಗರದಲ್ಲಿ ನಡೆದಿದೆ.

ಈ ಘಟನೆ ಶುಕ್ರವಾರದಂದು ಕುಂದ್ರಥೂರು ಬಳಿ ನಡೆದಿದೆ. ಇಲ್ಲಿನ ಸಿರುಕಲಥೂರು ಗ್ರಾಮದ ನಿವಾಸಿ 25 ವರ್ಷದ ಇಳ್ಯಾರಾಣಿ ಅಪಹರಣಗೊಂಡ ಮಹಿಳೆ. ಇವರು ಖಾಸಗಿ ಬ್ಯಾಂಕೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.

ಕಾರಿನಲ್ಲಿ ಬಂದ ಆರೋಪಿಗಳು ಮಹಿಳೆಯ ಬಳಿ ವಿಳಾಸ ಕೇಳುವ ನೆಪದಲ್ಲಿ ಅವರನ್ನು ಅಪಹರಿಸಿ, ತ್ರೀಚಿ ಮಾರ್ಗಕ್ಕೆ ಕೊಂಡೊಯ್ದಿದ್ದರು. ಮಾರ್ಗ ಮಧ್ಯೆ ಆರೊಪಿಗಳ ಕಾರು ಕೆಟ್ಟು ಹೋಗಿದ್ದರಿಂದ ಮಧುರಂತಕಂ ಬಳಿ ನಿಲ್ಲಿಸಿದ್ದರು. ಈ ವೇಳೆ ಆರೋಪಿಗಳು ತನ್ನನ್ನು ಅವರ ಜೊತೆಗೆ ಕರೆದೊಯ್ದು ಮಧುರಂತಕಂ ಬಳಿ ಆಶ್ರಯ ಪಡೆದಿದ್ದರು. ಆಗ ತಾನು ದುಷ್ಕರ್ಮಿಗಳಿಂದ ತಪ್ಪಿಕೊಂಡು ಬಂದೆ ಎಂದು ಮಹಿಳೆ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಕೆಲವು ದಿನದಿಂದ ತನಗೆ ಅಪರಿಚಿತ ವ್ಯಕ್ತಿಗಳಿಂದ ಕರೆಗಳು ಬರುತ್ತಿತ್ತು ಎಂದು ಇಳ್ಯಾರಾಣಿ ತಮ್ಮ ಪ್ರಿಯಕರನ ಬಳಿ ಹೇಳಿದ್ದರು. ಸದ್ಯ ಪೂನಮಲ್ಲಿ ಪೊಲೀಸರು ಮಹಿಳೆಯ ಕಾಲ್ ಲಾಗ್ ವಿವರವನ್ನು ಪರಿಶೀಲಿಸುತ್ತಿದ್ದಾರೆ.

ಸದ್ಯ ಸಂತ್ರಸ್ತೆ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕಾಗಿ ವಿಶೇಷ ಜಾಲ ಬೀಸಿದ್ದಾರೆ.

Comments

Leave a Reply

Your email address will not be published. Required fields are marked *