ಇಂದೋರ್: ಆಕಸ್ಮಿಕವಾಗಿ ಗುರುವಾರ ರಾತ್ರಿ ಎಲೆಕೋಸಿನ ಜೊತೆ ಪುಟಾಣಿ ಹಾವೊಂದನ್ನ ಬೇಯಿಸಿ ತಿಂದು 35 ವರ್ಷದ ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾಗಿರೋ ಘಟನೆ ಇಂದೋರ್‍ನಲ್ಲಿ ನಡೆದಿದೆ.
ಅಫ್ಜಾನ್ ಇಮಾಮ್ ಹಾಗೂ ಅವರ 15 ವರ್ಷದ ಮಗಳು ಆಮ್ನಾ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೂ ಇಲ್ಲಿನ ಎಮ್‍ವೈ ಆಸ್ಪತ್ರೆ ವೈದ್ಯರು ಇಬ್ಬರ ದೇಹದಲ್ಲಿ ವಿಷದ ಅಂಶ ಇದೆಯೇ ಎಂದು ಪತ್ತೆ ಮಾಡಲು ಹಲವು ಪರೀಕ್ಷೆಗಳನ್ನ ನಡೆಸಿದ್ದಾರೆ.
ಮಹಿಳೆ ಹಾಗೂ ಅವರ ಮಗಳು ಆಸ್ಪತ್ರೆಗೆ ದಾಖಲಾದಾಗ ವಾಂತಿ ಮಾಡಿಕೊಳ್ಳುತ್ತಿದ್ರು ಎಂದು ಆಸ್ಪತೆಯ ಔಷಧೀಯ ವಿಭಾಗದ ಡಾ ಧಮೇಂದ್ರ ಜಾನ್ವಾರ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಪತ್ತೆಯಾಯ್ತು ಕಾಲು & ಉಗುರುಳ್ಳ ಹಾವು- ವಿಡಿಯೋ ನೋಡಿ
ರಾತ್ರಿ ಊಟಕ್ಕೆ ಎಲೆ ಕೋಸು ಬಳಸಿ ಅಡುಗೆ ಮಾಡಿ ತಾಯಿ ಮಗಳು ತಿಂದಿದ್ದಾರೆ. ಎಲೆಕೋಸಿನಲ್ಲಿ ಪುಟ್ಟ ಹಾವು ಸೇರಿಕೊಂಡಿದ್ದನ್ನು ಗಮನಿಸದೇ, ಕತ್ತರಿಸಿ ಬೇಯಿಸಿದ್ದಾರೆ. ಆದ್ರೆ ಊಟ ಮಾಡಿದ ನಂತರ ಉಳಿದ ತರಕಾರಿಯಲ್ಲಿ ಪುಟಾಣಿ ಹಾವಿನ ಚಿಕ್ಕ ಚಿಕ್ಕ ಪೀಸ್‍ಗಳು ಸಿಕ್ಕಿವೆ ಎಂದು ಅವರು ಹೇಳಿದ್ದಾರೆ.
ಹಾವನ್ನ ಬೇಯಿಸಿ ಸೇವಿಸಿರೋದ್ರಿಂದ ದೇಹದ ಮೇಲೆ ದುಷ್ಪರಿಣಾಮ ಬೀರಿದ್ಯಾ ಎಂದು ತಿಳಿಯಲು ಅಫ್ಜಾನ್ ಹಾಗೂ ಅಮ್ನಾರನ್ನ ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಒಂದು ವೇಳೆ ಹಾವಿನ ವಿಷ ರಕ್ತದಲ್ಲಿ ಬರೆತು ದೇಹಕ್ಕೆ ಪಸರಿಸಿದ್ರೆ ತುಂಬಾ ಅಪಾಯಕಾರಿ. ಹೀಗಾಗಿ ಮುಂದಿನ ಎರಡು ಮೂರು ದಿನಗಳವರೆಗೆ ಇಬ್ಬರ ಸ್ಥಿತಿಯ ಬಗ್ಗೆ ಗಮನ ವಹಿಸುತ್ತೇವೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಟೊಮೆಟೋ ಚಟ್ನಿ ಮಾಡುವಾಗ ಹಾವನ್ನೂ ಸೇರಿಸಿ ರುಬ್ಬಿದ ಮಹಿಳೆ – ತಿನ್ನುವಾಗ ಬಾಲ ನೋಡಿ ಹೌಹಾರಿದ ಮಗ
https://www.youtube.com/watch?v=23e5Ur5e-qs
https://www.youtube.com/watch?v=k0FYf5MPdOU

Leave a Reply