ಲಾಡ್ಜ್ ನಲ್ಲಿ ಜಗಳ: ಪ್ರೇಮಿಯ ಮರ್ಮಾಂಗವನ್ನು ಕತ್ತರಿಸಿದ್ಳು ಪ್ರೇಯಸಿ

ಮಲಪುರಂ: ಪ್ರೇಮಿಗಳಿಬ್ಬರ ನಡುವೆ ಜಗಳ ಉಂಟಾಗಿ ಪ್ರೇಯಸಿಯೊಬ್ಬಳು ಪ್ರಿಯಕರನ ಮರ್ಮಾಂಗವನ್ನು ಚಾಕುವಿನಿಂದ ಕತ್ತರಿಸಿದ ಧಾರುಣ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಲಾಡ್ಜ್ ಒಂದರಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡ ಯುವಕನ್ನು ಸ್ಥಳೀಯ ಪುರಥೂರ್ ನಿವಾಸಿ ಇರ್ಶಾದ್ ಎಂದು ಗುರುತಿಸಲಾಗಿದೆ. ಪ್ರೇಮಿಗಳಿಬ್ಬರು ಲಾಡ್ಜ್‍ನಲ್ಲಿ ಬುಧವಾರ ರೂಮ್ ಬುಕ್ ಮಾಡಿದ್ದು, ಗುರುವಾರ ಬೆಳಿಗ್ಗೆ ಈ ಘಟನೆ ಸಂಭವಿಸಿದೆ.

ಇರ್ಶಾದ್ ಗುರುವಾರ ಬೆಳಿಗ್ಗೆ ತನ್ನ ಕೊಠಡಿಯಿಂದ ಓಡಿಬರುವುದನ್ನು ಗಮನಿಸಿದ ಲಾಡ್ಜ್ ಸಿಬ್ಬಂದಿ ಆತನನ್ನು ಕೋಯಿಕ್ಕೋಡು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದಾರೆ. ವೈದ್ಯರು ಯುವಕನ ತುರ್ತು ಅಪರೇಷನ್ ನಡೆಸಿ ಮರ್ಮಾಂಗವನ್ನು ಯಶಸ್ವಿಯಾಗಿ ಜೋಡಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ 30 ವರ್ಷದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಪ್ರೇಮಿಯ ಮರ್ಮಾಂಗವನ್ನು ನಾನೇ ಚಾಕುವಿನಿಂದ ಕತ್ತರಿಸಿದ್ದೇನೆ ಎಂದು ಮಹಿಳೆ ಒಪ್ಪಿಕೊಂಡಿದ್ದಾಳೆ.

ಕೃತ್ಯ ಎಸಗಿದ್ದು ಯಾಕೆ?
ಮಹಿಳೆಗೆ ಈ ಹಿಂದೆ ಮದುವೆಯಾಗಿದ್ದು ಪತಿಗೆ ವಿಚ್ಛೇದನ ನೀಡಿದ್ದಳು. ಕಳೆದ 2 ವರ್ಷಗಳಿಂದ ಇರ್ಷಾದ್ ಜೊತೆ ಮಹಿಳೆ ಸಂಬಂಧ ಹೊಂದಿದ್ದು, ಇವರಿಬ್ಬರು ರಹಸ್ಯವಾಗಿ ಮದುವೆಯಾಗಿದ್ದರು. ಈ ಮದುವೆಯಾಗಿದ್ದರೂ ಇರ್ಷಾದ್ ಮತ್ತೊಂದು ಹುಡುಗಿಯ ಜೊತೆ ಸಂಬಂಧ ಬೆಳೆಸಲು ಮುಂದಾಗಿದ್ದ. ಈ ವಿಚಾರ ತಿಳಿದು ರೊಚ್ಚಿಗೆದ್ದ ಮಹಿಳೆ ಇರ್ಷಾದ್ ಮರ್ಮಾಂಗವನ್ನು ಚಾಕುವಿನಿಂದ ಇರಿದು ಕತ್ತರಿಸಿದ್ದಾಳೆ.

ಆದರೆ ಇರ್ಷಾದ್ ನಾನೇ ಕೃತ್ಯ ಎಸಗಿದ್ದೇನೆ ಎಂದು ಪೊಲೀಸ್ ವಿಚಾರಣೆ ವೇಳೆ ಹೇಳಿದ್ದಾನೆ.

Comments

Leave a Reply

Your email address will not be published. Required fields are marked *