CRPF ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ – ದೂರು ಕೊಟ್ರೂ ಕ್ರಮವಿಲ್ಲ ಅಂತ ಕಣ್ಣೀರು

-ರಾಜ್ಯ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಅಣ್ಣಾಮಲೈ ಕಿಡಿ

ಚೆನ್ನೈ: ಮದುವೆಗೆಂದು ಮನೆಯಲ್ಲಿ ಇಟ್ಟಿದ್ದ ಆಭರಣಗಳು ಕಳ್ಳತನವಾಗಿದೆ ಹುಡುಕಿಕೊಡಿ ಅಂತ ಸಿಆರ್‌ಪಿಎಫ್‌ನ‌ (CRPF) ಮಹಿಳಾ ಅಧಿಕಾರಿಯೊಬ್ಬರು ಕಣ್ಣೀರಿಟ್ಟಿದ್ದಾರೆ.

ತಮಿಳುನಾಡಿನ (Tamil Nadu) ವೇಲೂರು (Velur) ಜಿಲ್ಲೆಯ ನಾರಾಯಣಪುರಂ ಗ್ರಾಮದ 32 ವರ್ಷದ ಕಲಾವತಿ ಎಂಬುವವರು ಮನೆಯಲ್ಲಿ 15 ಸವರನ್ ಚಿನ್ನಾಭರಣ, 50,000 ರೂಪಾಯಿ ನಗದು, ರೇಷ್ಮೆ ಸೀರೆ ಇಟ್ಟಿದ್ದರು. ಇದು ಜೂನ್ 24ರಂದು ಕಳುವಾಗಿದೆ. ಕುಟುಂಬಸ್ಥರು ಕೃಷಿ ಕೆಲಸಕ್ಕೆ ಹೋಗಿದ್ದನ್ನೇ ಹೊಂಚುಹಾಕಿ ಕಾದಿದ್ದ ಕಳ್ಳರು ಮನೆ ಬಾಗಿಲು ಒಡೆದು ಲೂಟಿ ಮಾಡಿದ್ದಾರೆ. ಸ್ಥಳೀಯ ಪೊಲಿಸರಿಗೆ ದೂರು ಕೊಟ್ಟರೆ ಇನ್ನೂ ಕ್ರಮ ಇಲ್ಲ ಅಂತ ಕಲಾವತಿ ಕಣ್ಣೀರು ಹಾಕಿದ್ದು ವೈರಲ್ ಆಗಿದೆ. ಇದನ್ನೂ ಓದಿ: ಬೆಂಗಳೂರಿಗೆ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ ಡಿಕೆಶಿ

ಇದನ್ನು ಬಿಜೆಪಿ ನಾಯಕ ಅಣ್ಣಾಮಲೈ ಗಮನಿಸಿ ರಾಜ್ಯ ಸರ್ಕಾರದ ವಿರುದ್ಧ ಎಕ್ಸ್‌ನಲ್ಲಿ ಕಿಡಿಕಾರಿದ್ದರು. ತಕ್ಷಣವೇ ಸ್ಥಳೀಯ ಪೊಲೀಸರು ಪ್ರತಿಕ್ರಿಯಿಸಿದ್ದು, ನಾವು ಎಫ್‌ಐಆರ್ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ