ಮೋದಿ ವಿರುದ್ಧ ಪೋಸ್ಟ್ ಹಾಕಿ ಯಡವಟ್ಟು; ಕ್ಷಮೆ ಕೋರಿದ ಟೀಂ ಇಂಡಿಯಾ ಮಹಿಳಾ ಕ್ರಿಕೆಟರ್‌

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ವೇಗಿ ಪೂಜಾ ವಸ್ತ್ರಾಕರ್‌ (Pooja Vastrakar) ಯಡವಟ್ ಒಂದನ್ನ ಮಾಡ್ಕೊಂಡಿದ್ದಾರೆ. ಪೂಜಾ ವಸ್ತ್ರಾಕರ್‌ ಅವರ ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಪ್ರಧಾನಿ ಮೋದಿ (PM Modi) ಅವರನ್ನು ಅವಹೇಳನ ಮಾಡಿರುವ ಪೋಸ್ಟರ್ ಒಂದು ಕಾಣಿಸಿಕೊಂಡಿದೆ.

ಕ್ರಿಕೆಟ್ ಫ್ರಾಂಚೈಸಿ ಶೈಲಿಯಲ್ಲಿ ವಸೂಲಿ ಟೈಟಾನ್ಸ್ (Vasooli Titans) ಶೀರ್ಷೀಕೆಯ ಪೋಸ್ಟರ್ ಒಂದನ್ನು ಹಂಚಿಕೊಂಡು ಮೋದಿ, ಅಮಿತ್ ಶಾ, ಜೆಪಿ ನಡ್ಡಾ, ಜೈಶಂಕರ್, ನಿರ್ಮಲಾ ಸೀತಾರಾಮನ್, ರಾಜನಾಥ್ ಸಿಂಗ್, ನಿತಿನ್ ಗಡ್ಕರಿ, ಅನುರಾಗ್ ಠಾಕೂರ್ ಸೇರಿ ಅನೇಕ ಬಿಜೆಪಿ ನಾಯಕರ ಫೋಟೋ ಬಳಸಿ ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

ಇಂಪ್ಯಾಕ್ಟ್ ಪ್ಲೇಯರ್ ಜಾರಿ ನಿರ್ದೇಶನಾಲಯ ಎಂದು ಬರೆದುಕೊಂಡು ನಗುತ್ತಿರುವ ಎಮೋಜಿ ಹಾಕಿಕೊಂಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೂಜಾ ವಸ್ತ್ರಾಕರ್‌ ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಖಾತೆಯಲ್ಲಿದ್ದ ವಿವಾದಾತ್ಮಕ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಈ ಪೋಸ್ಟರ್ ಹರಿಬಿಟ್ಟ ಸಂದರ್ಭದಲ್ಲಿ ನನ್ನ ಖಾತೆ ನನ್ನ ಅಧೀನದಲ್ಲಿ ಇರಲಿಲ್ಲ, ನನ್ನ ಖಾತೆ ಹ್ಯಾಕ್ ಆಗಿತ್ತು. ಆಗಿರೋದಕ್ಕೆ ಕ್ಷಮೆ ಇರಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಿರಾತಕ ಸಿನಿಮಾದಲ್ಲಿ ಖಳನಟನಾಗಿ ನಟಿಸಿದ್ದ ಡೇನಿಯಲ್‌ ಬಾಲಾಜಿ ಹೃದಯಾಘಾತದಿಂದ ನಿಧನ