ಬೆಂಗಳೂರು: ಹಳ್ಳಿಗೆ ಹೋಗಲು ಇಷ್ಟವಿಲ್ಲದ ಗೃಹಿಣಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.
ನಂದಿನಿ ಆಹ್ಮಹತ್ಯೆ ಮಾಡಿಕೊಂಡ ಗೃಹಿಣಿ. ಮೃತ ನಂದಿಗೆ ಸಿಟಿ ಬಿಟ್ಟು ಹಳ್ಳಿಗೆ ಹೋಗುವುದಕ್ಕೆ ಇಷ್ಟವಿರಲಿಲ್ಲ. ಇದೇ ವಿಚಾರಕ್ಕೆ ಪ್ರತಿದಿನ ದಂಪತಿ ನಡುವೆ ಜಗಳವಾಗುತ್ತಿತ್ತು. ಆದರೆ ಪತಿ ಮಂಜುನಾಥ್ ಸ್ವೀಟ್ ಡೆಲಿವರಿ ಕೊಟ್ಟು ಬರಲು ಹೋಗಿದ್ದ ವೇಳೆ ನಂದಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಈಕೆಗೆ ಮೂರು ವರ್ಷಗಳ ಹಿಂದೆ ಚಾಮರಾಜನಗರ ಮೂಲದ ಮಂಜುನಾಥ್ ಜೊತೆಗೆ ವಿವಾಹವಾಗಿತ್ತು. ಮಂಜುನಾಥ್ ಸಾರಕ್ಕಿಯಲ್ಲಿ ಬೇಕರಿ ನಡೆಸುತ್ತಿದ್ದು, ರಾಜರಾಜೇಶ್ವರ ನಗರದಲ್ಲಿ ವಾಸಿಸುತ್ತಿದ್ದರು. ನಂದಿನಿಗೆ ಸಿಟಿಯಲ್ಲಿ ಇರಬೇಕೆಂದು ಇಷ್ಟವಿತ್ತು. ಆದರೆ ಪತಿ ಮಂಜುನಾಥ್ ಹಳ್ಳಿಯಲ್ಲಿ ತಾಯಿ ಒಂಟಿಯಾಗಿದ್ದಾರೆ ಎಂದು ಹಳ್ಳಿಗೆ ತೆರಳಲು ನಿರ್ಧಾರ ಮಾಡಿದ್ದರು. ಅದೇ ರೀತಿ ತನ್ನ ಬೇಕರಿಯನ್ನು ಮಾರಾಟ ಮಾಡುತ್ತಿದ್ದರು.

ಆದರೆ ನಂದಿನಿಗೆ ಹಳ್ಳಿಗೆ ಹೋಗಲು ಇಷ್ಟವಿರಲಿಲ್ಲ. ಈ ಬಗ್ಗೆ ಪತಿ ಮಂಜುನಾಥನಿಗೆ ಹೇಳಿದ್ದಾಳೆ. ಆದರೆ ಇದಕ್ಕೆ ಮಂಜುನಾಥ್ ಒಪ್ಪಿರಲಿಲ್ಲ. ಬಳಿಕ ಇದೇ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪವಿತ್ತು. ಇದರಿಂದ ಮನನೊಂದು ನಂದಿನಿ ಪತಿ ಸ್ವೀಟ್ ಡೆಲಿವರಿ ಕೊಟ್ಟು ಬರಲು ಹೋಗಿದ್ದ ವೇಳೆ ಮನೆಯಲ್ಲಿ ಯಾರು ಇಲ್ಲದ ಕಾರಣ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತಿ ಮಂಜುನಾಥ್ ಹಾಗೂ ಅತ್ತೆಯ ಕಿರುಕುಳದಿಂದ ನನ್ನ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ನಂದಿನಿ ಪೋಷಕರು ಆರೋಪ ಮಾಡುತ್ತಿದ್ದಾರೆ. ಈ ಘಟನೆ ಸಂಬಂಧ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply