ಸ್ವಂತ ಅತ್ತಿಗೆ, ಮಗುವನ್ನೇ ಸಜೀವವಾಗಿ ಸುಟ್ಟುಹಾಕಿದ ಬಾಮೈದ

ಚೆನ್ನೈ: ಸ್ವಂತ ಅತ್ತಿಗೆ ಹಾಗೂ ಆಕೆಯ ಮಗುವನ್ನು ಸಜೀವವಾಗಿ ಸುಟ್ಟುಹಾಕಿ ಹತ್ಯೆಗೈದಿರುವ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಲ್ಲಿ ಬಲಿಯಾದವರನ್ನು 22 ವರ್ಷದ ಅಂಜಲಾಯಿ ಮತ್ತು ಆಕೆಯ ಮಗು ಮಲರ್‌ವೆಳಿ ಎಂದು ಗುರುತಿಸಲಾಗಿದೆ. ತಮಿಳುನಾಡಿನ ದಿಂಡಿಗಲ್ ಜಿಲ್ಲೆಯ ನಾಥಮ್ ಗ್ರಾಮದ ಬಳಿ ಮಹಿಳೆ ಹಾಗೂ ಆಕೆಯ ಒಂದೂವರೆ ವರ್ಷದ ಮಗುವನ್ನು ಮರ್ಚ್ 2 ರಂದು ಪತಿಯ ಸೋದರನೇ ಸಜೀವವಾಗಿ ದಹನ ಮಾಡಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೂರನೇ ಮದುವೆಯಾಗಿದ್ದಕ್ಕೆ ಬಾವನನ್ನೆ ಹತ್ಯೆಗೈದ ಬಾಮೈದ

crime

ಅಂಜಲಾಯಿ ದಿನಗೂಲಿ ಮಾಡುವ ಶಿವಕುಮಾರ್ ಎಂಬಾತನನ್ನು ಮದುವೆಯಾಗಿ ಅವಿಭಕ್ತ ಕುಟುಂಬದಲ್ಲಿ ಜೀವನ ನಡೆಸುತ್ತಿದ್ದರು. ಶಿವಕುಮಾರ್ ಅವರ ಸಹೋದರ ಕರುಪಯ್ಯ (30) ಅವರು ಅಂಜಲಾಯಿ ಅವರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು. ಅಲ್ಲದೆ, ಆಕೆಗೆ ಚಿತ್ರಹಿಂಸೆ ನೀಡುತ್ತಿದ್ದರು.

ಶಿವಕುಮಾರ್ ಶನಿವಾರ ಕೆಲಸಕ್ಕೆ ತೆರಳಿದ ನಂತರ ಅಂಜಲಾಯಿ ಕುರಿ ಮೇಯಿಸಲು ಹೋಗಿದ್ದಾರೆ. ಈ ವೇಳೆ ಆಕೆಯನ್ನು ಹಿಂಬಾಲಿಸಿಕೊಂಡು ಹೋಗಿದ್ದ ಕರುಪಯ್ಯ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ. ಮಗುವಿನೊಂದಿಗೆ ಇದ್ದ ಅಂಜಲೈ ಸಹಾಯಕ್ಕಾಗಿ ಕಿರುಚಿದಾಗ ಕರುಪ್ಪಯ್ಯ ಇಬ್ಬರ ಮೇಲೂ ಹಲ್ಲೆ ನಡೆಸಿದ್ದಾನೆ. ಪ್ರಜ್ಞೆ ತಪ್ಪಿದ ಬಳಿಕ ಸ್ವಲ್ಪದೂರ ಕೊಂಡೊಯ್ದು ಇಬ್ಬರನ್ನೂ ಸುಟ್ಟುಹಾಕಿದ್ದಾನೆ. ವಿಷಯ ತಿಳಿದ ಸ್ಥಳೀಯರು ಕರುಪ್ಪಯ್ಯನಿಗೆ ಥಳಿಸಿದ್ದಾರೆ. ನಂತರ ಅವರನ್ನು ದಿಂಡಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾದ ಮಾಜಿ ಪ್ರಧಾನಿ ನವಾಜ್ ಶರೀಫ್ ಮೇಲೆ ದಾಳಿ

ಸಂತ್ರಸ್ತೆಯ ಪತಿ ಶಿವಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಕರುಪ್ಪಯ್ಯ ವಿರುದ್ಧ ಐಪಿಸಿ ಸೆಕ್ಷನ್ 302 (ಲೈಂಗಿಕ ಕಿರುಕುಳ ಮತ್ತು ಹತ್ಯೆ ಆರೋಪಕ್ಕೆ) ಮತ್ತು 201ರ (ಮಾಹಿತಿಗಳ ನಾಶಪಡಿಸಲು ಯತ್ನಿಸುವುದಕ್ಕಾಗಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 

Comments

Leave a Reply

Your email address will not be published. Required fields are marked *