ಸುಟ್ಟ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

CRIME 2

ಬೆಂಗಳೂರು: ಕೆಂಗೇರಿಯ (Kengeri) ಮುನೇಶ್ವರಸ್ವಾಮಿ ದೇವಾಲಯದ (Muneshwara Swamy Temple) ಸಮೀಪದ ಯುಎಂ ಕಾವಲ್ ಅರಣ್ಯ ಪ್ರದೇಶದಲ್ಲಿ ಮಹಿಳೆಯ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಸುಮಾರು 30 ವರ್ಷದ ಮಹಿಳೆಯನ್ನು ಬೇರೆ ಎಲ್ಲೋ ಕೊಲೆ ಮಾಡಲಾಗಿದೆ. ಶವವನ್ನು ಇಲ್ಲಿ ತಂದು ಸುಟ್ಟಿದ್ದಾರೆ ಎಂದು ಕಗ್ಗಲಿಪುರ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾರ್ಚ್ 4ಕ್ಕೆ ‘ಕಬ್ಜ’ ಸಿನಿಮಾ ಟ್ರೈಲರ್: ಕಾಯುತ್ತಿದ್ದ ಅಭಿಮಾನಿಗಳಲ್ಲಿ ಸಂಭ್ರಮ

ಬೆಳಗ್ಗೆ 10.45ರ ಸುಮಾರಿಗೆ ಅರಣ್ಯ ಇಲಾಖೆ (Forest Department) ನೌಕರ ಲೋಕೇಶ್ ಗಸ್ತಿನ ಮೇಲೆ ತೆರಳಿದ್ದಾಗ ಮೃತದೇಹ ನೋಡಿದ್ದಾರೆ. ನಂತರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಹಾಗೂ ಶ್ವಾನ ದಳದೊಂದಿಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಶವಾಗಾರದಲ್ಲಿ ಇರಿಸಲಾಗಿದೆ. ಉಪ ವಲಯ ಅರಣ್ಯಾಧಿಕಾರಿ ಎ.ಎಸ್ ಪ್ರಸಾದ್ ಬಾಬು ನೀಡಿದ ದೂರಿನನ್ವಯ ಕೊಲೆ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಪಿಲ್‍ದೇವ್ ಸಾಧನೆ ಹಿಂದಿಕ್ಕಿದ ರವಿಚಂದ್ರನ್ ಅಶ್ವಿನ್

Comments

Leave a Reply

Your email address will not be published. Required fields are marked *