ಪ್ರಭಾವಿ ವ್ಯಕ್ತಿಗಳನ್ನ ಫೇಸ್‍ಬುಕ್‍ನಲ್ಲಿ ಪರಿಚಯ ಮಾಡ್ಕೊಂಡು ಹಣಕ್ಕೆ ಬ್ಲಾಕ್‍ಮೇಲ್ ಮಾಡ್ತಿರೋ ಖರ್ತನಾಕ್ ಲೇಡಿ

ಬೀದರ್: ಸೋಶಿಯಲ್ ಮೀಡಿಯಾ ಮೂಲಕ ಪ್ರಭಾವಿ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಅವರ ನಗ್ನ ವೀಡಿಯೋ ಚಿತ್ರೀಕರಿಸಿ ಹಣ ವಸೂಲಿ ಮಾಡುವ ಜಾಲ ಗಡಿ ಜಿಲ್ಲೆ ಬೀದರ್‌ನಲ್ಲಿ ಬೆಳಕಿಗೆ ಬಂದಿದೆ.

ಉತ್ತರ ಭಾರತದ ಬ್ಲಾಕ್ ಮೇಲ್ ಜಾಲವೊಂದು ಫೇಸ್‍ಬುಕ್‍ನಲ್ಲಿ ಚಂದದ ಹುಡುಗಿಯ ಡಿಪಿ ಇಟ್ಟುಕೊಂಡು ರಾಜಕಾರಣಿಗಳು, ಉದ್ಯಮಿಗಳು, ವಯಸ್ಕರಿಗೆ ಬ್ಲಾಕ್ ಮೇಲ್ ಮಾಡುವ ಮೂಲಕ ಹಣ ವಸೂಲಿ ಮಾಡುತ್ತಿದ್ದರು. ಇಂಥಾ ಜಾಲಕ್ಕೆ ಬೀದರ್ ಜಿಲ್ಲೆಯ 15 ಮಂದಿ ಸಿಲುಕಿ ಮಾನ ಮರ್ಯಾದೆಗೆ ಅಂಜಿ ಹಣ ಕಳೆದುಕೊಂಡ ಪ್ರಕರಣ ಪ್ರಸ್ತುತ ಬೆಳಕಿಗೆ ಬಂದಿದೆ. ಇದನ್ನೂ ಓದಿ: BJP, RSS ನಾಯಕರು ತಮ್ಮ ಮಕ್ಕಳನ್ನು ಯಾಕೆ ಅಗ್ನಿಪಥ್ ಯೋಜನೆಯಡಿ ಸೈನ್ಯಕ್ಕೆ ಸೇರಿಸುತ್ತಿಲ್ಲ: ರೈತ ಮುಖಂಡರ ಕಿಡಿ 

ಏನಿದು ಘಟನೆ?
ಬೀದರ್‌ನ ಬಿಜೆಪಿ ಮುಖಂಡ ಸಂಗಮೇಶ್ ನಾಸಿಗಾರ್ ಅವರಿಗೆ ಯುವತಿಯೊಬ್ಬಳು ಫೇಸ್‍ಬುಕ್‍ನಲ್ಲಿ ರಿಕ್ವೇಸ್ಟ್ ಕಳಿಸಿದ್ದಾಳೆ. ಬಳಿಕ ವಾಟ್ಸಪ್ ನಂಬರ್ ತೆಗೆದುಕೊಂಡು ವೀಡಿಯೋ ಕಾಲ್ ಮಾಡಿ ಸಂಗಮೇಶ್ ಫೋಟೋ ಸೆರೆ ಹಿಡಿದಿದ್ದಾಳೆ. ಬಳಿಕ ಕರೆ ಮಾಡಿ, ನಿನ್ನ ಅಶ್ಲೀಲ ಚಿತ್ರಗಳನ್ನು ಮಾಡಿದ್ದೇನೆ. ನನಗೆ ಹಣ ಕೊಡದಿದ್ದರೆ ಫೋಟೋ, ವೀಡಿಯೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತೇನೆ ಎಂದು ಬ್ಲಾಕ್‌ ಮೇಲ್ ಮಾಡಲು ಪ್ರಾರಂಭ ಮಾಡಿದ್ದಾಳೆ.

ಇದೇ ರೀತಿ ಫೇಸ್‍ಬುಕ್ ಸೇರಿದಂತೆ ಸೋಶಿಯಲ್ ಮೀಡಿಯಾದಲ್ಲಿ ಪರಿಚಯ ಮಾಡಿಕೊಂಡ 15 ರಿಂದ 20 ದಿನದಲ್ಲಿ ಅವರ ಮಾಹಿತಿ ಕಲೆ ಹಾಕಿ ಬಳಿಕ ನಿಮ್ಮ ಅಶ್ಲೀಲ ಫೋಟೋಗಳನ್ನು ವೈರಲ್ ಮಾಡುತ್ತೇನೆ ಎಂದು ಬ್ಲಾಕ್ ಮೇಲೆ ಮಾಡುತ್ತಾಳೆ. ಇದನ್ನೂ ಓದಿ: ಸೋನಿಯಾ, ಪವಾರ್, ಮಮತಾ ಬ್ಯಾನರ್ಜಿಗೆ ಕರೆ ಮಾಡಿ ಬೆಂಬಲ ಕೋರಿದ ದ್ರೌಪದಿ ಮುರ್ಮು 

ಈ ಬಗ್ಗೆ ಬಿಜೆಪಿ ಮುಖಂಡ ಸಂಗಮೇಶ್ ಸೈಬರ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

Live Tv

Comments

Leave a Reply

Your email address will not be published. Required fields are marked *