ವಕೀಲ, ಮಹಿಳೆ ಮಧ್ಯೆ ಬೀದಿ ಕಾಳಗ

ಮಡಿಕೇರಿ: ಮಹಿಳೆ ಮತ್ತು ವಕೀಲ ಹೊಡೆದಾಡಿಕೊಂಡ ಘಟನೆ ಘಟನೆ ಕುಶಾಲನಗರದ (Kushalnagar) ಪಟೇಲ್ ಬಡಾವಣೆಯಲ್ಲಿ (Patel Badavane) ನಡೆದಿದೆ.

ಮನೆ ನಿರ್ಮಾಣ (Home Construction) ಮಾಡುವಾಗ ಸ್ವಲ್ಪ ಜಾಗಬಿಟ್ಟು ನಿರ್ಮಿಸುವಂತೆ ಮಹಿಳೆಗೆ ವಕೀಲ (Lawyer) ಸಂತೋಷ್ ಕುಮಾರ್ ಸೂಚಿಸಿದ್ದರು. ಆದರೆ ಸ್ವಲ್ಪವೂ ಜಾಗ ಬಿಡದೇ ಮಹಿಳೆ ಮನೆ ನಿರ್ಮಾಣಕ್ಕೆ ಮುಂದಾಗಿದ್ದಕ್ಕೆ ನಡೆದ ಜಗಳ ಬಡಿದಾಟದಲ್ಲಿ ಅಂತ್ಯಗೊಂಡಿದೆ. ಇದನ್ನೂ ಓದಿ: ಕಟ್ಟಡದ ಮೇಲಿನಿಂದ ಬಿದ್ದು ಮಗು ಸಾವು

ಹಲವು ದಿನಗಳಿಂದ ಮನೆಯ ಜಾಗದ ವಿಷಯವಾಗಿ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಿತ್ತು. ಶನಿವಾರ ಜಗಳ ಮತ್ತಷ್ಟು ತಾರಕಕ್ಕೆ ಏರಿದೆ. ವಕೀಲ ಸಂತೋಷ್ ಮಹಿಳೆಗೆ ಕೆಟ್ಟದಾಗಿ ನಿಂದಿಸಿದ್ದಾನೆ. ಈ ವೇಳೆ ವಕೀಲನಿಗೆ ಮಹಿಳೆ ಸುಮಿತ್ರಾ ಕಪಾಳಮೋಕ್ಷ ಮಾಡಿದ್ದಾಳೆ. ಮಹಿಳೆ ಹೊಡೆಯುತ್ತಿದ್ದಂತೆ ವಕೀಲ ತೀವ್ರ ಹಲ್ಲೆ ನಡೆಸಿದ್ದಾನೆ.

ಇಬ್ಬರ ಜಗಳ ಜೋರಾಗುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಸ್ಥಳಕ್ಕೆ ತೆರಳಿ ಕಿತ್ತಾಟ ನಿಲ್ಲಿಸಿದ್ದಾರೆ. ಗಾಯಗೊಂಡಿರುವ ಸುಮಿತ್ರಾರನ್ನು ಮಡಿಕೇರಿ ಅಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆ ನಡೆಸಿರುವ ಹಿನ್ನೆಲೆಯಲ್ಲಿ ವಕೀಲ ಮತ್ತು ಆತನ ಪತ್ನಿ ವಿರುದ್ಧ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಇದನ್ನೂ ಓದಿ: ಕರ್ತವ್ಯನಿರತ ಬಸ್ ಕಂಡಕ್ಟರ್‌ಗೆ ಎದೆನೋವು- ಆಸ್ಪತ್ರೆಗೆ ದಾಖಲಿಸಿದ್ರೂ ಚಿಕಿತ್ಸೆ ಸಿಗದೆ ನರಳಾಟ

Comments

Leave a Reply

Your email address will not be published. Required fields are marked *