ಮನೆ ಬಿಟ್ಟು ಹೋಗುವಂತೆ ಕಿರುಕುಳ: ಪೊಲೀಸ್ ಪೇದೆ ವಿರುದ್ಧ ದೂರು ಸ್ವೀಕರಿಸುತ್ತಿಲ್ಲವೆಂದು ಪತ್ನಿ ಆರೋಪ

ಚಾಮರಾಜನಗರ: ಪೊಲೀಸ್ ಮುಖ್ಯ ಪೇದೆಯೊಬ್ಬರು ಹೆಂಡತಿಗೆ ಮನೆ ಬಿಟ್ಟು ಹೋಗುವಂತೆ ಮಾನಸಿಕ ಹಾಗೂ ದೈಹಿಕ ಕಿರುಳ ನೀಡಿ ಹಲ್ಲೆ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಗಂಡನ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಹೋದರೆ ದೂರು ಸ್ವೀಕರಿಸುತ್ತಿಲ್ಲ ಎಂದು ಪೇದೆಯ ಹೆಂಡತಿ ಆರೋಪಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಪಟ್ಟಣ ಪೊಲೀಸ್ ಠಾಣೆಯ ಮುಖ್ಯ ಪೇದೆ ಮಿಲ್ ರೆಡ್ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ನಿ ಲತಾ ಆರಾಧ್ಯ ಆರೋಪಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಸಹ ಸ್ವೀಕಾರ ಮಾಡುತ್ತಿಲ್ಲ ಎಂದಿದ್ದಾರೆ.

10 ವರ್ಷಗಳ ಹಿಂದೆ ಮನೆಯವರ ವಿರೋಧವಿದ್ದರೂ ಮಿಲ್ ರೆಡ್ ನನ್ನು ಲತಾ ಆರಾಧ್ಯ ಪ್ರೀತಿಸಿ ಮದುವೆಯಾಗಿದ್ರು. 10 ವರ್ಷದ ಹಿಂದೆ ಮಿಲ್ ರೆಡ್ ನ ಮೊದಲ ಹೆಂಡತಿ ತೀರಿಕೊಂಡ ಕಾರಣದಿಂದ ಲತಾಗೆ ಮಿಲ್ ರೆಡ್ ಮೇಲೆ ಪ್ರೇಮಾಕುಂರವಾಗಿ ವಿವಾಹವಾಗಿದ್ರು. ಲತಾ ಲಿಂಗಾಯತರಾಗಿದ್ದು, ಮಿಲ್ ರೆಡ್ ಕ್ರಿಶ್ಚಿಯನ್ ಆಗಿದ್ದರಿಂದ ಹಾಗೂ ಎರಡನೇ ಮದುವೆಯಾದ್ದರಿಂದ ಲತಾ ಪೋಷಕರು ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ರು.

ಮದುವೆಯಾದ ಒಂದು ವರ್ಷದಿಂದಲೂ ನನಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ ಮನೆಯಲ್ಲಿ ಮೂಲಭೂತ ಸೌಕರ್ಯಗಳನ್ನು ಕಡಿತಗೊಳಿಸಿ ಹಿಂಸೆ ಕೊಡುತ್ತಿದ್ದಾರೆ ಎಂದು ಗಂಡನ ಮೇಲೆ ಲತಾ ಆರೋಪ ಮಾಡುತ್ತಿದ್ದಾರೆ.

ಇದಲ್ಲದೇ ಮಿಲ್ ರೆಡ್ ತನ್ನ ಮಗಳ ಶಾಲೆಯ ಶುಲ್ಕವನ್ನು ಕಟ್ಟುತ್ತಿಲ್ಲ. ನನ್ನ ಮೇಲೆ ಆಗಾಗ ಹಲ್ಲೆಯನ್ನು ಸಹ ಮಾಡುತ್ತಿದ್ದಾರೆ. ನನಗೆ ಜೀವ ಭಯವಿದೆ. ಈ ಬಗ್ಗೆ ಎಸ್.ಪಿ ಹಾಗೂ ಮಹಿಳಾ ಠಾಣೆಗೆ ದೂರು ನೀಡಿದರೂ ಸ್ವೀಕರಿಸುತ್ತಿಲ್ಲ ಎಂದು ಲತಾ ಆರೋಪಿಸಿದ್ದಾರೆ.

Comments

Leave a Reply

Your email address will not be published. Required fields are marked *