ಚಲಿಸುತ್ತಿರುವ ಕಾರಿನಲ್ಲಿಯೇ ತಾಯಿ, ಆಕೆಯ 6 ವರ್ಷದ ಮಗಳ ಮೇಲೆ ಅತ್ಯಾಚಾರ

RAPE

ಡೆಹ್ರಾಡೂನ್: ಚಲಿಸುತ್ತಿರುವ ಕಾರಿನಲ್ಲಿ ಮಹಿಳೆ ಮತ್ತು ಆಕೆಯ ಆರು ವರ್ಷದ ಮಗಳ ಮೇಲೆ ದುಷ್ಕರ್ಮಿಗಳು ಅತ್ಯಾಚಾರಗೈದಿರುವ ಘಟನೆ ಹರಿದ್ವಾರದ ರೂರ್ಕಿಯಲ್ಲಿ ನಡೆದಿದೆ.

ಭಾನುವಾರ ಮುಸ್ಲಿಂ ಧಾರ್ಮಿಕ ಕ್ಷೇತ್ರವಾದ ಪಿರಾನ್ ಕಲಿಯಾರ್‌ನಿಂದ ಮಹಿಳೆ ತನ್ನ ಆರು ವರ್ಷದ ಮಗಳೊಂದಿಗೆ ಮನೆಗೆ ಹೋಗುತ್ತಿದ್ದ ವೇಳೆ ಸೋನು ಎಂಬ ವ್ಯಕ್ತಿ ಲಿಫ್ಟ್ ನೀಡುವ ನೆಪದಲ್ಲಿ ಕೃತ್ಯವೆಸಗಿದ್ದಾನೆ. ಇದೇ ವೇಳೆ ಸೋನು ಜೊತೆಗೆ ಕಾರಿನಲ್ಲಿದ್ದ ಕೆಲವು ಸ್ನೇಹಿತರು ಕೂಡ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಇದನ್ನೂ ಓದಿ: ರಾಜಧಾನಿಯಲ್ಲಿ ಪ್ರಯಾಣಿಕರಿಗೆ ತಟ್ಟಲಿದೆ ಡೀಸೆಲ್ ಕೊರತೆ ಬಿಸಿ – ಬಸ್ ಸಂಚಾರದಲ್ಲಿ ವ್ಯತ್ಯಯ

ಕಾರು ಹತ್ತಿದ ಮಹಿಳೆ ಮತ್ತು ಆಕೆಯ ಮಗಳ ಮೇಲೆ ಸೋನು ಮತ್ತು ಆತನ ಸಹಚರರು ಅತ್ಯಾಚಾರವೆಸಗಿ ನಂತರ ಕಾಲುವೆವೊಂದರ ಬಳಿ ಇಬ್ಬರನ್ನು ತಳ್ಳಿ ಪರಾರಿಯಾಗಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಪ್ರಮೇಂದ್ರ ದೋವಲ್ ಹೇಳಿದ್ದಾರೆ.

RAPE CASE

ನಂತರ ಮಹಿಳೆ ಸ್ಥಳೀಯರ ಸಹಾಯದಿಂದ ಮಧ್ಯರಾತ್ರಿ ಪೊಲೀಸ್ ಠಾಣೆಗೆ ತಲುಪಿ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ವಿಚಾರಣೆ ವೇಳೆ ಕಾರಿನಲ್ಲಿ ಎಷ್ಟು ಮಂದಿ ಇದ್ದರು ಎಂಬುವುದು ನಿಖರವಾಗಿ ತಿಳಿದುಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಕಾರು ಚಲಾಯಿಸುತ್ತಿದ್ದ ವ್ಯಕ್ತಿ ಹೆಸರು ಸೋನು ಎಂದು ಗುರುತಿಸಿದ್ದಾರೆ. ಇದನ್ನೂ ಓದಿ: ಅಂಜನಾದ್ರಿ ಪರ್ವತಕ್ಕೆ ಮೈಸೂರು ರಾಜವಂಶಸ್ಥ ಯದುವೀರ್ ದಂಪತಿ ಭೇಟಿ

ಸದ್ಯ ಇಬ್ಬರನ್ನು ರೂರ್ಕಿ ಸಿವಿಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಯಲ್ಲಿ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

 

Live Tv

Comments

Leave a Reply

Your email address will not be published. Required fields are marked *