ದಾವಣಗೆರೆ: ಮಹಾನಾಯಕ ಅಂಬೇಡ್ಕರ್ ಜನ್ಮದಿನಕ್ಕೆ ಹರಿಹರದ ಯುವಕನೊಬ್ಬ ವಿಶೇಷ ನಮನ ಸಲ್ಲಿಸಿದ್ದಾರೆ.
ನಾಲಿಗೆಗೆ ಪ್ಲಾಸ್ಟರ್ ಸುತ್ತಿಕೊಂಡು ನಾಲಿಗೆ ಮೂಲಕ ಅಂಬೇಡ್ಕರ್ ಚಿತ್ರ ಬಿಡಿಸಿದ್ದಾನೆ. ಚಿತ್ರ ಬಿಡಿಸಿ ಮಹಾಮಾನವತಾವಾದಿಯ ಜನ್ಮದಿನ್ಕಕೆ ಕೊಡುಗೆಯಾಗಿ ನೀಡಿದ್ದಾನೆ. ಇದು ಭಾರತದಲ್ಲೇ ಮೊಟ್ಟ ಮೊದಲ ಬಾರಿಯ ಮೌತ್ ಅರ್ಟ್ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದನ್ನೂ ಓದಿ: ಪರಿಸ್ಥಿತಿಯನ್ನು ಕೆರಳಿಸಲು ಬಂದಿದ್ದಾರೆ – ತೇಜಸ್ವಿ ಸೂರ್ಯ ಮೇಲೆ ಅಶೋಕ್ ಗೆಹ್ಲೋಟ್ ಕಿಡಿ

ಜಿಲ್ಲೆಯ ಹರಿಹರ ನಗರದ ಜಯಕುಮಾರ್ ಮೌತ್ ಆರ್ಟ್‍ನ ಖ್ಯಾತಿಯ ತಮ್ಮ ನಾಲಿಗೆಗೆ ಪ್ಲಾಸ್ಟಿಕ್ ರ್ಯಾಪ್ ಸುತ್ತಿಕೊಂಡು ಈ ವಿಭಿನ್ನ ಕಲೆಯ ಮೂಲಕ ಬೃಹತ್ ಕಲಾಕೃತಿ ರಚಿಸಿದ್ದಾರೆ. ಹರಿಹರ ನಗರದಲ್ಲಿ ಆರ್ಟ್ ಹಾಗೂ ಟ್ಯಾಟೋ ಅಂಗಡಿ ಇಟ್ಟುಕೊಂಡಿರುವ ಜಯಕುಮಾರ್ ಇಂತಹ ಚಿತ್ರ ರಚನೆಯಿಂದಲೇ ಕರ್ನಾಟಕದಾದ್ಯಂತ ಫೇಮಸ್ ಆಗಿದ್ದಾರೆ. ಇದನ್ನೂ ಓದಿ: ಎಲೋನ್ ಮಸ್ಕ್ ಟ್ವಿಟ್ಟರ್ ಮಂಡಳಿಯ ಭಾಗವಲ್ಲ: ಪರಾಗ್ ಅಗರ್ವಾಲ್
ಸತತ ಐದಾರು ಗಂಟೆಗಳ ಪರಿಶ್ರಮದ ಫಲವಾಗಿ ನಾಲಿಗೆಯಲ್ಲಿ ಅಂಬೇಡ್ಕರ್‍ರವರ ಕಪ್ಪು ಬಿಳಿಪು ಚಿತ್ರ ಅರಳಿ ನಿಂತಿದೆ. ಇದನ್ನೂ ಬಿಡಿಸಲು ನಾಲಿಗೆಗೆ ಪ್ಲಾಸ್ಟಿಕ್ ರ್ಯಾಪ್ ಸುತ್ತಿಕೊಂಡು, ಬ್ಲಾಕ್ ಕ್ಯಾನ್ವಸ್ ಶೀಟ್‍ನಲ್ಲಿ ಬಿಳಿ ಬಣ್ಣದಲ್ಲಿ ಈ ಚಿತ್ರ ಬಿಡಿಸಿ ಅಂಬೇಡ್ಕರ್‍ರವರ ಜಯಂತಿ ಅಂಗವಾಗಿ ವಿಶೇಷ ನಮನ ಸಲ್ಲಿಸಲಾಗಿದೆ.

ಕಪ್ಪು ಬಿಳುಪು ಚಿತ್ರವನ್ನು 5 ಅಡಿ ಅಗಲ ಹಾಗೂ 6 ಅಡಿ ಉದ್ದದ ಚಿತ್ರ ತಯಾರಿಸಿದ್ದಾರೆ. ಪೆನ್ಸಿಲ್ ಆರ್ಟ್, ಮೌತ್ ಆರ್ಟ್, ಬಾಯಿಯಲ್ಲಿ ಕುಂಚ ಹಿಡಿದು ಬಿಡಿಸುವುದು, ನಾಲಿಗೆಯಲ್ಲಿ ಚಿತ್ರಬಿಡಿಸುವುದು, ಹೀಗೆ ನಾನಾ ರೀತಿಯಲ್ಲಿ ಸಾಕಷ್ಟು ಸೆಲೆಬ್ರಿಟಿಗಳ ಚಿತ್ರಗಳನ್ನು ಬಿಡಿಸಿ ಗಮನ ಸೆಳೆದಿದ್ದಾರೆ.

Leave a Reply