ಮಂಗಳೂರು: ಕರಾವಳಿಯಲ್ಲಿ ಮರಳು ಕ್ಷಾಮ ವಿಚಾರವಾಗಿ ಕೊನೆಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಎಚ್ಚೆತ್ತುಕೊಂಡಿದ್ದು, ಕರಾವಳಿ ನಿಯಂತ್ರಣ ವಲಯ (ಸಿಆರ್‍ಝೆಡ್) ಪ್ರದೇಶದಲ್ಲಿ ಮರಳು ತೆಗೆಯಲು ವಾರದೊಳಗೆ ಅನುಮತಿ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.
ಜನರಿಗೆ ಕೈಗೆಟುಕುವಂತೆ ಮರಳು ದರವನ್ನು ಜಿಲ್ಲಾಧಿಕಾರಿಗಳ ನೇತೃತ್ವದ ತಂಡ ನಿಗದಿ ಮಾಡಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ದರವನ್ನು ಪಡೆಯುವವರ ವಿರುದ್ಧ ದೂರು ಪಡೆಯಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಂಟ್ರೋಲ್ ರೂಮ್ ತೆರೆಯಬೇಕು ಎಂದು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.
ಒಟ್ಟು 22 ಪ್ರದೇಶಗಳನ್ನು ನಾನ್ ಸಿಆರ್ ಝೆಡ್ ಪ್ರದೇಶಗಳೆಂದು ಎಂದು ಗುರುತಿಸಲಾಗಿದೆ. ಈ ಪ್ರದೇಶ ಬಿಟ್ಟು ಬೇರೆಕಡೆಗೆ ಮರಳು ತೆಗೆಯಲು ಟೆಂಡರ್ ಕರೆಯುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತುಂಬೆ ಡ್ಯಾಂನಲ್ಲಿ ಮರಳು ತೆಗೆಯಲು ಪ್ರತ್ಯೇಕ ಯಾರ್ಡ್ ತೆರೆಯಲಾಗುವುದು ಎಂದು ಭರವಸೆ ನಿಡಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply