ಚೀನಾ ಕಾನೂನು ವಿರುದ್ಧ ಹೇಳಿಕೆ ನೀಡಿದರೆ ಮಾನ್ಯತೆ ರದ್ದು: ಅಥ್ಲೀಟ್‌ಗಳಿಗೆ ಎಚ್ಚರಿಕೆ

ಬೀಜಿಂಗ್‌: ಚೀನಾದಲ್ಲಿ ಚಳಿಗಾಲದ ಒಲಿಂಪಿಕ್ಸ್‌ ನಡೆಯುತ್ತಿದ್ದು, ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು ಚೀನಾದ ಕಾನೂನು ವಿರುದ್ಧ ಯಾವುದೇ ಹೇಳಿಕೆ ನೀಡಿದಂತೆ ಎಚ್ಚರಿಕೆ ನೀಡಿದೆ.

2008ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಈ ರೀತಿಯ ನಿರ್ಬಂಧಗಳನ್ನು ಹೇರಿರಲಿಲ್ಲ. ಆದರೆ ಈ ಬಾರಿ ದೇಶದ ಕಾನೂನು ವಿರುದ್ಧವಾಗಿ ಮಾತನಾಡದಂತೆ ಚೀನಾದ ಅಧಿಕಾರಿಗಳು ಕ್ರೀಡಾಪಟುಗಳಿಗೆ ಎಚ್ಚರಿಕೆ ನೀಡಿದ್ದಾರೆ. ಚಳಿಗಾಲದ ಒಲಿಂಪಿಕ್ಸ್‌ನಲ್ಲಿ ಚೀನಾದ ಖ್ಯಾತಿಗೆ ಧಕ್ಕೆ ತರಬಹುದು ಎಂಬ ಉದ್ದೇಶದಿಂದ ಸರ್ಕಾರ, ಸ್ಥಳೀಯ ಕಾರ್ಯಕರ್ತರನ್ನು ಗೃಹ ಬಂಧನದಲ್ಲಿ ಇರಿಸಿದೆ. ಇದನ್ನೂ ಓದಿ: ಗಲ್ವಾನ್‌ ಬಳಿಕ ಒಲಿಂಪಿಕ್ಸ್‌ ಜ್ಯೋತಿ ವಿಚಾರದಲ್ಲೂ ಕಿರಿಕ್‌ – ಸಣ್ಣತನ ತೋರಿದ ಚೀನಾ

ದೇಶದ ಕಾನೂನು ವಿರುದ್ಧ ಮಾತನಾಡಿದರೆ ಅಂತಹ ಕ್ರೀಡಾಪಟುಗಳ ಮಾನ್ಯತೆಯನ್ನೇ ರದ್ದುಗೊಳಿಸಲಾಗುವುದು. ಒಲಿಂಪಿಕ್ಸ್‌ ಸ್ಪೂರ್ತಿಗೆ ವಿರುದ್ಧವಾದ ಯಾವುದೇ ನಡವಳಿಕೆ ಅಥವಾ ಭಾಷಣವು ಚೀನಾದ ಕಾನೂನುಗಳು ಮತ್ತು ನಿಬಂಧನೆಗಳಿಗೆ ವಿರುದ್ಧವಾಗಿದ್ದು, ಶಿಕ್ಷೆಗೆ ಒಳಪಟ್ಟಿರುತ್ತವೆ ಎಂದು ಬೀಜಿಂಗ್‌ ಸಂಘಟನಾ ಸಮಿತಿಯ ಯಾಂಗ್‌ ಶು ಸ್ಪಷ್ಟಪಡಿಸಿದ್ದಾರೆ.

ಚೀನಾ ಸರ್ಕಾರದ ದೌರ್ಜನ್ಯ ಅಪರಾಧಗಳು ಮತ್ತು ಇತರೆ ಗಂಭೀರ ಮಾನವ ಹಕ್ಕುಗಳ ಉಲ್ಲಂಘನೆಗಳ ಆರೋಪದ ನಡುವೆ ಒಲಿಂಪಿಕ್ಸ್‌ ಆರಂಭವಾಗಿದೆ. ಇದನ್ನೂ ಓದಿ: ಭಾರತಕ್ಕಾಗಿ ಚಿಂತನಶೀಲ ನೀತಿ ಕಾರ್ಯಸೂಚಿ: ಬಜೆಟ್‌ ಬಗ್ಗೆ IMF ಮುಖ್ಯಸ್ಥೆ ಪ್ರತಿಕ್ರಿಯೆ

Comments

Leave a Reply

Your email address will not be published. Required fields are marked *