ಕಪಾಳಮೋಕ್ಷ ಘಟನೆಯ ನಂತರ 10 ವರ್ಷ ಆಸ್ಕರ್ ಪ್ರಶಸ್ತಿಯಿಂದ ಬ್ಯಾನ್ ಆದ ವಿಲ್ ಸ್ಮಿತ್

ಮೆರಿಕದ ಲಾಸ್ ಏಂಜಲ್ಸ್ ನಲ್ಲಿ 2022ರ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿದ್ದು, ಜಗತ್ತಿನ ದಿಗ್ಗಜ ನಟರೆಲ್ಲ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಆಸ್ಕರ್ ಪ್ರಶಸ್ತಿ 2022 ಅತ್ಯುತ್ತಮ ನಟ ಪ್ರಶಸ್ತಿ ವಿಜೇತ ವಿಲ್ ಸ್ಮಿತ್ ಸಮಾರಂಭದಲ್ಲಿ ಹಾಸ್ಯನಟ ಕ್ರಿಸ್ ರಾಕ್‍ಗೆ ವೇದಿಕೆ ಮೇಲೆಯೇ ಕಪಾಳಮೋಕ್ಷ ಮಾಡಿದ್ದರು. ಈ ಘಟನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ಬರುತ್ತಿದ್ದು, ಕೆಲವರು ಇದು ವೇದಿಕೆಗೆ ತೋರಿಸುವ ಗೌರವವಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಹಿನ್ನೆಲೆ ವಿಲ್ ಸ್ಮಿತ್ ಅವರನ್ನು ಆಸ್ಕರ್‌ನಿಂದ ನಿಷೇಧಿಸಲಾಗಿದೆ.

ಹಾಲಿವುಡ್ ಸ್ಟಾರ್ ನಟ ವಿಲ್ ಸ್ಮಿತ್ ಇದೇ ಮೊದಲಬಾರಿಗೆ ಆಸ್ಕರ್ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಈ ವೇಳೆ ನಟ ಭಾವಾತ್ಮಕವಾಗಿ ಭಾಷಣ ಮಾಡಿದ್ದರೂ, ವೇದಿಕೆಗೆ ಅಗೌರವ ತೋರುವ ಕೆಲಸವನ್ನು ಮಾಡಿದ್ದಾರೆ ಎಂಬ ಕಾರಣಕ್ಕೆ ಕಪಾಳಮೋಕ್ಷ ಸುದ್ದಿ ವಿಶ್ವಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಘಟನೆಯ ನಂತರ, ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್‍ನ ಆಡಳಿತ ಮಂಡಳಿಯು ಶುಕ್ರವಾರ ‘ದಿ ಪಸ್ರ್ಯೂಟ್ ಆಫ್ ಹ್ಯಾಪಿನೆಸ್’ ಸ್ಟಾರ್ ಅನ್ನು ಎಲ್ಲ ಅಕಾಡೆಮಿ ಇವೆಂಟ್‍ಗಳಿಂದ ನಿಷೇಧಿಸಲು ಮತ ಹಾಕಿತು.

ಶುಕ್ರವಾರ ಲಾಸ್ ಏಂಜಲೀಸ್‍ನಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ವರದಿಗಳ ಪ್ರಕಾರ ಸ್ಮಿತ್ ಕಳೆದ ವಾರ ಅಕಾಡೆಮಿಯಿಂದ ನಿವೃತ್ತಿ ಘೋಷಿಸಿದ್ದರು. ಇದನ್ನೂ ಓದಿ:  ಆಸ್ಕರ್ ಸದಸ್ಯತ್ವಕ್ಕೆ ವಿಲ್ ಸ್ಮಿತ್ ರಾಜೀನಾಮೆ : ಮೊದಲ ಆಸ್ಕರ್ ಸಂಭ್ರಮ ಉಳಿಯಲಿಲ್ಲ

ಆಸ್ಕರ್ ಅಧ್ಯಕ್ಷ ಡೇವಿಡ್ ರೂಬಿನ್ ಮತ್ತು ಸಿಇಒ ಡಾನ್ ಹಡ್ಸನ್ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಶುಕ್ರವಾರ(ನಿನ್ನೆ) ಆಸ್ಕರ್‌ನಲ್ಲಿ ವಿಲ್ ಸ್ಮಿತ್ ಅವರ ರಾಜೀನಾಮೆ ಕುರಿತು ಚರ್ಚಿಸಲು ಆಡಳಿತ ಮಂಡಳಿಯು ಸಭೆಯನ್ನು ಕರೆದಿತ್ತು. 2022 ಏಪ್ರಿಲ್ 8 ರಿಂದ 10 ವರ್ಷಗಳ ಅವಧಿವರೆಗೂ ಸ್ಮಿತ್ ಅವರನ್ನು ಅಕಾಡೆಮಿ ಪ್ರಶಸ್ತಿಗಳನ್ನು ಒಳಗೊಂಡಂತೆ, ಯಾವುದೇ ಅಕಾಡೆಮಿ ಇವೆಂಟ್‍ಗಳು ಅಥವಾ ಕಾರ್ಯಕ್ರಮಗಳಿಗೆ ಹಾಜರಾಗಲು ಅನುಮತಿ ನೀಡಬಾರದು ಎಂದು ಮಂಡಳಿಯು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

‘ಕಿಂಗ್ ರಿಚರ್ಡ್ಸ್’ ಸಿನಿಮಾದ ಅಭಿನಯಕ್ಕಾಗಿ ವಿಲ್ ಸ್ಮಿತ್ ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದರು. ಕೊನೆಗೆ ಈ ಪ್ರಶಸ್ತಿ ವಿಲ್ ಸ್ಮಿತ್ ಪಾಲಾಗಿತ್ತು. ಇದನ್ನೂ ಓದಿ: ಹೌದು, ನಾನು ತಪ್ಪು ಮಾಡಿದೆ ಕ್ಷಮಿಸಿ : ವಿಲ್ ಸ್ಮಿತ್

Comments

Leave a Reply

Your email address will not be published. Required fields are marked *