ದೊಡ್ಮನೆ ಆಟಕ್ಕೆ ಜೊತೆಯಾಗ್ತಾರಾ ಮೇಘಾ ಶೆಟ್ಟಿ? ಕೊನೆಗೂ ಸಿಕ್ತು ಉತ್ತರ

‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮೂಲಕ ಕರ್ನಾಟಕ ಜನತೆಯ ಮನಗೆದ್ದ ಮಂಗಳೂರಿನ ಬೆಡಗಿ ಮೇಘಾ ಶೆಟ್ಟಿ (Megha Shetty) ಅವರು ಬಿಗ್ ಬಾಸ್ ಮನೆ ಆಟಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಗೆ ಕೊನೆಗೂ ಉತ್ತರ ಸಿಕ್ಕಿದೆ. ಬಿಗ್ ಬಾಸ್ ಸೀಸನ್ 10ರಲ್ಲಿ (Bigg Boss Kannada Season 10) ಗ್ಲ್ಯಾಮರ್ ಗೊಂಬೆ ಮೇಘಾ ಶೆಟ್ಟಿ ಎಂಟ್ರಿ ಬಗ್ಗೆ‌ ಈಗ ಸ್ಪಷ್ಟನೆ ಸಿಕ್ಕಿದೆ.

ಕಿರುತೆರೆ ಲೋಕಕ್ಕೆ ಮೇಘಾ ಎಂಟ್ರಿ ಬಳಿಕ ಪ್ರತಿ ಬಿಗ್ ಬಾಸ್ ಸೀಸನ್‌ನಲ್ಲಿಯೂ ಮೇಘಾ ಶೆಟ್ಟಿ ಹೆಸರು ತಳುಕು ಹಾಕಿಕೊಳ್ಳುತ್ತಿತ್ತು. ಅದರಂತೆಯೇ ಈ ಬಾರಿ ಕೂಡ ದೊಡ್ಮನೆ ಆಟಕ್ಕೆ ಮೇಘಾ ಜೊತೆಯಾಗುತ್ತಾರೆ ಎಂದೇ ಹೇಳಲಾಗಿತ್ತು. ಆದರೆ ಈಗ ಈ ವಿಚಾರ ಸುಳ್ಳಾಗಿದೆ.

ಮೂಲಗಳ ಪ್ರಕಾರ, ಬಿಗ್ ಬಾಸ್‌ಗೆ ಮೇಘಾ ಶೆಟ್ಟಿ ಎಂಟ್ರಿ ಕೊಡುತ್ತಾ ಇಲ್ಲ. ಅಕ್ಟೋಬರ್ 4ರಿಂದ ವಿನಯ್ ರಾಜ್‌ಕುಮಾರ್ ಜೊತೆಗಿನ ‘ಗ್ರಾಮಾಯಣ’ (Gramayana Film) ಶೂಟಿಂಗ್ ಶುರುವಾಗುತ್ತಿದೆ. ಅದಕ್ಕಾಗಿ ನಟಿ ಸಿದ್ಧತೆ ಮಾಡಿಕೊಳ್ತಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವಾಗಿರುವ ಕಾರಣ, ಹಳ್ಳಿ ಸೊಗಡಿನಲ್ಲಿ ಬೆಂಗಳೂರು ಬಿಟ್ಟು ಬೇರೆ ಕಡೆ ಚಿತ್ರೀಕರಣಕ್ಕೆ ಪ್ಲ್ಯಾನ್ ಮಾಡಲಾಗಿದೆ. ಒಂದು ತಿಂಗಳುಗಳ ಕಾಲ ಶೂಟಿಂಗ್ ನಡೆಯಲಿದೆ ಎನ್ನಲಾಗಿದೆ. ಇದನ್ನೂ ಓದಿ:ಸಂಯುಕ್ತಾ ಬಟ್ಟೆಗೆ ನೆಗೆಟಿವ್ ಕಾಮೆಂಟ್ಸ್, ತಿರುಗೇಟು ನೀಡಿದ ಕಿಶನ್ ಬಿಳಗಲಿ

megha shetty (5)

‘ಗ್ರಾಮಾಯಣ’ ಸಿನಿಮಾ ಜೊತೆಗೆ ಬೇರೆ ಬೇರೆ ಸಿನಿಮಾಗಳನ್ನ ಕೂಡ ನಟಿ ಒಪ್ಪಿಕೊಂಡಿದ್ದಾರೆ. ಈ ಚಿತ್ರದ ಜೊತೆಗೆ ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನ ನಟಿ ಪೂರ್ಣಗೊಳಿಸಬೇಕಿದೆ. ಧನ್ವೀರ್ ಗೌಡ ಜೊತೆಗಿನ ‘ಕೈವ’ ಚಿತ್ರ ಕೂಡ ರಿಲೀಸ್‌ಗೆ ರೆಡಿಯಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಕೂಡ ಸದ್ಯದಲ್ಲೇ ಶುರುವಾಗಲಿದೆ. ಹಾಗಾಗಿ ಬಿಗ್ ಬಾಸ್‌ಗೆ ಮೇಘಾ ಎಂಟ್ರಿ ಕೊಡಲು ಸಾಧ್ಯವಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ಸಿಕ್ಕಿದೆ.

ಅಕ್ಟೋಬರ್ 8ರಿಂದ ಕಿಚ್ಚ ಸುದೀಪ್ (Kiccha Sudeep) ನಿರೂಪಣೆಯ ‘ಬಿಗ್ ಬಾಸ್’ ಕಾರ್ಯಕ್ರಮ ಸಂಜೆ 6ಕ್ಕೆ ಅದ್ದೂರಿಯಾಗಿ ಓಪನಿಂಗ್ ಪಡೆಯಲಿದೆ. ಪ್ರತಿದಿನ ರಾತ್ರಿ 9:30ಕ್ಕೆ ಪ್ರಸಾರವಾಗಲಿದೆ. ಯಾರೆಲ್ಲಾ ಸ್ಪರ್ಧಿಗಳಾಗಿ ಎಂಟ್ರಿ ಕೊಡುತ್ತಾರೆ ಕಾದುನೋಡಬೇಕಿದೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]