ಜನರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ: ಬಿಎಸ್‍ವೈ

ಬಾಗಲಕೋಟೆ: ಜನರ ಒತ್ತಾಯದ ಮೇರೆಗೆ ಶಿಕಾರಿಪುರ ಕ್ಷೇತ್ರದಿಂದಲೇ ಸ್ಪರ್ಧಿಸೋದು ನೂರಕ್ಕೆ ನೂರಷ್ಟು ಸತ್ಯ. ತೇರದಾಳ ಕ್ಷೇತ್ರದಿಂದ ಸ್ಪರ್ಧಿಸಲ್ಲ. ಈ ಬಗ್ಗೆ ಹೈಕಮಾಂಡ್‍ಗೆ ಮನವೊಲಿಸುತ್ತೇನೆ ಅಂತ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೇರದಾಳ ಕ್ಷೇತ್ರದ ಹಿಂದಿನ ಅಭ್ಯರ್ಥಿ ಸಿದ್ದು ಸವದಿಯವ್ರೇ ಸ್ಪರ್ಧಿಸುತ್ತಾರೆ. ಅವ್ರನ್ನ ಬಹುಮತದಿಂದ ಆರಿಸಿ ತರುವಲ್ಲಿ ಕೆಲಸ ಮಾಡುತ್ತೇವೆ ಅಂದ್ರು. ನಾನು ಎಲ್ಲೇ ಸ್ಪರ್ಧೆ ಮಾಡಿದ್ರೂ ರಾಜ್ಯಾದ್ಯಂತ ಸುತ್ತಿ, ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಅಂದ್ರು.

ಸಿಎಂ ಸಿದ್ಧರಾಮಯ್ಯನವರ ಸರ್ಕಾರ ಸಂಪೂರ್ಣ ಭ್ರಷ್ಟಚಾರದಲ್ಲಿ ತೊಡಗಿದ್ದು, ಇನ್ನೆರಡು ದಿನದಲ್ಲಿ ಪುಟ್ಟಸ್ವಾಮಿ ಸರ್ಕಾರದ ಹಗರಣಗಳ ಮತ್ತೊಂದು ದಾಖಲೆಯನ್ನ ಬಿಡುಗಡೆ ಮಾಡಲಿರೋದಾಗಿ ಬಾಂಬ್ ಸಿಡಿಸಿದ್ರು.

ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿ, ಎಸಿಬಿ ಸಂಸ್ಥೆ ಸಿದ್ದರಾಮಯ್ಯ ಸರ್ಕಾರವನ್ನ ರಕ್ಷಣೆ ಮಾಡಲು ಇರುವ ಸಂಸ್ಥೆಯಾಗಿದೆ. ಐಟಿ ಅಧಿಕಾರಿಗಳ ಮೇಲೆ ಎಸಿಬಿ ದಾಳಿ ನಡೆಸೋದು ಅಪಹಾಸ್ಯಕ್ಕೀಡಾಗುವಂತಹದ್ದು. ಇದು ಸಿಎಂ ಸಿದ್ದರಾಮಯ್ಯನವರ ಮೂರ್ಖತನದ ಪರಮಾವಧಿ. ಇನ್ನೂ ಕೆಲ ಸಚಿವರ ಮನೆ ಮೇಲೆ ಐಟಿ ದಾಳಿಯಾಗುವ ಸಾಧ್ಯತೆ ಇದೆ. ಆ ಭಯದಿಂದ ಸಿದ್ದರಾಮಯ್ಯ ಎಸಿಬಿ ದಾಳಿಗೆ ಮುಂದಾಗಿದ್ದಾರೆಂದು ಕುಟುಕಿದ್ರು.

 

 

Comments

Leave a Reply

Your email address will not be published. Required fields are marked *