ಚಾ.ನಗರ| ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆ ದಾಳಿ

ಚಾಮರಾಜನಗರ: ಫೋಟೊ ತೆಗೆಯಲು ಹೋದವನ ಮೇಲೆ ಕಾಡಾನೆಯೊಂದು ದಾಳಿ ನಡೆಸಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

ರಸ್ತೆ ಬದಿಯಲ್ಲಿ ಕಾಡಾನೆ ನಿಂತಿತ್ತು. ಈ ವೇಳೆ ಕಾರಿನಿಂದ ಇಳಿದು ಪ್ರವಾಸಿಗರು ಹುಚ್ಚಾಟ ಮೆರೆದಿದ್ದರು. ಪ್ರವಾಸಿಗರು ಕಿರುಚಾಡಿ ಆನೆಯನ್ನು ಉದ್ವೇಗಗೊಳಿಸಿದರು. ಓರ್ವ ಪ್ರವಾಸಿಗ ಆನೆ ಸಮೀಪವೇ ತೆರಳಿ ಪೋಟೊ ಕ್ಲಿಕ್ಕಿಸಿಕೊಳ್ಳಲು ಯತ್ನಿಸಿದ. ಈ ವೇಳೆ ಕೆರಳಿದ ಆನೆ ಏಕಾಏಕಿ ದಾಳಿ ನಡೆಸಿತು.

ಓಡಿ ಹೋಗುತ್ತಿದ್ದ ಪ್ರವಾಸಿಗ ರಸ್ತೆ ಮೇಲೆ ಪಲ್ಟಿ ಹೊಡೆದ. ಕೊನೆಗೆ ಅಟ್ಟಾಡಿಸಿ ಆನೆ ದಾಳಿ ನಡೆಸಿದೆ. ಗಾಯಗೊಂಡ ಪ್ರವಾಸಿಗನನ್ನು ಕುಟುಂಬಸ್ಥರು ಆಸ್ಪತ್ರೆಗೆ ಸೇರಸಿದ್ದಾರೆ.

ಆನೆ ದಾಳಿಗೆ ಒಳಗಾದವನ ಬಗ್ಗೆ ಅರಣ್ಯ ಇಲಾಖೆ ಮಾಹಿತಿ ಪಡೆಯಲು ಮುಂದಾಗಿದೆ. ಆದರೆ, ಇಲ್ಲಿಯವರೆಗೂ ಮಾಹಿತಿ ಪತ್ತೆಯಾಗಿಲ್ಲ.