ಗಂಡನ ಎದುರೇ ಪ್ರಿಯಕರನೊಂದಿಗೆ ಲವ್ವಿ ಡವ್ವಿ – ಮಗನೊಂದಿಗೆ ಕೆರೆಗೆ ಹಾರಿದ ಪತಿ

ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಪಿಟ್ಟೆಕೊಪ್ಪಲು ಗ್ರಾಮದಲ್ಲಿ 6 ವರ್ಷದ ಮಗುವನ್ನು ಕೊಂದು ವ್ಯಕ್ತಿ ತಾನು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆಗೆ ತಿರುವು ಸಿಕ್ಕಿದ್ದು, ಪತ್ನಿಯ ಅಕ್ರಮ ಸಂಬಂಧವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.

ಜ.13 ರಂದು ಪಿಟ್ಟೆಕೊಪ್ಪಲು ಗ್ರಾಮದ ಗಂಗಾಧರ್ ತನ್ನ ಮಗ ಜಶ್ವಿತ್ (6) ಜೊತೆಗೆ ಕೆರೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತನ ಪತ್ನಿ ಸಿಂಧು, ನಂಜುಂಡೇಗೌಡ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದರು ಎನ್ನಲಾಗಿದೆ. ನಂಜುಂಡೇಗೌಡನಿಗೆ ಸಿಂಧು ಅಕ್ಕನ ಮಗಳಾಗಬೇಕು. ಈ ವಿಷಯವನ್ನು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಗಂಗಾಧರ್ ಎಳೆ ಎಳೆಯಾಗಿ ತಿಳಿಸಿದ್ದಾನೆ.

ಗಂಗಾಧರ್ ವೀಡಿಯೋದಲ್ಲಿ ತನ್ನ ಹೆಂಡತಿ ಸಿಂಧುವಿನ ಅಕ್ರಮ ಸಂಬಂಧ ಹಾಗೂ ಆಕೆ ನೀಡುತ್ತಿದ್ದ ಕಿರುಕುಳವನ್ನು ಹೇಳಿಕೊಂಡಿದ್ದಾನೆ. 8 ವರ್ಷಗಳ ದಾಂಪತ್ಯ ಜೀವನದಲ್ಲಿ ಕಳೆದೆರಡು ವರ್ಷದಿಂದ ಬಿರುಕು ಮೂಡಿತ್ತು ಎಂದು ಗಂಗಾಧರ್ ಹೇಳಿದ್ದಾನೆ. ನಂಜುಂಡೇಗೌಡನ ಮೋಹಕ್ಕೆ ಬಿದ್ದು ಪತಿ, ಮಗು ಬಗೆಗಿನ ಕಾಳಜಿಯನ್ನು ಸಿಂಧು ಮರೆತಿದ್ದಳು. ಪ್ರತಿನಿತ್ಯ ನಂಜುಂಡೇಗೌಡನ ಜೊತೆ ಮಾತುಕತೆಯಲ್ಲೇ ಸಿಂಧು ತೊಡಗಿದ್ದಳು.

ಕಳೆದ ಹಲವು ವರ್ಷಗಳ ಹಿಂದೆ ನಂಜುಂಡೇಗೌಡನ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಈ ಆತ್ಮಹತ್ಯೆಗೆ ನಂಜುಂಡೇಗೌಡನ ನಡತೆಯೇ ಕಾರಣ ಎಂಬ ಆರೋಪವು ಸಹ ಇದೆ. ಹೆಂಡತಿ ಆತ್ಮಹತ್ಯೆ ಬಳಿಕ ಗಂಗಾಧರ್ ಪತ್ನಿ ಸಿಂಧು ಜೊತೆ ನಂಜುಂಡೇಗೌಡ ಅಕ್ರಮ ಸಂಬಂಧವಿಟ್ಟುಕೊಂಡಿದ್ದ. ವಿವಾಹಿತೆ ಸಿಂಧುಳಿಗೆ ಐಷಾರಾಮಿ ಬದುಕಿನ ಆಮಿಷ ತೋರಿಸಿ ನಂಜುಂಡೇಗೌಡ ಪಾಟಯಿಸಿಕೊಂಡಿದ್ದ.

ಯಾರೂ ಇಲ್ಲದ ವೇಳೆ ಗಂಗಾಧರ್ ಮನೆಗೆ ನಂಜುಂಡೇಗೌಡ ಬಂದು ಸಿಂಧು ಜೊತೆ ಕಾಲ ಕಳೆದು ಹೋಗುತ್ತಿದ್ದ. ಸಿಂಧು ಸದಾ ಫೋನ್‌ನಲ್ಲಿ ಬ್ಯುಸಿಯಾಗಿ ಇರುತ್ತಿದ್ದಳು. ನಂಜುಂಡೇಗೌಡ ಜೊತೆ ಸಿಂಧು ವೀಡಿಯೋ ಕಾಲ್ ಮಾಡುತ್ತಿದ್ದಳು. ಇದನ್ನು ಕಂಡ ಪತಿ ಗಂಗಾಧರ್ ಪತ್ನಿ ಸಿಂಧು ವರ್ತನೆಯನ್ನು ಪ್ರಶ್ನಿಸಿದ ವೇಳೆ ಸಿಂಧು ಮತ್ತು ನಂಜುಂಡೇಗೌಡ ಬೆದರಿಕೆ ಹಾಕಿದ್ದರು. ಆಸ್ತಿ ಭಾಗ ಮಾಡಿ, ಹೆಂಡತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಠಾಣೆಗೆ ದೂರು ನೀಡುತ್ತೇವೆ. ಇಲ್ಲ ನಿನ್ನ ಮತ್ತು ಮಗನನ್ನು ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.

ಪತ್ನಿ ಹಾಗೂ ಪ್ರಿಯಕರನ ನಿರಂತರ ಕಿರುಕುಳಕ್ಕೆ ಬೇಸತ್ತು ಹಾಗೂ ಮರ್ಯಾದೆಗೆ ಅಂಜಿ 6 ವರ್ಷದ ಮಗನೊಂದಿಗೆ ಗಂಗಾಧರ್ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ. ಅಂದು ನಿದ್ರಾವಸ್ತೆಯಲ್ಲಿದ್ದ ತನ್ನ ಮಗನ ಮುಖಕ್ಕೆ ಬಟ್ಟೆ ಕಟ್ಟಿ ಗಂಗಾಧರ್ ಮಗನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಡೆತ್‌ನೋಟ್ ಹಾಗೂ ವಿಡಿಯೋದಲ್ಲಿ ತನಗೆ ಆಗಿರುವ ಅನ್ಯಾಯ ಮತ್ತು ಕಿರುಕುಳದ ಬಗ್ಗೆ ವಿವರವಾಗಿ ತಿಳಿಸಿದ್ದಾನೆ. ಇದನ್ನೂ ಓದಿ: UP Election – ಅಮಿತ್ ಶಾ ಮನೆ-ಮನೆ ಪ್ರಚಾರ

ಡೆತ್‌ನೋಟ್ ಹಾಗೂ ವೀಡಿಯೋದಲ್ಲಿ ಗಂಗಾಧರ್, ನನ್ನ ಮತ್ತು ಮಗನ ಸಾವಿಗೆ ಪತ್ನಿ ಸಿಂಧು ಹಾಗೂ ನಂಜುಂಡೇಗೌಡ ಕಾರಣ. ಅವರ ವಿರುದ್ಧ ಕಾನೂನು ಕ್ರಮಕೈಗೊಂಡು ನಮ್ಮ ಸಾವಿಗೆ ನ್ಯಾಯ ಕೊಡಿಸಿ ಎಂದು ಗಂಗಾಧರ್ ಮನವಿ ಮಾಡಿದ್ದಾನೆ.

POLICE JEEP

ಆತ್ಮಹತ್ಯೆ ಮಾಡಿಕೊಂಡ ದಿನ ಕೆರೆಯಲ್ಲಿ ಮೃತದೇಹ ಹುಡುಕಾಟ ನಡೆಸಿದ ವೇಳೆ ತಾನೂ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದ ಸಿಂಧು, ಅಗ್ನಿ ಶಾಮಕ ದಳದ ಸಿಬ್ಬಂದಿ ಮೃತದೇಹ ಹುಡುಕುತ್ತಿದ್ದ ವೇಳೆ ಕೆರೆಗೆ ಹಾರಿದ್ದಾಳೆ. ಬಳಿಕ ಸ್ಥಳೀಯರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸಿಂಧು ರಕ್ಷಣೆ ಮಾಡಿದ್ದಾರೆ. ಇದನ್ನೂ ಓದಿ: UP Election: ಭಾರತದ ಅತಿ ಎತ್ತರದ ಮನುಷ್ಯ ಸಮಾಜವಾದಿ ಪಕ್ಷ ಸೇರ್ಪಡೆ

ಇದೀಗ ಮೃತ ಗಂಗಾಧರ್ ಅಣ್ಣ ನೀಡಿರುವ ದೂರಿನ ಹಿನ್ನೆಲೆ ಆರೋಪಿ ಸಿಂಧುವನ್ನು ಪೊಲೀಸರು ಬಂಧಿಸಿದ್ದು, ಸದ್ಯ ತಲೆಮರೆಸಿಕೊಂಡಿರುವ ನಂಜುಂಡೇಗೌಡನಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಈ ಸಂಬಂಧ ಬಿಂಡಿಗನವೀಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *