ಆಸ್ತಿಗಾಗಿ ಮಕ್ಕಳ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆಗೆ ಸಂಚು!

ಬೆಂಗಳೂರು: ಆಸ್ತಿಗಾಗಿ ಪತ್ನಿಯೇ ತನ್ನ ಪತಿಯನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ಮಾಡಿದ ಪ್ರಕರಣವೊಂದು ಬೆಳಕಿಗೆ ಬಂದಿದೆ.

ರಾಮಚಂದ್ರ(48) ಕಿಡ್ನಾಪ್ ಆಗಿದ್ದ ಪತಿ. ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳು ಹಾಗೂ ಸಂಬಂಧಿಕರ ಜೊತೆ ಸೇರಿ ಗಂಡನನ್ನು ಕಿಡ್ನಾಪ್ ಮಾಡಿ ಕೊಲೆಗೆ ಸಂಚು ರೂಪಿಸಿದ್ದು, ಈಗ ಎಚ್‍ಎಎಲ್ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ಇದೇ ತಿಂಗಳ 5ರಂದು ಪತ್ನಿ ಮುನಿರತ್ನಮ್ಮ ತನ್ನ ಮಕ್ಕಳ ಜೊತೆ ಸೇರಿಕೊಂಡು ಪತಿ ರಾಮಚಂದ್ರನ ಕಿಡ್ನಾಪ್ ಮಾಡಿದ್ದಾಳೆ. ಹೆಚ್‍ಎಎಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಮೇಶ್ ನಗರ ಸಮೀಪ ನಿರ್ಜನ ಪ್ರದೇಶದಲ್ಲಿ ಕಿಡ್ನಾಪ್ ಮಾಡಲಾಗಿತ್ತು. ನಂತರ ಬೊಮ್ಮಸಂದ್ರದ ಕಿತ್ತಗಾನ್ ಹಳ್ಳಿಯಲ್ಲಿ ರೂಮ್ ಒಂದರಲ್ಲಿ ಕೂಡಿ ಹಾಕಿ ರಾಡ್ ನಿಂದ ಹಲ್ಲೆ ಮಾಡಿದ್ದಾರೆ. ಆಸ್ತಿ ಪತ್ರಕ್ಕೆ ಸಹಿ ಹಾಕುವಂತೆ ಪತ್ನಿ, ಮಕ್ಕಳು ಹಾಗೂ ಬಾಮೈದ ಟಾರ್ಚರ್ ನೀಡಿದ್ದಾರೆ.

ರಾಮಚಂದ್ರನನ್ನು ಈ ರೀತಿ ಕಿರುಕುಳ ನೀಡುತ್ತಿರುವುದ್ದನ್ನು ನೋಡಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಪೊಲೀಸರು ಕಿಡ್ನಾಪ್ ಆಗಿದ್ದ ರಾಮಚಂದ್ರನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಆಸ್ಪತ್ರೆಯಲ್ಲಿ ರಾಮಚಂದ್ರಗೆ ಚಿಕಿತ್ಸೆ ನೀಡಲಾಗ್ತಿದೆ.

ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೆಚ್‍ಎಎಲ್ ಠಾಣಾ ಪೊಲೀಸರು ಪತ್ನಿ ಹಾಗೂ ಮಕ್ಕಳನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *