ಜೈಲಲ್ಲಿ ದರ್ಶನ್‌ ಸ್ಥಿತಿ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರು

– ಪತ್ನಿ ವಿಜಯಲಕ್ಷ್ಮಿ ಮುಂದೆ ದಾಸನ ಗೋಳಾಟ
-ಹಣೆಬರಹದಲ್ಲಿ ಇದ್ದಂಗೆ ಆಗುತ್ತೆ, ಜೈಲಿಗೆ ಬರಬೇಡ ಎಂದು ಪತ್ನಿಗೆ ಹೇಳಿದ ದರ್ಶನ್‌

ಬೆಂಗಳೂರು: ರೇಣುಕಾಸ್ವಾಮಿ ಕೇಸ್‌ಲ್ಲಿ (Renukaswamy Case) ಎರಡನೇ ಬಾರೀ ಜೈಲು ಸೇರಿರುವ ನಟ ದರ್ಶನ್‌ಗೆ ಒಂದರ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಿದೆ. ಸೌಲಭ್ಯದಿಂದ ವಂಚಿತರಾಗಿ ಪರಿತಪಿಸುತ್ತಿರುವ ಪತಿಯ ಕಂಡು ಪತ್ನಿ ವಿಜಯಲಕ್ಷ್ಮಿ ಕಣ್ಣೀರಿಟ್ಟಿದ್ದಾರೆ.

ಪರಪ್ಪನ ಅಗ್ರಹಾರ ಜೈಲು ಸೇರಿದಾಗಿನಿಂದಲೂ ನಟ ದರ್ಶನ್‌ಗೆ ಒಂದಿಲ್ಲೊಂದು ಸಮಸ್ಯೆ ಕಾಡುತ್ತಲೇ ಇದೆ. ಹಾಸಿಗೆ, ದಿಂಬು ಇಲ್ಲದೇ ಪರದಾಡುವಂತಾಗಿದ್ದು, ಜೈಲಧಿಕಾರಿಗಳ ಮುಂದೆ ಅಂಗಲಾಚಿದರೂ ಕೂಡ ಏನು ಲಾಭವಿಲ್ಲ. ಇನ್ನೂ ಕೂರಲು ಖುರ್ಚಿಯೂ ಇಲ್ಲದೇ ಒದ್ದಾಡುವಂತಾಗಿದೆ. ಜೊತೆಗೆ ದೇಹಕ್ಕೆ ಆಕ್ಟಿವಿಟಿಯಿಲ್ಲದೆ ಕಷ್ಟವಾಗುತ್ತಿದೆ ಎಂದು ವಿಜಯಲಕ್ಷ್ಮಿ ಮುಂದೆ ಸಂಕಷ್ಟ ತೋಡಿಕೊಂಡಿದ್ದಾರೆ.ಇದನ್ನೂ ಓದಿ: ಪ್ರಿಯಕರ ಸ್ನೇಹಿತೆಯೊಟ್ಟಿಗೆ ಓಯೋ ರೂಂನಲ್ಲಿ ಇದ್ದಿದ್ದನ್ನ ಕಂಡು ಮನನೊಂದು ಮಹಿಳೆ ಆತ್ಮಹತ್ಯೆ

ಇತ್ತ ಪತ್ನಿ ವಿಜಯಲಕ್ಷ್ಮಿ ಜೈಲಿಗೆ ಬರಲು ಕಷ್ಟ ಎದುರಿಸುವಂತಾಗಿದೆ. ಜೈಲಿಗೆ ಬಂದು ಗಂಟೆಗಟ್ಟಲೇ ಕಾದು ಬಳಿಕ ದರ್ಶನ್ ಭೇಟಿಯಾಗಬೇಕು. ಹೀಗಾಗಿ ನಟ ದರ್ಶನ್ ನಮ್ಮ ಹಣೆಬರಹ ಇರೋಹಂಗೆ ಆಗುತ್ತೆ. ನೀನು ಇನ್ಮುಂದೆ ಜೈಲಿಗೆ ಬರಬೇಡ ಎಂದು ಹೇಳಿಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ. ಜೊತೆಗೆ ಜೈಲಲ್ಲಿ ದರ್ಶನ್ ಕೂಡ ಕಷ್ಟ ಅನುಭವಿಸುತ್ತಿದ್ದು, ಇದನ್ನು ಕಂಡು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.

ಇನ್ನೂ ಪ್ರಕರಣದ ಸಹ ಆರೋಪಿಗಳು ಕೂಡ ದರ್ಶನ್ ವಿರುದ್ಧ ಮುನಿಸಿಕೊಂಡಿದ್ದಾರೆ. ದರ್ಶನ್ ಮಾತು, ಸ್ನೇಹ ಅಷ್ಟಕಷ್ಟೇ ಎನ್ನುತ್ತಿದ್ದಾರೆ.

ಸುಪ್ರೀಂಕೋರ್ಟ್ ಆದೇಶದ ಬಳಿಕ ಮತ್ತೆ ಜೈಲುಪಾಲಾಗಿರುವ ಡಿ-ಗ್ಯಾಂಗ್‌ನ ಆರೋಪಿಗಳು ಪರದಾಡುವಂತಾಗಿದೆ. ಯಾವುದೇ ರಾಜಾತಿಥ್ಯ ನೀಡುವಂತಿಲ್ಲ. ಸಾಮಾನ್ಯ ಖೈದಿಗಳಂತೆ ಸೌಲಭ್ಯ ನೀಡಬೇಕು ಎಂದು ಕಟ್ಟುನಿಟ್ಟಿನ ಆದೇಶ ನೀಡಿತ್ತು.ಇದನ್ನೂ ಓದಿ: Belagavi | ಉರುಸ್ ಮೆರವಣಿಗೆಯಲ್ಲಿ ‘ಐ ಲವ್ ಮುಹಮ್ಮದ್’ ಘೋಷಣೆ – ಪ್ರಶ್ನಿಸಿದ್ದಕ್ಕೆ ಕಲ್ಲು ತೂರಾಟ