ಬಾಯ್‍ಫ್ರೆಂಡ್‍ಗಳ ಜೊತೆ ಪತ್ನಿ ಸುತ್ತಾಟ- 10 ವರ್ಷದ ಮಗನೊಂದಿಗೆ ಗಂಡ ಕಂಗಾಲು

ಬೆಂಗಳೂರು: ಪತ್ನಿಯೊಬ್ಬಳು ಗಂಡನ ಶ್ರಮದ ಹಣದಲ್ಲೇ ಬಾಯ್ ಫ್ರೆಂಡ್‍ಗಳ ಜೊತೆ ತಿರುಗುತ್ತಿದ್ದ ಪ್ರಕರಣವೊಂದು ಬೆಂಗಳೂರಿನ ಗುಂಜೂರಿನಲ್ಲಿ ಬೆಳಕಿಗೆ ಬಂದಿದೆ.

ಮಹಿಳೆಗೆ ಮದುವೆಯಾಗಿ ಮಗ ಇದ್ದರೂ ಕೂಡ ಆಕೆ ಕ್ಯಾರೇ ಎನ್ನದೇ ಬಾಯ್ ಫ್ರೆಂಡ್‍ಗಳ ಜೊತೆ ವಾರಗಟ್ಟಲೆ ತಿರುಗಾಡುತ್ತಿರುತ್ತಾಳೆ. ಮಹಿಳೆಯ ಈ ವರ್ತನೆಗೆ ಗಂಡ ಹಾಗೂ 10 ವರ್ಷದ ಮಗ ಕಂಗಾಲಾಗಿದ್ದಾರೆ. ಅಲ್ಲದೇ ಅಮ್ಮನ ಬಾಯ್ ಫ್ರೆಂಡ್‍ಗಳ ಸಹವಾಸವನ್ನು ಮಗ ಎಳೆ ಎಳೆಯಾಗಿ ಹೇಳುತ್ತಾನೆ.

ಮಹಿಳೆ ಮದುವೆ ಆಗಿ 10 ವರ್ಷ ಸಂಸಾರ ಮಾಡಿದ ಗಂಡನ ಜೊತೆ ಕಣ್ಣಾಮುಚ್ಚಾಲೆ ಆಡುತ್ತಿದ್ದಾಳೆ. ಅಲ್ಲದೇ ತನ್ನ ಪತಿ ಬೇರೆ ರಾಜ್ಯಕ್ಕೆ ಕೆಲಸಕ್ಕೆಂದು ಹೋದಾಗ ಮಹಿಳೆ ಪರಪುರಷರ ಜೊತೆ ತಿರುಗಾಡುತ್ತಿರುತ್ತಾಳೆ. ಈ ಹಿಂದೆ ಪತಿ ಇಲ್ಲದಿದ್ದಾಗ ಮಹಿಳೆ ಬೇರೆ ಪುರಷನೊಂದಿಗೆ ಓಡಿ ಹೋಗಿದ್ದಳು. ಆಗ ಪತಿ, ಕಾಣೆಯಾಗಿರುವ ಪತ್ನಿಯನ್ನು ಹುಡುಕಿಕೊಡಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆ ಸಂದರ್ಭದಲ್ಲಿ ಪೊಲೀಸರು ಪತಿಗೆ ನ್ಯಾಯ ಒದಗಿಸಿದ್ದರು.

ಇತ್ತೀಚೆಗೆ ತಾನು ಕೇರಳಕ್ಕೆ ಕೆಲಸಕ್ಕೆಂದು ಹೋಗಿದ್ದಾಗ ಪತ್ನಿ ಬೇರೋಬ್ಬನ ಜೊತೆ ಹೋಗಿದ್ದಾಳೆಂದು ಪತಿ ಆರೋಪಿಸಿದ್ದಾರೆ. ಸದ್ಯ ತನ್ನ ಪತ್ನಿಯಿಂದ ಮುಕ್ತಿಕೊಡಿಸುವಂತೆ ಪತಿ ಕೇಳಿಕೊಳ್ಳುತ್ತಿದ್ದಾರೆ. ತನ್ನ ಪತ್ನಿಯ ಈ ಆಟದಿಂದ ಮಗನ ಭವಿಷ್ಯಕ್ಕೆ ತೊಂದರೆ ಆಗುತ್ತಿದೆ ಎಂದು ಪತಿ ಕಣ್ಣೀರು ಹಾಕುತ್ತಿದ್ದಾರೆ.

ಈ ಘಟನೆ ಸಂಬಂಧ ಪತಿ ವರ್ತೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ನಾಪತ್ತೆಯಾಗಿರುವ ಮಹಿಳೆಯನ್ನು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *