ಗೆಳೆಯರೊಂದಿಗೆ ಸೆಕ್ಸ್ ಮಾಡುವಂತೆ ಒತ್ತಾಯ – ಪತ್ನಿಯ ಡೆತ್‍ನೋಟಿನಲ್ಲಿ ಗಂಡನ ಹೀನ ಕೃತ್ಯ ಬಯಲು

– ಪತ್ನಿಯ ನಗ್ನ ಫೋಟೋಗಳನ್ನ ಸ್ನೇಹಿತರಿಗೆ ಕಳುಹಿಸ್ತಿದ್ದ
– ಮನನೊಂದು ಪತ್ನಿ ನೇಣಿಗೆ ಶರಣು

ಭೋಪಾಲ್: ವ್ಯಕ್ತಿಯೊಬ್ಬ ಪತ್ನಿಯ ನಗ್ನ ಫೋಟೋವನ್ನು ಕ್ಲಿಕ್ಕಿಸಿಕೊಂಡು ಸ್ನೇಹಿತರಿಗೆ ಕಳುಹಿಸುತ್ತಿದ್ದು, ಅವರೊಂದಿಗೆ ಸೆಕ್ಸ್ ಮಾಡುವಂತೆ ಕಿರುಕುಳ ನೀಡುತ್ತಿದ್ದನು. ಪತಿಯ ಕಿರುಕುಳ ಸಹಿಲಾಗದೆ ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಗ್ವಾಲಿಯರ್ ನಗರದಲ್ಲಿ ಈ ಘಟನೆ ನಡೆದಿದೆ. ಗೋಸ್ಪುರಾ ಪ್ರದೇಶದಲ್ಲಿ ನಿವಾಸಿ ಗೀತಾಗೆ ಒಂದು ವರ್ಷದ ಹಿಂದೆ ರಾಜೀವ್ (ಹೆಸರನ್ನು ಬದಲಾಯಿಸಲಾಗಿದೆ) ಎಂಬಾತನ ಜೊತೆ ಮದುವೆಯಾಗಿತ್ತು. ಆರೋಪಿ ರಾಜೀವ್ ವಿವಾಹವಾದ ಸ್ವಲ್ಪ ದಿನದವರೆಗೂ ಪತ್ನಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದನು.

ದಿನಕಳೆದಂತೆ ಆತ ಪತ್ನಿಯ ನಗ್ನ ಫೋಟೋವನ್ನು ತನ್ನ ಫೋನಿನಲ್ಲಿ ಕ್ಲಿಕ್ಕಿಸಿಕೊಳ್ಳುತ್ತಿದ್ದನು. ನಂತರ ಆ ಫೋಟೋಗಳನ್ನು ಆರೋಪಿ ರಾಜೀವ್ ತನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದನು. ಕೆಲವು ದಿನಗಳ ನಂತರ ಆರೋಪಿ ತನ್ನ ಸ್ನೇಹಿತರೊಂದಿಗೆ ಸೆಕ್ಸ್ ಮಾಡುವಂತೆ ಗೀತಾಳಿಗೆ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಇದಕ್ಕೆ ಪತ್ನಿ ನಿರಾಕರಿಸಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿದ್ದಾನೆ.

ಕೊನೆಗೆ ಪತಿಯ ಕಿರುಕುಳವನ್ನು ಸಹಿಸಲಾಗದೆ ಗೀತಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಆತ್ಮಹತ್ಯೆಗೂ ಮುನ್ನ ಡೆತ್‍ನೋಟಿನಲ್ಲಿ ಪತಿ ನೀಡುತ್ತಿದ್ದ ಕಿರುಕುಳದ ಬಗ್ಗೆ ತಿಳಿಸಿದ್ದಾರೆ. ಮಾಹಿತಿ ತಿಳಿದು ಪೊಲೀಸರು ಸ್ಥಳಕ್ಕೆ ಹೋಗಿ ಡೆತ್‍ನೋಟ್ ವಶಪಡಿಸಿಕೊಂಡು ಆರೋಪಿ ಪತಿಯನ್ನು ಬಂಧಿಸಿದ್ದಾರೆ.

Comments

Leave a Reply

Your email address will not be published. Required fields are marked *