ಮದ್ವೆಯಾಗಿ 3 ಮಕ್ಕಳಿದ್ದರೂ ಪ್ರಿಯಕರನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

ಕೋಲಾರ: ಪ್ರಿಯಕರನ ಜೊತೆ ಸೇರಿ ಪತಿಯನ್ನು ಕೊಲೆ ಮಾಡಿದ ಪತ್ನಿಯನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 28ರಂದು ಕೋಲಾರ ನಗರದ ಮಹಾಲಕ್ಷ್ಮಿ ಬಡವಾಣೆಯಲ್ಲಿ ಸಜಾದ್(28) ಕೊಲೆ ಮಾಡಿದ್ದು, ಸಬೀನಾ ಹಾಗೂ ಆಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಪ್ರಕರಣ?
ಸಜಾದ್ ಉತ್ತರ ಪ್ರದೇಶದ ಮೂಲದವರಾಗಿದ್ದು, ಕೋಲಾರ ನಗರದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿದ್ದನು. ಸಜಾದ್ ಹಾಗೂ ಸಬೀನಾ 10 ವರ್ಷದ ಹಿಂದೆ ಮದುವೆಯಾಗಿದ್ದರು. ಅಲ್ಲದೇ ಇವರಿಬ್ಬರಿಗೆ ಮೂವರು ಮಕ್ಕಳು ಕೂಡ ಇದ್ದಾರೆ.

ಸಬೀನಾ ಹಾಗೂ ಆಕೆಯ ಪ್ರಿಯಕರ, ಸಂಬಂಧಿ ಸಮೀರ್ 14 ವರ್ಷಗಳಿಂದ ಪರಸ್ಪರ ಪ್ರೀತಿಸಿದ್ದರು. ನಂತರ ಸಬೀನಾ, ಸಾಜಾದ್ ನನ್ನು ಮದುವೆಯಾಗಿದ್ದಳು. ಮೂರು ಮಕ್ಕಳಾಗಿದ್ದರೂ ಸಬೀನಾ, ಸಮೀರ್ ಜೊತೆ ಅಕ್ರಮ ಸಂಬಂಧವನ್ನು ಮುಂದುವರೆಸುತ್ತಿದ್ದಳು. ಇದು ಆಕೆಯ ಪತಿಗೆ ಇಷ್ಟವಿರಲಿಲ್ಲ ಹಾಗೂ ಈ ವಿಷಯಕ್ಕಾಗಿ ಪದೇ ಪದೇ ಜಗಳ ನಡೆಯುತಿತ್ತು.

ಸಬೀನಾ ತನ್ನ ಪ್ರಿಯಕರ ಸಮೀರ್ ಜೊತೆ ಸೇರಿಕೊಂಡು ಡಿಸೆಂಬರ್ 28ರಂದು ತನ್ನ ಪತಿ ಸಜಾದ್‍ನ ಉಸಿರುಗಟ್ಟಿಸಿ ನಂತರ ಕತ್ತು ಕೊಯ್ದು ಕೊಲೆ ಮಾಡಿದ್ದಾಳೆ. ಕೊಲೆ ಮಾಡಿದ ಬಳಿಕ ಸಬೀನಾ ಹಾಗೂ ಸಮೀರ್ ತಲೆ ಮರೆಸಿಕೊಂಡಿದ್ದರು. ಕೋಲಾರ ನಗರ ಠಾಣಾ ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಸಬೀನಾ ಹಾಗೂ ಆಕೆಯ ಪ್ರಿಯಕರ ಸಮೀರ್ ನನ್ನು ಬಂಧಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *