ಲವ್ವರ್ ಜೊತೆ ಮದ್ವೆಯಾಗಿ ವಿಡಿಯೋ ಕಳಿಸಿದ ಪತ್ನಿ- ಪತಿ ಆತ್ಮಹತ್ಯೆ

ಮಂಚಿರ್ಯಾಲ್: ವಿವಾಹಿತ ಮಹಿಳೆಯೊಬ್ಬಳು ತನ್ನ ಲವ್ವರ್ ಜೊತೆ ಮದುವೆಯಾದ ಕಾರಣ ಆಕೆಯ ಪತಿ ಆತ್ಮಹತ್ಯೆಗೆ ಶರಣಾದ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಧರ್ಮರಾಜು ಆತ್ಮಹತ್ಯೆಗೆ ಶರಣಾದ ಪತಿ. ಮಂಚಿರ್ಯಾಲ್ ಜಿಲ್ಲೆಯ ದಂಡೇಪಲ್ಲಿ ಮಂಡಲ್ ನಿವಾಸಿಯಾಗಿದ್ದ ಧರ್ಮರಾಜು ಕಳೆದ ವರ್ಷವಷ್ಟೇ ಜಾಗ್ತಿಯಾಲ್ ಜಿಲ್ಲೆಯ ಕನ್ನಾಪುರ್ ಗ್ರಾಮದ ನಾಗಲಕ್ಷ್ಮಿಯನ್ನು ಮದುವೆಯಾಗಿದ್ದರು.

ನಾಗಲಕ್ಷ್ಮೀ ಮದುವೆಗೂ ಮುಂಚೆ ವೆಲ್ಗಟೂರ್ ನ ಮಂತ್ರಿ ಮಹೇಶ್ ಎಂಬವನನ್ನ ಪ್ರೀತಿಸುತ್ತಿದ್ದಳು. ಇತ್ತೀಚೆಗೆ ನಾಗಲಕ್ಷ್ಮೀ ತನ್ನ ತವರು ಮನೆಗೆ ಬಂದಿದ್ದು, ಮಹೇಶ್ ಜೊತೆ ಮದುವೆಯಾಗಿದ್ದಾಳೆ. ಜೊತೆಗೆ ಮಹೇಶ್ ತನಗೆ ತಾಳಿ ಕಟ್ಟುತ್ತಿರುವ ವಿಡಿಯೋವನ್ನ ಪತಿ ಧರ್ಮರಾಜುಗೆ ಕಳಿಸಿದ್ದಾಳೆ. ಇದರಿಂದಾಗಿ ಖಿನ್ನತೆಗೊಳಗಾಗಿದ್ದ ಧರ್ಮರಾಜು ಮಾರ್ಚ್ 9 ರಂದು ಆತ್ಮಹತ್ಯೆಗೆ ಯತ್ನಿಸಿದ್ದು, ಸೋಮವಾರದಂದು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ನಾಗಲಕ್ಷ್ಮಿ ಹಾಗೂ ಮಹೇಶ್ ನ ಮದುವೆ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರು ನಾಗಲಕ್ಷ್ಮಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ನಾಗಲಕ್ಷ್ಮೀ ಮದುವೆಯಾದ ನಂತರ ಯಾವಾಗಲೂ ಮಹೇಶ್ ನೊಂದಿಗೆ ಫೋನಿನಲ್ಲಿ ಮಾತನಾಡುತ್ತಿದ್ದಳು. ಗಂಡನಿಗೆ ಮಾನಸಿಕ ಕಿರುಕುಳ ನೀಡುತ್ತಿದ್ದಳು ಎಂದು ವರದಿಯಾಗಿದೆ. ಅಷ್ಟೇ ಅಲ್ಲದೆ ಪ್ರಿಯಕರ ಮಹೇಶ್ ಕೂಡ ನಾಗಲಕ್ಷ್ಮಿಯೊಂದಿಗೆ ಅಶ್ಲೀಲ ಭಂಗಿಯಲ್ಲಿ ತೆಗೆಸಿಕೊಂಡ ಫೋಟೋ ಹಾಗೂ ವಿಡಿಯೋಗಳನ್ನ ಆಗಾಗ ಧರ್ಮರಾಜುಗೆ ಕಳಿಸುತ್ತಿದ್ದ. ಈ ಬಗ್ಗೆ ಧರ್ಮರಾಜು ಸಂಬಂಧಿಕರು ಮಹೇಶ್‍ನನ್ನು ಪ್ರಶ್ನಿಸಿದಾಗ, ನಾನು ನಾಗಲಕ್ಷ್ಮಿಯನ್ನ ಮದುವೆಯಾಗಿದ್ದೀನಿ. ಧರ್ಮರಾಜು ಸತ್ತರೂ ನಮಗೇನೂ ಚಿಂತೆಯಿಲ್ಲ ಎಂದು ಉತ್ತರಿಸಿದ್ದ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಎಲ್ಲಾ ಘಟನೆಗಳಿಂದ ಖಿನ್ನತೆಗೆ ಒಳಗಾಗಿದ್ದ ಧರ್ಮರಾಜು, ತನ್ನ ಹೊಲದಲ್ಲಿ ಕ್ರಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಚಿಕಿತ್ಸೆ ಫಲಕಾರಿಯಾಗದೆ ಸೋಮವಾರದಂದು ಕೊನೆಯುಸಿರೆಳೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಧರ್ಮರಾಜು ಸಹೋದರ ಸಾತಯ್ಯ ನೀಡರುವ ದೂರಿನನ್ವಯ ಪೊಲೀಸರು ಪ್ರಕರಣ ದಆಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *