ಅಕ್ರಮ ಸಂಬಂಧ ಆರೋಪ – ಪತ್ನಿ ಆತ್ಮಹತ್ಯೆ, ಪತಿ ಅರೆಸ್ಟ್‌, 7 ಮಂದಿ ವಿರುದ್ಧ FIR

ಬೆಂಗಳೂರು: ತನ್ನ ಪತಿ ಅಕ್ರಮ ಸಂಬಂಧ ಹೊಂದಿರುವುದಾಗಿ ಆರೋಪಿಸಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ 7 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಅಲ್ಲದೇ ಮೃತ ಮಹಿಳೆ ಬಾಹರ್‌ ಅಸ್ಮಾ ಪತಿ ಬಶೀರ್‌ ಉಲ್ಲಾನನ್ನ ಹೆಬ್ಬಾಳ ನಗರ ಪೊಲೀಸರು (Hebbal City Police) ಬಂಧಿಸಿದ್ದಾರೆ.

ಬಾಹರ್‌ ಅಸ್ಮಾ ಎಂಬ 29 ವರ್ಷದ ಮಹಿಳೆ, ಕಳೆದ 2 ವರ್ಷಗಳ ಹಿಂದೆ ಬಶೀರ್‌ನನ್ನ ಮದುವೆಯಾಗಿದ್ದರು (Marriage). ಆದ್ರೆ ಬಶೀರ್‌ ಇಲ್ಲಾಗೆ ಬೇರೆ ಯುವತಿ ಜೊತೆಗೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿ ಆತ್ಮಹತ್ಯೆಗೆ ಶರಣಾಗಿದ್ದರು. ಮನೆಯ ಶೌಚಾಲಯದಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಅಸ್ಮಾಳ ಶವ ಪತ್ತೆಯಾಗಿತ್ತು. ಇದನ್ನೂ ಓದಿ: 19ರ ಯುವತಿಯ ಕಿಡ್ನ್ಯಾಪ್‌ – 22 ಮಂದಿ ಕಾಮುಕರಿಂದ ದಿನವಿಡೀ ಗ್ಯಾಂಗ್‌ ರೇಪ್‌

ASMA

ಈ ಸಂಬಂಧ ಅಸ್ಮಾ ತಂದೆ ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇಂದು ಪತಿ ಬಶೀರ್‌ನನ್ನ ಬಂಧಿಸಿದ್ದಾರೆ. ಬಳಿಕ ಬಶೀರ್‌ ವಿಚಾರಣೆ ನಡೆಸಿದಾಗ ಈತನ ಕಿರುಕುಳಕ್ಕೆ ಅಸ್ಮಾ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ವಿಚಾರಣೆ ಬಳಿಕ ಬಶೀರ್‌ ಸೇರಿ 7 ಮಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಇದನ್ನೂ ಓದಿ: ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ದಾಳಿ – ಕಾವೇರಿ ನಿಗಮದ ಇಂಜಿನಿಯರ್ ಲಾಕ್

ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಬಶೀರ್ ಉಲ್ಲಾ, ಜಬೀನ್ ತಾಜ್, ಹರ್ಷದ್ ಉಲ್ಲಾ, ಮಜರ್ ಖಾನ್, ತರ್ಬೇಜ್ ಖಾನ್, ಹರ್ಷಿಯಾ, ನೌಶದ್ ಎಂಬುವವರ ವಿರುದ್ಧ ಕೇಸ್‌ ದಾಖಲಿಸಲಾಗಿದೆ. ಪ್ರಕರಣದ ಸಂಬಂಧ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಆರೇ ತಿಂಗಳಲ್ಲಿ ತಂದುಕೊಡ್ತೀನಿ – 2.45 ಲಕ್ಷ ರೂ. ಕದ್ದು ಪತ್ರ ಬರೆದಿಟ್ಟು ಹೋದ ಕಳ್ಳ!