ಜಮೀರ್, ರೆಹಮಾನ್ ಹೆಸ್ರು ಪ್ರಸ್ತಾಪವಾಗಿದ್ದರೂ ವಶಕ್ಕೆ ಪಡೆದಿಲ್ಲ ಯಾಕೆ?

ಬೆಂಗಳೂರು: ಐಎಂಎ ಕೇಸಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಥಳಕು ಹಾಕಿತ್ತಾ ಎಂಬ ಅನುಮಾನವೊಂದು ಕಾಡುತ್ತಿದೆ. ಯಾಕಂದ್ರೆ ಜುಲೈ 19ರಂದು ನೋಟಿಸ್ ನೀಡಿದೆ. ಆದರೆ ಅದಕ್ಕೂ ಮೊದಲೇ ರೋಷನ್ ಬೇಗ್ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದ್ಯಾಕೆ ಅನ್ನೋ ಪ್ರಶ್ನೆ ಎದ್ದಿದೆ.

ರೋಷನ್ ಬೇಗ್ ಅವರು ಹೊರ ರಾಜ್ಯ ಅಥವಾ ವಿದೇಶ ಪ್ರವಾಸಕ್ಕೆ ನಿರ್ಬಂಧ ಇತ್ತಾ. ಐಎಂಎ ಕೇಸ್ ನಲ್ಲಿ ಈಗಾಗಲೇ ಜಮೀರ್ ಅಹಮ್ಮದ್, ರೆಹಮಾನ್ ಖಾನ್ ಹೆಸರು ಪ್ರಸ್ತಾಪ ಆಗಿದ್ದರೂ ಕೂಡ ಅವರನ್ನು ಯಾಕೆ ಎಸ್‍ಐಟಿ ವಶಕ್ಕೆ ಪಡೆದಿಲ್ಲ ಎಂಬುದರ ಕುರಿತು ಇದೀಗ ಭಾರೀ ಚರ್ಚೆಯಾಗುತ್ತಿದೆ.

ಗುರುವಾರ ವಿಶ್ವಾಸಮತ ಯಾಚನೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ರೋಷನ್ ಬೇಗ್ ಎಸ್‍ಐಟಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿರುವ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ನಡೆಯುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿದೆ.

ರೋಷನ್ ಬೇಗ್ ಅವರು ಇತ್ತೀಚೆಗಷ್ಟೇ ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಒಂದು ಮೂಲದ ಪ್ರಕಾರ ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸರ್ಕಾರದ ಪರ ಮತಚಲಾಯಿಸಿ ಎಂದು ಕೇಳಿಕೊಂಡಿದ್ದರು. ಒಂದು ವೇಳೆ ಬೇಗ್ ಇದಕ್ಕೆ ಒಪ್ಪಿಕೊಳ್ಳುತ್ತಿದ್ದರೆ ಅವರಿಗೆ ಈ ವಿಚಾರಣೆಯಿಂದ ಮುಕ್ತಿ ಸಿಗುವ ಸಾಧ್ಯತೆಗಳಿತ್ತು. ಆದರೆ ಆ ಡೀಲ್ ಅನ್ನು ಬ್ರೇಕ್ ಮಾಡಿ ಬೇಗ್ ಮುಂಬೈಗೆ ಹೊರಟಿದ್ದರು. ಹೀಗಾಗಿ ಅವರನ್ನು ಎಸ್‍ಐಟಿ ವಶಕ್ಕೆ ಪಡೆದಿದೆ ಎಂಬುದಾಗಿ ತಿಳಿದುಬಂದಿದೆ. ಒಟ್ಟಿನಲ್ಲಿ ಐಎಂಎ ಕೇಸ್ ನಲ್ಲಿ ಮಾಜಿ ಸಚಿವ ರೋಷನ್ ಬೇಗ್ ವಶದ ಹಿಂದೆ ರಾಜಕೀಯ ಕೈವಾಡವಿದೆ ಎಂದು ಹೇಳಲಾಗುತ್ತಿದೆ.

ಎಸ್‍ಐಟಿ ಮುಂದಿವೆ 8 ಪ್ರಶ್ನೆಗಳು:
1. ರೋಷನ್ ಬೇಗ್ ಆರೋಪಿಯೋ..? ಸಾಕ್ಷಿದಾರನೋ..?
2. ರೋಷನ್ ಬೇಗ್‍ಗೆ ಹೊರ ರಾಜ್ಯ, ದೇಶ ಪ್ರವಾಸ ನಿರ್ಬಂಧವಿತ್ತಾ…?
3. ವಿಚಾರಣೆಗೆ ಹಾಜರಾಗಲು ಬೇಗ್‍ಗೆ ಕಾಲಾವಕಾಶ ನೀಡಿದ್ರಾ…?
4. ಜುಲೈ 19ರಂದು ಕಾಲಾವಕಾಶ ನೀಡಿಯೂ ವಶಕ್ಕೆ ಪಡೆದಿದ್ದು ಏಕೆ…?
5. ಕಾಲಾವಕಾಶ ನೀಡಿದ ಹಿಂಬರಹದಲ್ಲಿ ಹೊರರಾಜ್ಯ ಪ್ರಯಾಣ ಉಲ್ಲೇಖ ಇರಲಿಲ್ಲವಾ..?
6. ಮನ್ಸೂರ್ ಅಲಿಖಾನ್ ಹೆಸರಿಸಿದ ಉಳಿದವರಿಗೆ ನೋಟೀಸ್ ನೀಡಿಲ್ಲ ಏಕೆ…?
7. ಬೇಗ್ ತರಹನೇ ಜಮೀರ್, ರೆಹಮಾನ್ ಖಾನ್ ವಶಕ್ಕೆ ಏಕೆ ಪಡೆದಿರಲಿಲ್ಲ….?
8. ಬೇಗ್ ರೀತಿಯೇ ಬೇರೆಯವರಿಗ್ಯಾಕೆ ನೋಟಿಸ್ ನೀಡಲಿಲ್ಲ

Comments

Leave a Reply

Your email address will not be published. Required fields are marked *