ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಂ ಆಟಗಾರರು ಏಕಿಲ್ಲ: ವೈರಲ್ ಆಗಿದೆ ಹರ್ಭಜನ್ ಉತ್ತರ

ನವದೆಹಲಿ: ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲಿಂ, ಹಿಂದೂ, ಸಿಖ್ ಎಂದು ಆಯ್ಕೆ ಮಾಡುವುದಿಲ್ಲ. ತಂಡದ ಪ್ರತಿಯೊಬ್ಬ ಆಟಗಾರನೂ ತನ್ನ ಸಾಮರ್ಥ್ಯದ ಮೇಲೆ ಆಯ್ಕೆಯಾಗಿರುವುದೇ ಹೊರತು ಜಾತಿ, ಧರ್ಮದಿಂದಲ್ಲ ಎಂದು ಭಾರತದ ತಂಡದ ಆಫ್ ಸ್ಪೀನ್ ಬೌಲರ್ ಹರ್ಭಜನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರು ಏಕಿಲ್ಲ ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದ ನಿವೃತ್ತ ಐಪಿಎಸ್ ಅಧಿಕಾರಿಗೆ ಹರ್ಭಜನ್ ಸಿಂಗ್ ಟ್ವೀಟ್ ಮಾಡಿ ಟಾಂಗ್ ಕೊಟ್ಟಿದ್ದಾರೆ.

ಗುಜರಾತ್ ನಿವೃತ್ತ ಐಪಿಎಸ್ ಅಧಿಕಾರಿಯಾಗಿರುವ ಸಂಜೀವ್ ಭಟ್ ಈ ಬಗ್ಗೆ ತಮ್ಮ ಟ್ವಿಟ್ಟರ್ ನಲ್ಲಿ ಭಾರತ ತಂಡದಲ್ಲಿ ಮುಸ್ಲಿಂ ಆಟಗಾರರು ಯಾಕಿಲ್ಲ? ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಹೀಗೆ ಎಷ್ಟು ಬಾರಿ ಆಗಿದೆ. ಮುಸ್ಲಿಂಮರು ಕ್ರಿಕೆಟ್ ಆಡುವುದನ್ನು ಬಿಟ್ಟಿದ್ದರ ಎಂದು ಪ್ರಶ್ನಿಸಿದ್ದರು.

ಇದಕ್ಕೆ ಉತ್ತರಿಸಿ ಟ್ವೀಟ್ ಮಾಡಿದ ಹರ್ಭಜನ್ ಸಿಂಗ್ ತಂಡದಲ್ಲಿ ಪ್ರತಿಯೊಬ್ಬ ಆಟಗಾರನು ತನ್ನ ಸ್ವಂತ ಸಾಮರ್ಥ್ಯದಿಂದ ಆಯ್ಕೆ ಆಗುತ್ತಾನೆ, ಜಾತಿ, ಧರ್ಮ ಆಧಾರದಲ್ಲಿ ಅಲ್ಲ. ಭಾರತದಲ್ಲಿ ಎಲ್ಲರೂ ಸಹೋದರರಂತೆ ಬಾಳುತ್ತಿದ್ದೇವೆ ಎಂದು ರೀಟ್ವೀಟ್ ಮಾಡಿದ್ದಾರೆ. ಹರ್ಭಜನ್ ರ ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಸುಮಾರು 2 ಸಾವಿರಕ್ಕೂ ಅಧಿಕ ಮಂದಿ ರೀಟ್ವೀಟ್ ಮಾಡಿದ್ದರೆ, 8 ಸಾವಿರಕ್ಕೂ ಅಧಿಕ ಮಂದಿ ಇಷ್ಟ ಪಟ್ಟಿದ್ದಾರೆ.

ಇನ್ನೂ ಭಾರತದ ಒಬ್ಬ ನಿವೃತ್ತ ಅಧಿಕಾರಿಯಾಗಿ ಈ ರೀತಿ ಪ್ರಶ್ನಿಸಿದ್ದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರ ವಿರುದ್ಧ ಹಲವು ಕ್ರಿಕೆಟ್ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಶ್ರೀಲಂಕಾ ವಿರುದ್ಧದ ಟೆಸ್ಟ್ ಹಾಗೂ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಟೀಂ ಇಂಡಿಯಾವನ್ನು ಪ್ರಕಟಗೊಳಿಸಲಾಗಿದ್ದು, ಮಹಮ್ಮದ್ ಸಿರಾಜ್ ಆಯ್ಕೆ ಆಗಿದ್ದಾರೆ. ಸಿರಾಜ್ ಹೈದರಾಬಾದ್ ಮೂಲದ ಆಟೋ ಡ್ರೈವರ್ ಒಬ್ಬರ ಮಗನಾಗಿದ್ದು, ಐಪಿಎಲ್ ಲೀಗ್ 10ನೇ ಆವೃತ್ತಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ 2.6 ಕೋಟಿ ರೂ.ಗೆ ಹರಾಜು ಆಗಿದ್ದರು.

 

Comments

Leave a Reply

Your email address will not be published. Required fields are marked *