ಬಾಂಗ್ಲಾ ಹಿಂದೂಗಳ ವಲಸೆ ಬಗ್ಗೆ ಸಿನಿಮಾ ಯಾಕಾಗಿಲ್ಲ: ಕಾಶ್ಮೀರ್‌ ಫೈಲ್ಸ್‌ಗೆ ಲೇಖಕಿ ತಸ್ಲೀಮಾ ನಸ್ರಿನ್ ಪ್ರತಿಕ್ರಿಯೆ

ಢಾಕಾ: ಕಾಶ್ಮೀರಿ ಪಂಡಿತರ ವಲಸೆಗೆ ಸಂಬಂಧಿಸಿ ಸಿನಿಮಾ ಮಾಡಿರುವಂತೆ ಬಂಗಾಳಿ ಹಿಂದೂಗಳ ವಲಸೆ ಕುರಿತು ಯಾಕೆ ಸಿನಿಮಾ ಮಾಡಿಲ್ಲ ಎಂದು ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರಿನ್‌ ಪ್ರಶ್ನಿಸಿದ್ದಾರೆ.

ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಮಾತನಾಡಿರುವ ಅವರು, ವಿಭಜನೆಯ ಸಮಯದಲ್ಲಿ ಬಾಂಗ್ಲಾದೇಶದಿಂದ ಬಂಗಾಳಿ ಹಿಂದೂಗಳ ವಲಸೆಯ ಕುರಿತು ಯಾವುದೇ ಚಲನಚಿತ್ರ ಏಕೆ ಇಲ್ಲ? ಕಥೆಯು ಶೇ.100 ನಿಜವಾಗಿದ್ದರೆ, ಉತ್ಪ್ರೇಕ್ಷೆಯಿಲ್ಲ. ಅರ್ಧ ಸತ್ಯವಿಲ್ಲದಿದ್ದರೆ ಅದು ನಿಜವಾಗಿಯೂ ದುಃಖದ ಕಥೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ದಿ ಕಾಶ್ಮೀರ್ ಫೈಲ್ಸ್ ಮಾದರಿಯಲ್ಲಿ ಯಾವೆಲ್ಲ ಚಿತ್ರಗಳು ಬರಬೇಕು : ಪ್ರಕಾಶ್ ರೈ ಲಿಸ್ಟ್ ನೋಡಿ

ಕಾಶ್ಮೀರಿ ಪಂಡಿತರು ಕಾಶ್ಮೀರದಲ್ಲಿ ವಾಸಿಸುವ ತಮ್ಮ ಹಕ್ಕನ್ನು ಮರಳಿ ಪಡೆಯಬೇಕು. ಬಾಂಗ್ಲಾದೇಶದ ವಿಭಜನೆ ಸಂದರ್ಭದಲ್ಲಿ ವಲಸೆ ಹೋದ ಹಿಂದೂಗಳ ಬಗ್ಗೆ ಇದುವರೆಗೂ ಯಾಕೆ ಸಿನಿಮಾ ಮಾಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಕೇಳಿದ್ದಾರೆ.

ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಮಾ.11ರಂದು ತೆರೆ ಕಂಡಿತು. ಸಿನಿಮಾ ಈಗ ರಾಜಕೀಯ ದೃಷ್ಟಿಕೋನದಲ್ಲಿ ವಿವಾದಕ್ಕೆ ಸಿಲುಕಿದೆ. ಈ ಬಗ್ಗೆ ವ್ಯಾಪಕ ಚರ್ಚೆಗಳು ಹುಟ್ಟುಕೊಂಡಿವೆ. ಇದನ್ನೂ ಓದಿ: ಗುಜರಾತ್ ಫೈಲ್ಸ್ ಚಿತ್ರಕ್ಕಾಗಿ ಪ್ರಧಾನಿ ಮೋದಿಗೆ ಸವಾಲು ಹಾಕಿದ ಬಾಲಿವುಡ್ ನಿರ್ದೇಶಕ

ಕಾಶ್ಮೀರಿ ಪಂಡಿತರು ವಲಸೆ ಹೋಗುವ ಸಂದರ್ಭದಲ್ಲಿ ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ ಇತ್ತು. ಈ ವೇಳೆ ಕೇಂದ್ರದಲ್ಲಿ ಬಿಜೆಪಿ ಬೆಂಬಲಿತ ವಿ.ಪಿ.ಸಿಂಗ್‌ ಅವರ ಆಡಳಿತ ಇತ್ತು ಎಂದು ಸಿನಿಮಾ ಕುರಿತು ಕಾಂಗ್ರೆಸ್‌ ಟೀಕೆ ವ್ಯಕ್ತಪಡಿಸಿದೆ.

Comments

Leave a Reply

Your email address will not be published. Required fields are marked *