ಧೋನಿಯನ್ನು `ಎ ಪ್ಲಸ್’ ಒಪ್ಪಂದದಿಂದ ಬಿಸಿಸಿಐ ಕೆಳಗಿಳಿಸಿದ್ದು ಯಾಕೆ ಅನ್ನೋದಕ್ಕೆ ಉತ್ತರ ಸಿಕ್ತು

ಮುಂಬೈ: ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಬಿಸಿಸಿಐ ಉನ್ನತ ಶ್ರೇಣಿಯಿಂದ ಕೆಳಗಿಳಿಸಿರುವ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಿದೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು, ಧೋನಿ ಅವರನ್ನು ಉನ್ನತ ಶೇಣಿಯಿಂದ ಕೆಳಗಿಳಿಸಿರುವುದರ ಹಿಂದೆ ಸರಳ ಲಾಜಿಕ್ ಇದ್ದು, ಬಿಸಿಸಿಐ ಒಪ್ಪಂದ ನಿರ್ಣಯದ ವೇಳೆ ಹೆಚ್ಚು ಆಟವಾಡಿ, ಹೆಚ್ಚು ಗಳಿಸಿ ಎಂಬ ನಿಯಮವನ್ನು ಅನುಸರಿಸಿದೆ. ಈ ಕುರಿತು ಬಿಸಿಸಿಐ ಧೋನಿ, ಕೊಹ್ಲಿ ಹಾಗೂ ರವಿಶಾಸ್ತ್ರಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.

ಧೋನಿ ಅವರು ಈಗಾಗಲೇ ಟೆಸ್ಟ್ ಕ್ರಿಕೆಟ್‍ಗೆ ವಿದಾಯ ಘೋಷಿಸಿದ್ದಾರೆ. ಅಲ್ಲದೇ ಅಶ್ವಿನ್ ಹಾಗೂ ಜಡೇಜಾ ಸೀಮಿತ ಓವರ್ ಪಂದ್ಯದ ಸರಣಿಗೆ ಆಯ್ಕೆಯಾಗಲು ವಿಫಲರಾಗಿದ್ದಾರೆ. ಅದ್ದರಿಂದ ಅವರನ್ನು ಎರಡನೇ ಶ್ರೇಣಿ ಆಟಗಾರರ ಸ್ಥಾನ ನೀಡಲಾಗಿದೆ ಎಂದರು.

ಬಿಸಿಸಿಐ ನ ಬಿ ಶ್ರೇಣಿಯಲ್ಲಿ ಸ್ಥಾನ ಪಡೆದಿರುವ ಆಟಗಾರರು ಕ್ರಿಕೆಟ್ ನ ಯಾವುದೇ ಮಾದರಿಯಲ್ಲಿ ಆಡಲು ಆರ್ಹರಾಗಿರುತ್ತಾರೆ. ಅವರನ್ನು ಯಾವ ಮಾದರಿಗೆ ಬೇಕಾದರೂ ಆಯ್ಕೆ ಮಾಡಬಹುದು. ಇನ್ನು ಕಳೆದ ವರ್ಷದಲ್ಲಿ ಟೀಂ ಇಂಡಿಯಾ ಪರ ಕನಿಷ್ಟ ಒಂದು ಪಂದ್ಯದಲ್ಲಿ ಸ್ಥಾನ ಪಡೆದವರನ್ನು ಸಿ ಶ್ರೇಣಿಗೆ ಆಯ್ಕೆ ಮಾಡಲಾಗಿದೆ ಎಂದರು. ಇದನ್ನೂ ಓದಿ: ಧೋನಿಗಿಂತಲೂ ಹೆಚ್ಚು ಸಂಬಳ ಪಡೆಯಲಿದ್ದಾರೆ ಭುವಿ! ಯಾರಿಗೆ ಎಷ್ಟು ಸಂಬಳ? ಇಲ್ಲಿದೆ ಪೂರ್ಣ ಪಟ್ಟಿ

ಕಳೆದ ಬಾರಿ ಉನ್ನತ ಎ ಶ್ರೇಣಿ ಹೊಂದಿದ್ದ ಆಟಗಾರರಿಗೆ ಬಿಸಿಸಿಐ ನೀಡುತ್ತಿದ್ದ ವಾರ್ಷಿಕ 2 ಕೋಟಿ ರೂ. ವೇತನವನ್ನು ಶೇ. 350ರಷ್ಟು ಹೆಚ್ಚಿಸಿ ಎ ಪ್ಲಸ್ ಶ್ರೇಣಿಯಲ್ಲಿ 7 ಕೋಟಿ ರೂ. ನೀಡುತ್ತಿದೆ. ಎರಡನೇ ಶ್ರೇಣಿಗೆ ಶೇ. 500 ರಷ್ಟು ಹೆಚ್ಚಿಸಿ 5 ಕೋಟಿ ರೂ. ವೇತನ ನೀಡುತ್ತಿದೆ.

ಬಿಸಿಸಿಐ ಸಮಿತಿ ಬುಧವಾರ ಬಿಡುಗಡೆಗೊಳಿಸಿದ ಅಕ್ಟೋಬರ್ 20017 ರಿಂದ ಸೆಪ್ಟೆಂಬರ್ 2018 ರ ಆಟಗಾರರ ಗುತ್ತಿಗೆ ಪಟ್ಟಿಯಲ್ಲಿ ಎ ಪ್ಲಸ್ ಶ್ರೇಣಿಯನ್ನು ಸೇರ್ಪಡೆಗೊಳಿಸಿದೆ. ಆದರೆ ಧೋನಿ ಸೇರಿದಂತೆ ಹಿರಿಯ ಸ್ಪಿನ್ ಬೌಲರ್ ಆರ್ ಅಶ್ವಿನ್, ರವೀಂದ್ರ ಜಡೇಜಾ, ಮುರಳಿ ವಿಜಯ್, ಚೇತೇಶ್ವರ ಪೂಜಾರಾ, ಅಜಿಂಕ್ಯ ರಹಾನೆ ಅವರಿಗೆ ಎ ಶ್ರೇಣಿಯಲ್ಲಿ ಸ್ಥಾನ ಕಲ್ಪಿಸಿದೆ.

 

Comments

Leave a Reply

Your email address will not be published. Required fields are marked *