ನನ್ನ ಮೇಲೆ ಮಾತ್ರ ಕ್ರಮ ಯಾಕೆ: ಡ್ರೋನ್‌ ಪ್ರತಾಪ್‌ ಪ್ರಶ್ನೆ

ತುಮಕೂರು: ಬೇರೆಯರ ಮೇಲೆ ಆಗದ ಕ್ರಮ ನನ್ನ ವಿರುದ್ಧ ಮಾತ್ರ ಯಾಕೆ ಆಗಿದೆ ಎಂದು ಡ್ರೋನ್‌ ಪ್ರತಾಪ್‌ (Drone Pratap) ಪ್ರಶ್ನಿಸಿದ್ದಾರೆ.

ನ್ಯಾಯಾಲಯದಿಂದ ಜಾಮೀನು (Bail) ಪಡೆದು ಜೈಲಿನಿಂದ (Jail) ಬಿಡುಗಡೆಯಾದ ಬಳಿಕ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಕೇವಲ 500 ಗ್ರಾಂ ಮಾತ್ರ ಸ್ಫೋಡಿಯಂ ಸ್ಫೋಟ (Sodium Blast) ಮಾಡಿದ್ದೇನೆ. ಅದರೇ ದೇಶದಲ್ಲಿ ಹಲವು ಮಂದಿ ಯೂಟ್ಯೂಬರ್‌ಗಳು 1 ಕೆಜಿಗಿಂತಲೂ ಹೆಚ್ಚಿನ ಸೋಡಿಯಂ ಸ್ಫೋಟ ಮಾಡಿದ್ದಾರೆ. ಯೂಟ್ಯೂಬ್‌ ನೋಡಿದರೆ ವಿಶ್ವದಲ್ಲಿ ಹಲವು ಮಂದಿ ಈ ರೀತಿ ಬ್ಲ್ಯಾಸ್ಟ್‌ ಮಾಡಿದ್ದಾರೆ. ಅವರ ಮೇಲೂ ಆಗದ ಕ್ರಮ ನನ್ನ ಮೇಲೆ ಮಾತ್ರ ಯಾಕೆ ಎಂದು ಕೇಳಿದರು. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ

 

ಅದು ಅರ್ಟಿಫಿಶಿಯಲ್‌ ಪಾಂಡ್‌.  ವಿಜ್ಞಾನ ಪ್ರಯೋಗಕ್ಕೆ ಸಂಬಂಧಿಸಿದಂತೆ ಸ್ಫೋಟ ಮಾಡಿದ್ದೇನೆ ಎಂದು ಯೂಟ್ಯೂಬ್‌ನಲ್ಲೇ ತಿಳಿಸಿದ್ದೇನೆ. ಈ ವಿಚಾರ ಹೈಸ್ಕೂಲ್‌ ಮಕ್ಕಳ ಪಠ್ಯದಲ್ಲಿದೆ. ಯೂಟ್ಯೂಬ್‌ ಓಪನ್‌ ಮಾಡಿದರೆ ಹಲವು ಮಂದಿ ಈ ರೀತಿಯ ಪ್ರಯೋಗ ಮಾಡಿದ್ದಾರೆ.  ಆದರೆ ನನ್ನನ್ನು ಮಾತ್ರ ಬಂಧಿಸಿದ್ದು ಯಾಕೆ? ನನಗೆ ನ್ಯಾಯ ಬೇಕು ಎಂದು ಅಳಲು ತೋಡಿಕೊಂಡರು.

ಸೋಮವಾರ ಡ್ರೋನ್‌ ಪ್ರತಾಪ್‌ಗೆ ಗೆ ಮಧುಗಿರಿಯ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಜಾಮೀನು ಸಿಕ್ಕಿತ್ತು. ಈ ವೇಳೆ 2 ಲಕ್ಷ ರೂ. ಬಾಂಡ್, ಹಾಗೂ ಇಬ್ಬರು ಶ್ಯೂರಿಟಿ ನೀಡಬೇಕು ಎಂದು ಕೋರ್ಟ್‌ ಷರತ್ತು ವಿಧಿಸಿತ್ತು. ಜಾಮೀನು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಇಂದು ಸಂಜೆ ಮಧುಗಿರಿಯ ಉಪ ಕಾರಾಗೃಹದಿಂದ ಡ್ರೋನ್‌ ಪ್ರತಾಪ್ ಬಿಡುಗಡೆಯಾಗಿದ್ದಾರೆ.