ಅಕ್ಕಿ ಕಡಿತ ಮಾಡಿದ್ಯಾಕೆ, ನನಗೆ ಈಗ 2 ಕೆ.ಜಿ. ಅಕ್ಕಿ ಬೇಕು: ಕಾರ್ಯಕ್ರಮದಲ್ಲೇ ಸಚಿವರಿಗೆ ವ್ಯಕ್ತಿಯಿಂದ ಬೇಡಿಕೆ

ಚಿಕ್ಕಬಳ್ಳಾಪುರ: ಅನ್ನಭಾಗ್ಯ ಪಡಿತರದಲ್ಲಿ ಎರಡು 2 ಕೆ.ಜಿ. ಅಕ್ಕಿಯನ್ನು ಕಡಿತ ಮಾಡಿದ್ದು ಯಾಕೆ? ನನಗೆ 2 ಕೆಜಿ ಅಕ್ಕಿ ಬೇಕು ಕೊಡಿ ಎಂದು ಖಾಲಿ ಚೀಲ ಹಿಡಿದು ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ವ್ಯಕ್ತಿಯೊಬ್ಬರು ಕೃಷಿ ಸಚಿವರಿಗೆ ಪ್ರಶ್ನೆ ಮಾಡಿದ್ದಾರೆ.

ಗೌರಿಬಿದನೂರು ತಾಲೂಕಿನ ಕಾಚಮಾಚೇನಹಳ್ಳಿ ಗ್ರಾಮದ ಬೊಮ್ಮಲಿಂಗೇಶ್ವರ ದೇವಾಲಯದ ಆವರಣದಲ್ಲಿ 2018-19 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮವನ್ನು ಕೃಷಿ ಸಚಿವ ಶಿವಶಂಕರ್ ರೆಡ್ಡಿ ಉದ್ಘಾಟಿಸಿದರು. ಈ ವೇಳೆ ಕಾರ್ಯಕ್ರಮದ ಬಳಿ ಬಂದ ಸ್ಥಳೀಯ ವ್ಯಕ್ತಿಯೊರ್ವ ಏಕೆ ಎರಡು ಕೆ.ಜಿ. ಅಕ್ಕಿ ಕಡಿತ ಮಾಡಿದ್ದೀರಿ ಹೇಳಿ ಅಂತ ಪ್ರಶ್ನೆ ಮಾಡಿದ್ರು. ಅಷ್ಟೇ ಅಲ್ಲದೇ ನನಗೆ 2 ಕೆ.ಜಿ ಅಕ್ಕಿ ಕೊಡಲೇ ಬೇಕು ಅಂತಾ ಖಾಲಿ ಚೀಲ ತಂದು ಪ್ರದರ್ಶನ ಮಾಡಿದರು.

ಕಾಯಕ್ರಮದ ಧ್ವನಿವರ್ಧಕದ ಧ್ವನಿಯಿಂದ ವ್ಯಕ್ತಿಯ ಮಾತು ಸಚಿವರ ಕಿವಿಗೆ ಬೀಳಲಿಲ್ಲ. ಅಷ್ಟರಲ್ಲಿಯೇ ಅಲ್ಲೇ ಇದ್ದ ಸ್ಥಳೀಯರು ವ್ಯಕ್ತಿಯನ್ನು ಸಮಾಧಾನ ಪಡಿಸಲು ಯತ್ನಿಸಿದರು. ಕೊನೆಗೆ ಯಾರ ಮಾತನ್ನು ಕೇಳದ ಸ್ಥಿತಿಯಲ್ಲಿದ್ದ ಅವರನ್ನು ಪೊಲೀಸರು ಕಾರ್ಯಕ್ರಮದಿಂದ ಹೊರಗೆ ಕರೆದುಕೊಂಡರು.

https://youtu.be/IdCjm6_9ABA

Comments

Leave a Reply

Your email address will not be published. Required fields are marked *