ಇದ್ದಕ್ಕಿದ್ದಂತೆ ಮೋದಿಯನ್ನ ಯಾಕೆ ಬ್ಲಾಕ್ ಮಾಡ್ತಿದ್ದಾರೆ ಟ್ವಿಟ್ಟರಿಗರು?

ನವದೆಹಲಿ: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಂತರ ಪ್ರಧಾನಿ ನರೇಂದ್ರ ಮೋದಿಯನ್ನ ಹಲವಾರು ಟ್ವಿಟ್ಟರಿಗರು ಬ್ಲಾಕ್ ಮಾಡುವ ಮೂಲಕ ಬ್ಲಾಕ್ ನರೇಂದ್ರ ಮೋದಿ ಎಂಬ ಅಭಿಯಾನ ಶುರುಮಾಡಿದ್ದಾರೆ.

ಈಗಾಗಲೇ #BlockNarendraModi ಹ್ಯಾಶ್‍ಟ್ಯಾಗ್ ಟ್ವಿಟ್ಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ. ಸಾಕಷ್ಟು ಟ್ವಿಟ್ಟರ್ ಬಳಕೆದಾರರು ಮೋದಿಯನ್ನ ಬ್ಲಾಕ್ ಮಾಡಿ ಅದರ ಸ್ಕ್ರೀನ್‍ಶಾಟ್ಸ್ ಹಂಚಿಕೊಳ್ಳುತ್ತಿದ್ದಾರೆ.

ಯಾಕೆ ಬ್ಲಾಕ್ ಮಾಡ್ತಿದ್ದಾರೆ?: ಮಂಗಳವಾರ ರಾತ್ರಿ ಗೌರಿ ಲಂಕೇಶ್ ಹತ್ಯೆಯಾದ ಬಳಿಕ ನಿಖಿಲ್ ದಧೀಚ್ ಎಂಬ ಟ್ವಿಟ್ಟರ್ ಬಳಕೆದಾರರೊಬ್ಬರು ಗೌರಿ ಲಂಕೇಶ್ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. ಒಬ್ಬ ನಾಯಿ ನಾಯಿಯಂತೆ ಸತ್ತಳು, ನಾಯಿಮರಿಗಳು ಈಗ ಒಂದೇ ಸ್ವರದಲ್ಲಿ ಅಳುತ್ತಿವೆ ಎಂದು ಟ್ವೀಟ್ ಮಾಡಿದ್ದರು. ದಧೀಚ್ ಗಾರ್ಮೆಂಟ್ ಉತ್ಪಾದಕರು ಎಂದು ಅವರ ಟ್ವಿಟ್ಟರ್ ಖಾತೆಯಿಂದ ತಿಳಿದುಬಂದಿದೆ. ದಧೀಚ್ ಟ್ವಿಟ್ಟರ್ ಖಾತೆಯನ್ನ ಬಿಜೆಪಿಯ ಅನೇಕ ರಾಜಕಾರಣಿಗಳು ಫಾಲೋ ಮಾಡ್ತಿದ್ದು, ಮೋದಿಯೂ ಅದರಲ್ಲಿ ಒಬ್ಬರಾಗಿದ್ದಾರೆ. ಈ ರೀತಿ ಪೋಸ್ಟ್ ಹಾಕಿದ್ದಕ್ಕೆ ದಧೀಚ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಅವರನ್ನು ಮೋದಿ ಇನ್ನೂ ಯಾಕೆ ಫಾಲೋ ಮಾಡ್ತಿದ್ದಾರೆ ಎಂದು ಹಲವಾರು ಮಂದಿ ಪ್ರಶ್ನಿಸಿದ್ದಾರೆ. ದಧೀಚ್‍ರನ್ನು ಅನ್‍ಫಾಲೋ ಮಾಡಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ.

ಇದಕ್ಕೆ ಪ್ರತಿಭಟನೆಯಾಗಿ ಬುಧವಾರ ರಾತ್ರಿಯಿಂದ ಬ್ಲಾಕ್ ನರೇಂದ್ರ ಮೋದಿ ಅಭಿಯಾನ ಶುರುವಾಗಿದ್ದು, ಇಂದು ಟ್ರೆಂಡಿಂಗ್ ಟಾಪಿಕ್ ಆಗಿದೆ. ಮೋದಿಯನ್ನು ಬ್ಲಾಕ್ ಮಾಡಿದ ಅನೇಕರು ಈ ಅಭಿಯಾನದ ಐಡಿಯಾ ಶುರು ಮಾಡಿದ ಡಾ ರಾಕೇಶ್ ಪರೀಕ್ ಎಂಬ ವ್ಯಕ್ತಿಗೆ ಅದನ್ನ ಟ್ಯಾಗ್ ಮಾಡ್ತಿದ್ದಾರೆ. ಪರೀಕ್ ಅವರು ಡಯಾಬೆಟೊಲಾಜಿಸ್ಟ್, ಬ್ಲಾಗರ್ ಹಾಗೂ ಸಾಮಾಜಿಕ ಕಾರ್ಯಕರ್ತ ಎಂದು ಟ್ವಿಟ್ಟರ್ ಖಾತೆಯ ವೈಯಕ್ತಿಕ ಮಾಹಿತಿಯಿಂದ ತಿಳಿದುಬಂದಿದೆ.

ಈ ಸುದ್ದಿ ಬರೆಯುವ ವೇಳೆಗೆ ಮೋದಿ ಅವರ ಟ್ವಿಟ್ಟರ್ ಖಾತೆಗೆ 3,37,62,468 ಫಾಲೋವರ್‍ಗಳಿದ್ದು, ಪಿಎಂ ಆಫ್ ಇಂಡಿಯಾ ಟ್ವಿಟ್ಟರ್ ಖಾತೆಗೆ 2,05,68,483 ಫಾಲೋವರ್‍ಗಳಿದ್ದಾರೆ.

https://twitter.com/amitbehere/status/905520013465059328?ref_src=twsrc%5Etfw&ref_url=http%3A%2F%2Findiatoday.intoday.in%2Fstory%2Fblocknarendramodi-pm-following-twitter-trolls-abusing-gauri-lankesh-prompts-hashtag-in-protest%2F1%2F1042648.html

Comments

Leave a Reply

Your email address will not be published. Required fields are marked *