ಮದುವೆಗೂ ಮುನ್ನ ಧ್ರುವ ಸರ್ಜಾ ಮತ್ತು ಪತ್ನಿ ಯಾರ ಸಿನಿಮಾ ನೋಡುತ್ತಿದ್ದರು?

ಕನ್ನಡದ ಹೆಸರಾಂತ ನಟ ಧ್ರುವ ಸರ್ಜಾ ಮತ್ತು ಪತ್ನಿ ಪ್ರೇರಣಾ ಮದುವೆಗೂ ಮುನ್ನ ಸ್ನೇಹಿತರು. ಶಾಲಾ ಕಾಲೇಜು ದಿನಗಳಿಂದಲೂ ಇವರ ಫ್ರೆಂಡ್ ಶಿಪ್ ಇತ್ತು. ಹಾಗಾಗಿ ಜೊತೆ ಜೊತೆಯಾಗಿಯೇ ಓಡಾಡಿಕೊಂಡಿದ್ದರು. ಅಕ್ಕ ಪಕ್ಕದ ಮನೆಯವರು ಇವರಾಗಿದ್ದರಿಂದ ಅದು ಸಹಜ ಎನ್ನುವಂತಿತ್ತು. ಪ್ರೀತಿಸಿ ಹಲವು ವರ್ಷಗಳ ನಂತರ ಧ್ರುವ ಮತ್ತು ಪ್ರೇರಣಾ ಮದುವೆಯಾದರು. ಮದುವೆಗೂ ಮುನ್ನ ಪತ್ನಿ ಪ್ರೇರಣಾ ಸ್ನೇಹಿತನಾಗಿದ್ದ ಧ್ರುವ ಅವರನ್ನು ಯಾರ ಸಿನಿಮಾಗೆ ಕರೆದುಕೊಂಡು ಹೋಗುತ್ತಿದ್ದರು ಎನ್ನುವುದನ್ನು ಸ್ವತಃ ಧ್ರುವ ಅವರ ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ : ಚಲಿಸುವ ಬೋಟ್ ನಲ್ಲಿ ಚೆಲುವೆ ರಾಧಿಕಾ ಕುಮಾರಸ್ವಾಮಿ

ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾಗೆ ನಟ ಶರಣ್ ಸಿನಿಮಾಗಳೆಂದರೆ ಬಲು ಇಷ್ಟವಂತೆ. ಪದೇ ಪದೇ ಶರಣ್ ಅವರ ಚಿತ್ರಗಳನ್ನು ನೋಡುತ್ತಲೇ ಇರುತ್ತಾರಂತೆ. ಇವರ ಚಿತ್ರಗಳು ರಿಲೀಸ್ ಆದಾಗ ‘ಶರಣ್ ಅವರ ಸಿನಿಮಾ ರಿಲೀಸ್ ಆಗಿದೆ, ಹೋಗೋಣ ಬಾ’ ಎಂದು ಕರೆದುಕೊಂಡು ಹೋಗುತ್ತಿದ್ದರಂತೆ. ಹಾಗಂತ ಶರಣ್ ಅವರ ಎದುರೇ ಧ್ರುವ ಸರ್ಜಾ ಹೇಳಿದರು. ಇದನ್ನೂ ಓದಿ: ಗ್ರ್ಯಾಮಿ ಅವಾರ್ಡ್ ಮ್ಯೂಸಿಕ್ ಕೇಳಿದಾಗ ಬಹಳ ಖುಷಿ ಆಯ್ತು: ಸಿಎಂ ಬೊಮ್ಮಾಯಿ

ಶರಣ್ ಅವರ ಹೊಸ ಸಿನಿಮಾ ಅವತಾರಪುರುಷ ಬಿಡುಗಡೆ ಆಗುತ್ತಿದೆ. ಈ ಸಿನಿಮಾದ ಇವೆಂಟ್ ಗೆ ಧ್ರುವ ಸರ್ಜಾ ಅತಿಥಿಯಾಗಿ ಬಂದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಧ್ರುವ, ‘ನನ್ನ ಹೆಂಡತಿ ನಿಮ್ಮ ದೊಡ್ಡ ಫ್ಯಾನ್. ನಿಮ್ಮ ಸಿನಿಮಾಗಳನ್ನು ಅವರು ನೋಡುತ್ತಲೇ ಇರುತ್ತಾರೆ. ಅದೆಷ್ಟೋ ಸಿನಿಮಾಗಳನ್ನು ನಾವು ಒಟ್ಟಿಗೆ ಕೂತು ನೋಡಿದ್ದೇವೆ’ ಎಂದರು ಧ್ರುವ.

Comments

Leave a Reply

Your email address will not be published. Required fields are marked *