ಯಾರಿಗೆ ಬೇಕು ‘ಚಿಕನ್ ಕಥಿ ರೋಲ್’ – ಮನೆಯಲ್ಲಿ ಟ್ರೈ ಮಾಡಿ

ಚಿಕನ್ ಎಂದು ಹೆಸರು ಕೇಳಿದರೆ ನಾನ್‍ವೆಜ್ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಮಟನ್‍ಗಿಂತ ಹೆಚ್ಚು ನಾನ್‍ವೆಜ್ ಪ್ರಿಯರು ಚಿಕನ್ ತಿನ್ನುತ್ತಾರೆ. ಅದರಲ್ಲಿಯೂ ಇತ್ತೀಚೆಗೆ ಹೆಚ್ಚು ಫೇಮಸ್ ಆಗಿರುವ ‘ಚಿಕನ್ ಕಥಿ ರೋಲ್’ ಚಿಕ್ಕವರಿಂದ ದೊಡ್ಡವರ ತನಕ ಇಷ್ಟಪಟ್ಟು ತಿನ್ನುತ್ತಾರೆ. ಅದಕ್ಕೆ ಇಂದು ನೀವು ಮನೆಯಲ್ಲಿ ಹೇಗೆ ‘ಚಿಕನ್ ಕಥಿ ರೋಲ್’ ಮಾಡಬಹುದು ಎಂದು ಹೇಳಿಕೊಡುತ್ತೇವೆ.

ಬೇಕಾಗಿರುವ ವಿಧಾನ:
* ಮೊಸರು – 2 ಟೇಬಲ್ಸ್ಪೂನ್
* ಕಟ್ ಮಾಡಿದ ಶುಂಠಿ – 2 ಟೀಸ್ಪೂನ್
* ಕಟ್ ಮಾಡಿದ ಬೆಳ್ಳುಳ್ಳಿ, ಲವಂಗ – 2 ಟೀಸ್ಪೂನ್
* ಉಪ್ಪು – 1 ಟೀಸ್ಪೂನ್
* ಅರಿಶಿನ – ಅರ್ಧ ಟೀಸ್ಪೂನ್

* ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
* ಗರಂ ಮಸಾಲಾ – 1 ಟೀಸ್ಪೂನ್
* ಕಸೂರಿ ಮೆಂತ್ಯ – 1 ಟೀಸ್ಪೂನ್
* ತಾಜಾ ನಿಂಬೆ ರಸ – 1 ಟೀಸ್ಪೂನ್
* ಬೋನ್‍ಲೆಸ್ ಚಿಕನ್- 1 ಕಪ್
* ಆಲಿವ್ ಎಣ್ಣೆ – 2 ಟೀಸ್ಪೂನ್
* ಕೆಂಪು ಮೆಣಸು – 1 ಟೀಸ್ಪೂನ್
* ಕಟ್ ಮಾಡಿದ ಈರುಳ್ಳಿ – 1 ಕಪ್
* ಹಸಿರು ಚಟ್ನಿ ಅಥವಾ ಪುದೀನ ಚಟ್ನಿ – 2 ಟೀಸ್ಪೂನ್
* ದೊಡ್ಡ ಮೊಟ್ಟೆ – 1
* ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ:
* ದೊಡ್ಡ ಬಾಣಲೆಗೆ ಮೊಸರು, ಕಟ್ ಮಾಡಿದ ಶುಂಠಿ, ಬೆಳ್ಳುಳ್ಳಿ, ಲವಂಗ, ಉಪ್ಪು, ಅರಿಶಿನ, ಕೆಂಪು ಮೆಣಸಿನ ಪುಡಿ, ಗರಂ ಮಸಾಲಾ, ಕಸೂರಿ ಮೆಂತ್ಯ, ತಾಜಾ ನಿಂಬೆ ರಸ ಕೊನೆ ಬೋನ್‍ಲೆಸ್ ಚಿಕನ್ ಬೆರೆಸಿ ಚೆನ್ನಾಗಿ ಫ್ರೈ ಮಾಡಿ. ಪಕ್ಕಕ್ಕಿಡಿ.
* ಕಟ್ ಮಾಡಿದ ಈರುಳ್ಳಿಯನ್ನು ಉಪ್ಪು, ಕೆಂಪು ಮೆಣಸಿನಕಾಯಿ ಮತ್ತು ನಿಂಬೆ ರಸದೊಂದಿಗೆ ಟ್ರೈ ಮಾಡಿ ಮತ್ತು ನಂತರ ಪಕ್ಕಕ್ಕೆ ಇರಿಸಿ. ಮಧ್ಯಮ ಉರಿಯಲ್ಲಿ ಬಾಣಲೆಗೆ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.
* ಕಟ್ ಮಾಡಿದ ಈರುಳ್ಳಿ, ಮೆಣಸು ಸೇರಿಸಿ ಮತ್ತು 3 ನಿಮಿಷಗಳ ಕಾಲ ಹುರಿಯಿರಿ, ಅವು ಸ್ವಲ್ಪ ಮೃದುವಾಗಲು ಪ್ರಾರಂಭವಾಗುತ್ತವೆ. ನಂತರ ಮಸಾಲೆಯುಕ್ತ ಚಿಕನ್ ಸೇರಿಸಿ ಮತ್ತು ಚೆನ್ನಾಗಿ ಬೆರೆಸಿ. ಬಾಣಲೆಯನ್ನು ಮುಚ್ಚಿ 5 ನಿಮಿಷ ಬೇಯಿಸಿ. ಕಟ್ ಮಾಡಿದ ಕೊತ್ತಂಬರಿ ಸೊಪ್ಪನ್ನು ಬೆರೆಸಿ.


* ಅಂಗಡಿಯಲ್ಲಿ ಸಿಗುವ ಪರಾಠವನ್ನು ತೆಗೆದುಕೊಂಡು ಬಂದು ಅದಕ್ಕೆ ಆಲಿವ್ ಎಣ್ಣೆಯಾಕಿ ತವ ಮೇಲೆ ಬೇಯಿಸಿ. ತಿಳಿ ಕಂದು ಬಣ್ಣ ಬರುವವರೆಗೆ 2 ನಿಮಿಷ ಬೇಯಿಸಿ.
* ನಂತರ ಅದರ ಮೇಲೆ ಮೊಟ್ಟೆಯನ್ನು ಹಾಕಿ ಅದನ್ನು ಫ್ರೈ ಮಾಡಿ 30 ಸೆಕೆಂಡುಗಳ ಕಾಲ ಬೇಯಿಸಿ.
* ನಂತರ ಅದಕ್ಕೆ ಹಸಿರು ಚಟ್ನಿಯನ್ನು ಹರಡಿ. ಮಧ್ಯದಲ್ಲಿ ಸುಮಾರು ಚಿಕನ್ ಮಿಶ್ರಣವನ್ನು ಹಾಕಿ ಈರುಳ್ಳಿ, ಕೊತ್ತಂಬರಿ, ಟೊಮೆಟೊ ಸಾಸ್ ಹಾಕಿ ಪರಾಠವನ್ನು ರೂಲ್ ಮಾಡಿ.

– ‘ಚಿಕನ್ ಕಥಿ ರೋಲ್’ ಸವಿಯಲು ಸಿದ್ಧವಾಗಿದ್ದು, ಟೊಮೆಟೊ ಕೆಚಪ್ ಜೊತೆ ಬಡಿಸಿ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *