ಬಿಗ್ ಬಾಸ್ ಮನೆಯಲ್ಲಿ (Bigg Boss House) `ಲವ್ ಬರ್ಡ್ಸ್’ (Love Birds) ಎಂದೇ ಸಾನ್ಯ ಅಯ್ಯರ್ (Sanya Iyer) ಮತ್ತು ರೂಪೇಶ್ ಶೆಟ್ಟಿ ಗುರುತಿಸಿಕೊಂಡಿದ್ದರು. ಓಟಿಟಿಯಿಂದ ಟಿವಿ ಬಿಗ್ ಬಾಸ್‌ವರೆಗೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಸಾನ್ಯ ಎಲಿಮಿನೇಷನ್ ನಂತರ ರೂಪೇಶ್ ಬಿಕ್ಕಿ ಬಿಕ್ಕಿ ಅತ್ತಿದ್ದರು. ಇದೀಗ ಸಾನ್ಯ ಅಂದ್ರೆ ಯಾರು ಎಂದು ರೂಪೇಶ್ ಪ್ರಶ್ನೆ ಮಾಡಿದ್ದಾರೆ. ಫಿಶ್ ತಿನ್ನುವ ಭರದಲ್ಲಿ ಸಾನ್ಯಳನ್ನೇ ರೂಪೇಶ್ ಶೆಟ್ಟಿ ಮರೆತಿದ್ದಾರೆ.

ದೊಡ್ಮನೆಯ ಆಟ ಜೋರಾಗಿದೆ. ಗ್ರ್ಯಾಂಡ್ ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಹೀಗಿರುವಾಗ ಬಿಗ್ ಬಾಸ್, ಮನೆ ಮಂದಿಗೆ ಮೀನಿನ ಅಡುಗೆ ಮಾಡಿ ಕಳುಹಿಸಿದ್ದರು. ಅದನ್ನು ದೀಪಿಕಾ (Deepika Das) ಎತ್ತಿಟ್ಟುಕೊಂಡಿದ್ದರು. `ನನ್ನನ್ನು ಹೊಗಳಿದರೆ ಇದನ್ನು ಕೊಡ್ತೀನಿ’ ಎಂದು ದೀಪಿಕಾ ದಾಸ್ ಅವರು ರೂಪೇಶ್‌ಗೆ (Roopesh Shetty) ಷರತ್ತು ಹಾಕಿದ್ದರು.

ಇದೇ ವೇಳೆ ಮಾತಿನ ಭರದಲ್ಲಿ `ನಾನು ಚೆನ್ನಾಗಿ ಕಾಣ್ತೀನಾ ಅಥವಾ ಸಾನ್ಯಾ ಅಯ್ಯರ್ ಅವರಾ ಎಂದು ಪ್ರಶ್ನೆ ಮಾಡಿದರು ದೀಪಿಕಾ ದಾಸ್. ಇದಕ್ಕೆ ಉತ್ತರಿಸಿದ ರೂಪೇಶ್, `ಸಾನ್ಯಾ ಅಂದ್ರೆ ಯಾರು’ ಎಂದು ಪ್ರಶ್ನೆ ಮಾಡಿದ್ದಾರೆ. ಕೊನೆಯಲ್ಲಿ `ಸಾನ್ಯಾ ಇದು ಜೋಕ್ ಅಷ್ಟೇ’ ಎಂದಿದ್ದಾರೆ. ರೂಪೇಶ್ ಉತ್ತರ ಕೇಳಿ, ಖುಷಿಯಿಂದ ದೀಪಿಕಾ ಮೀನಿನ ಊಟ ಕೊಟ್ಟಿದ್ದಾರೆ. ಇದನ್ನೂ ಓದಿ: ಬಾಲಿವುಡ್‌ನಿಂದ ಬಂತು ಬಿಗ್ ಆಫರ್: ಬನ್ಸಾಲಿ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ

ಇನ್ನೂ ಆರ್ಯವರ್ಧನ್ ಗುರೂಜಿ ಎಲಿಮಿನೇಷನ್ ನಂತರ ಬಿಗ್ ಬಾಸ್‌ನ ಟಾಪ್ 5 ಫೈನಲಿಸ್ಟ್‌ಗಳಾಗಿ ರೂಪೇಶ್ ಶೆಟ್ಟಿ, ರಾಕೇಶ್, ದೀಪಿಕಾ, ದಿವ್ಯಾ, ರೂಪೇಶ್ ರಾಜಣ್ಣ ಆಯ್ಕೆಯಾಗಿದ್ದಾರೆ. 30 ಮತ್ತು 30ರಂದು ಗ್ರ್ಯಾಂಡ್ ಫಿನಾಲೆ ನಡೆಯಲಿದೆ.

Leave a Reply