ನಾನು ನೂಬ್ ಅಂದ್ರೆ ನೀವು ನಿರ್ದಿಷ್ಟ ವ್ಯಕ್ತಿ ಬಗ್ಗೆ ಯೋಚಿಸ್ತೀರಿ: ಪ್ರತಿಪಕ್ಷಗಳಿಗೆ ಮೋದಿ ಟಾಂಗ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಪ್ರತಿಪಕ್ಷಗಳಿಗೆ `ನೂಬ್’ ಎಂದು ಕಾಲೆಳೆದಿದ್ದಾರೆ. ಚುನಾವಣೆ ವಿಚಾರವಾಗಿ ನಾನು `ನೂಬ್’ (Noob) ಪದ ಬಳಸಿದರೆ, ಯಾರನ್ನು ಉಲ್ಲೇಖಿಸುತ್ತಿದ್ದೇನೆ ಎಂದು ಜನ ಆಶ್ಚರ್ಯ ಪಡುತ್ತಾರೆ. ಅಲ್ಲದೇ ನೀವು ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಯೋಚಿಸುತ್ತೀರಿ ಎಂದು ಪ್ರತಿ ಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.

ದೆಹಲಿಯಲ್ಲಿ ಶನಿವಾರ ಮೋದಿಯವರು, ದೇಶದ ಕೆಲವು ಟಾಪ್ ಗೇಮರ್‌ಗಳೊಂದಿಗೆ ಸಂವಾದ ನಡೆಸಿದ್ದಾರೆ. ಗೇಮಿಂಗ್ ಉದ್ಯಮದ ಭವಿಷ್ಯದ ಬಗ್ಗೆ ಮತ್ತು ಸರ್ಕಾರವು ಅವುಗಳನ್ನು ಬೆಳೆಯಲು ಹೇಗೆ ಸಹಾಯ ಮಾಡಬಹುದು ಎಂಬುದರ ಕುರಿತು ಅವರು ಚರ್ಚಿಸಿದರು. ಭಾರತದಲ್ಲಿ ಆಟಗಾರರು ಎದುರಿಸುತ್ತಿರುವ ಸವಾಲುಗಳು ಮತ್ತು ಕೌಶಲ್ಯ ಆಧಾರಿತ ಆಟಗಳು ಮತ್ತು ತ್ವರಿತ ಆದಾಯವನ್ನು ನೀಡುವ ಬಗ್ಗೆ ಚರ್ಚಿಸಿದರು. ಇದೇ ವೇಳೆ ವಿಡಿಯೋ ಗೇಮ್ ವ್ಯಸನದ ಬಗ್ಗೆ ಇರಬೇಕಾದ ಕಾಳಜಿ ಬಗ್ಗೆ ಸಹ ಅವರು ಚರ್ಚಿಸಿದ್ದಾರೆ. ಇದನ್ನೂ ಓದಿ: ನಾಲ್ಕು ಹೋಟೆಲ್‌.. ನಾನಾ ವೇಷ; ಪಶ್ಚಿಮ ಬಂಗಾಳದಲ್ಲಿ ಕೆಫೆ ಬಾಂಬರ್‌ಗಳ ಕಣ್ಣಾಮುಚ್ಚಾಲೆ ಆಟ!

ಈ ವೇಳೆ ಗೇಮರ್‌ಗಳ ತಂಡ ಪ್ರಧಾನಿ ಮೋದಿಯವರಿಗೆ `ನಮೋ ಓಪಿ’ ಎಂಬ ಹೊಸ ಬಿರುದು ನೀಡಿದ್ದಾರೆ. ನೀವು ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಯಾಗಿರುವುದರಿಂದ ನಾವು ನಿಮ್ಮನ್ನು ಈ ಹೆಸರಿನಿಂದ ಕರೆಯುತ್ತೇವೆ ಎಂದು ಗೇಮರ್‍ಗಳು ಹೇಳಿದ್ದಾರೆ. ಇದರ ಅರ್ಥ ಅಧಿಕ ಶಕ್ತಿಯುಳ್ಳದ್ದು ಎಂಬುದಾಗಿದೆ.

ಪ್ರಧಾನಿ ಭೇಟಿಯಾಗಿ ಸಂವಾದ ನಡೆಸಿದ ಗೇಮರ್‌ಗಳು, ನಮನ್ ಮಾಥುರ್ (ಮಾರ್ಟಲ್), ಅನಿಮೇಶ್ ಅಗರ್ವಾಲ್ (ಥಗ್), ಅಂಶು ಬಿಶು (ಗೇಮರ್‍ಫ್ಲೀಟ್), ಗಣೇಶ್ ಗಂಗಾಧರ್ (ಎಸ್‍ಕ್ರೊಸ್ಸಿ), ತೀರ್ಥ್ ಮೆಹ್ತಾ (ಜಿಸಿಟಿರ್ಥ್), ಪಾಯಲ್ ಧರೆ (ಪಾಯಲ್ ಗೇಮಿಂಗ್) ಮತ್ತು ಮಿಥಿಲೇಶ್ ಪಾಟಂಕರ್ (ಮಿತ್‍ಪಾಟ್). ಈ ವೇಳೆ ಗೇಮರ್‌ಗಳೊಂದಿಗೆ ಸ್ವಲ್ಪ ಕಾಲ ವಿವಿಧ ಗೇಮ್‍ಗಳನ್ನು ಮೋದಿ ಆಡಿದ್ದಾರೆ.

ಹೊಸಬರು ಅಥವಾ ಆಟದಲ್ಲಿ ಹೆಚ್ಚು ಪರಿಣತಿ ಹೊಂದಿರದ ವ್ಯಕ್ತಿಯನ್ನು ಗುರುತಿಸಲು ಗೇಮಿಂಗ್‍ನಲ್ಲಿ ನೂಬ್ ಪದ ಬಳಕೆ ಮಾಡುತ್ತಾರೆ. ಇದನ್ನೂ ಓದಿ: LokSabha Election- ಲೋಕ ಅಖಾಡಲ್ಲಿ ಬಿಜೆಪಿಯ ಸಿನಿ ತಾರೆಯರು