ಲಂಡನ್: ಕಾಮನ್‍ವೆಲ್ತ್ ಗೇಮ್ಸ್ 2022ರ ಪುರುಷರ 73 ಕೆ.ಜಿ ವಿಭಾಗದ ವೇಟ್‍ಲಿಫ್ಟಿಂಗ್ ಸ್ಫೆರ್ಧೆಯಲ್ಲಿ 20ರ ಹರೆಯದ ಅಚಿಂತ್ ಶೆಯುಲಿ ಚಿನ್ನದ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯುತ್ತಿರುವ 22ನೇ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಅಚಿಂತ್ ಶೆಯುಲಿ ಒಟ್ಟು ದಾಖಲೆಯ 313 ಕೆ.ಜಿ ತೂಕ ಎತ್ತಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಈ ಮೂಲಕ ಭಾರತ ಕಾಮನ್‍ವೆಲ್ತ್ ಗೇಮ್ಸ್‌ನಲ್ಲಿ ಒಟ್ಟು 3 ಚಿನ್ನ ಸಹಿತ ಒಟ್ಟು 6 ಪದಕ ಗೆದ್ದಿದೆ. ಇದನ್ನೂ ಓದಿ: Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ
https://twitter.com/jindadilkashmir/status/1553938893526880256
ಅಚಿಂತ್ ಶೆಯುಲಿ 2001ರ ನವೆಂಬರ್ 24 ರಂದು ಪಶ್ಚಿಮ ಬಂಗಾಳ ಜನಿಸಿದರು. ಬಡ ಕುಟುಂಬದವರಾದ ಶೆಯುಲಿ ತಂದೆ 2013ರಲ್ಲಿ ನಿಧನದ ಬಳಿಕ ಕುಟುಂಬದ ಭಾರವೆಲ್ಲ ಅಣ್ಣನ ಮೇಲಿತ್ತು. ಈ ವೇಳೆ ಶೆಯುಲಿ ಅಣ್ಣನ ಸಹಾಯಕ್ಕೆ ನಿಂತಿದ್ದರು. ಶೆಯುಲಿ ಅಣ್ಣ ಟೈಲರ್ ಆಗಿದ್ದು ಬಟ್ಟೆಗಳನ್ನು ಹೊಲಿದು ಅಂಗಡಿಗಳಿಗೆ ಮಾರಾಟ ಮಾಡುತ್ತಿದ್ದರು. ಈ ವೇಳೆ ಬಟ್ಟೆಗಳಿಗೆ ಬಟನ್ ಹಾಕಿ ಹೊಲಿಗೆಗೆ ಶೆಯುಲಿ ಸಹಾಯ ಮಾಡುತ್ತಿದ್ದರು. ಜೊತೆಗೆ ಜಿಮ್‍ನಲ್ಲಿ ಕಸರತ್ತು ನಡೆಸುತ್ತಿದ್ದರು. ಆ ಬಳಿಕ ಅಣ್ಣನ ಮಾತಿನಂತೆ ವೇಟ್‍ಲಿಫ್ಟಿಂಗ್‍ನಲ್ಲಿ ಆಸಕ್ತಿತೋರಿ ತರಬೇತಿ ಪಡೆದರು. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ
ಅಚಿಂತ್ ಶೆಯುಲಿ 2010ರಿಂದ ವೇಟ್‍ಲಿಫ್ಟಿಂಗ್‍ನಲ್ಲಿ ತೊಡಗಿಕೊಂಡು 2012ರಿಂದ ಜಿಲ್ಲಾ ಮಟ್ಟದಲ್ಲಿ ಸ್ಪರ್ಧಿಸಿ ಪದಕ ಬೇಟೆ ಆರಂಭಿಸಿದರು. 2019ರಲ್ಲಿ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದಿದ್ದರು. 2021ರ ಜೂನಿಯರ್ ವಲ್ಡ್ ವೇಟ್‍ಲಿಫ್ಟಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಬೆಳ್ಳಿ ಪದಕವನ್ನು ಗೆದ್ದಿದ್ದರು. ಇದೀಗ ಕಾಮನ್‍ವೆಲ್ತ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೆ ಕೀರ್ತಿ ತಂದಿದ್ದಾರೆ.

Leave a Reply