ಶ್ರೀರಾಮನಿಗಿಂತ ಆಂಜನೇಯನನ್ನು ಹೆಚ್ಚು ಜನ ಪೂಜಿಸ್ತಾರೆ: ಸಚಿವ ಡಿಕೆಶಿ

ಬೆಂಗಳೂರು: ಹೆಚ್ಚು ವಿವಾದ ಮಾಡಿಕೊಂಡ ವ್ಯಕ್ತಿಗಳು, ಧೈರ್ಯ ಇದ್ದವರು ಮಾತ್ರ ನಾಯಕರಾಗುತ್ತಾರೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇಲ್ಲಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಶ್ರೀನಿವಾಸ್ ಅವರಿಗೆ ಅಭಿನಂದನಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸೇರಿದ್ದ ಯುವ ಕಾರ್ಯಕರ್ತರಿಗೆ ತಮ್ಮ ಮಾತುಗಳನ್ನು ಉದಾಹರಣೆ ಕೊಡುತ್ತ ಮಾತನಾಡಿದ ಅವರು, ನಾಯಕರಾದವರು ಹೆಚ್ಚು ವಿವಾದ ಮಾಡಿಕೊಳ್ಳುತ್ತಾರೆ. ಇನ್ನು ರಾಮ-ಆಂಜನೇಯರ ಉದಾಹರಣೆ ಕೊಟ್ಟ ಅವರು, ಸೇವೆ, ಭಕ್ತಿಗೆ ಹೆಸರಾದ ಆಂಜನೇಯನನ್ನು ಹೆಚ್ಚು ಜನರು ಪೂಜಿಸುತ್ತಾರೆ. ಅಲ್ಲದೇ ರಾಮನ ದೇವಸ್ಥಾನಕ್ಕಿಂತ ಆಂಜನೇಯನ ದೇವಸ್ಥಾನಗಳೇ ಹೆಚ್ಚಾಗಿವೆ ಎಂದು ಹೇಳಿದರು. ಇದನ್ನು ಓದಿ: ಕಾಂಗ್ರೆಸ್ ಕಾರ್ಯಕ್ರಮದ ಫ್ಲೆಕ್ಸ್ ನಲ್ಲಿ ಆರೋಪಿ ನಲಪಾಡ್ ಮಿಂಚಿಂಗ್!

ಬಂಡೆ ಕಲ್ಲು ಹೆಚ್ಚು ಪೆಟ್ಟು ತಿಂದು ಸುಂದರ ಶಿಲೆಯಾಗುತ್ತದೆ. ಹಾಗೆಯೇ ಪರಿಶ್ರಮದಿಂದ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಕಾಂಗ್ರೆಸ್ ಕಚೇರಿಯಲ್ಲಿ ಕಸ ಗುಡಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ಗುರುತಿಸಿ ನಮ್ಮ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಅವರು ರಾಜ್ಯಸಭಾ ಸದಸ್ಯರಾಗಿ ಮಾಡಿದ್ದಾರೆ. ಹೀಗೆ ಪಕ್ಷದ ಸೇವೆಯಲ್ಲಿ ಶ್ರದ್ಧೆವಹಿಸುವ ಪ್ರತಿಯೊಬ್ಬರಿಗೂ ಪಕ್ಷ ಗೌರವ ನೀಡುತ್ತದೆ ಎಂದು ಹೇಳಿದರು.

Comments

Leave a Reply

Your email address will not be published. Required fields are marked *