ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ: WHO ಮುಖ್ಯಸ್ಥ

ಜಿನೇವಾ: ಕೊರೊನಾ ಸಾಂಕ್ರಾಮಿಕ ನಿರ್ಣಾಯಕ ಹಂತದಲ್ಲಿದೆ. ಈ ಸಾಂಕ್ರಾಮಿಕವನ್ನು ಕೊನೆಗಾಣಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ಮುಖ್ಯಸ್ಥ ಟೆಡ್ರೋಸ್‌ ಅಧನಾಮ್‌ ಗೆಬ್ರೆಯೆಸೆಸ್‌ ತಿಳಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕ ಮೂರನೇ ವರ್ಷಕ್ಕೆ ಕಾಲಿಡುತ್ತಿದೆ. ಈ ಅವಧಿಯಲ್ಲಿ ಸಾಂಕ್ರಾಮಿಕವನ್ನು ನಿಯಂತ್ರಿಸಲು ಅಗತ್ಯವಾದ ಎಲ್ಲಾ ಸಾಧನಗಳು ಇವೆ. ಸದ್ಯ ನಾವು ಸಾಂಕ್ರಾಮಿಕದ ನಿರ್ಣಾಯಕ ಹಂತದಲ್ಲಿದ್ದೇವೆ. ಇದನ್ನು ಕೊನೆಗಾಣಿಸಲು ಎಲ್ಲಾ ರಾಷ್ಟ್ರಗಳು ಒಗ್ಗಟ್ಟಾಗಿ ಕೆಲಸ ಮಾಡುವ ಅಗತ್ಯತೆ ಇದೆ. ಭಯ ಮತ್ತು ನಿರ್ಲಕ್ಷ್ಯದ ನಡುವೆ ಕೊರೊನಾ ಸಾಂಕ್ರಾಮಿಕವನ್ನು ಬೆಳೆಯಲು ನಾವು ಬಿಡಬಾರದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೋವಿಡ್ ಮೊದಲ ಡೋಸ್‍ನಲ್ಲಿ 100% ಪ್ರಗತಿ: ಸಚಿವ ಸುಧಾಕರ್

ಸಾಂಕ್ರಾಮಿಕ ಹೋಗಲಾಡಿಸಲು ಜರ್ಮನಿ ಏಜೆನ್ಸಿ ಅತಿದೊಡ್ಡ ದಾನಿಯಾಗಿ ಗುರುತಿಸಿಕೊಂಡಿದೆ. ಸದಸ್ಯ ರಾಷ್ಟ್ರಗಳಲ್ಲಿ ಅಮೆರಿಕ ಅತಿದೊಡ್ಡ ಹಣಕಾಸಿನ ಕೊಡುಗೆಯನ್ನು ನೀಡಿದೆ ಎಂದು ಟೆಡ್ರೋಸ್‌ ಸ್ಮರಿಸಿದ್ದಾರೆ.

ಜಿ7 ಅಧ್ಯಕ್ಷತೆಯನ್ನು ವಹಿಸಿಕೊಂಡ ಜರ್ಮನಿಯ ಪ್ರಮುಖ ಆದ್ಯತೆಯು ಜಗತ್ತಿನಾದ್ಯಂತ ಕೊರೊನಾ ಸಾಂಕ್ರಾಮಿಕವನ್ನು ಕೊನೆಗಾಣಿಸುವುದಾಗಿದೆ. ವೇಗ ಹಾಗೂ ಜಾಗತಿಕ ವ್ಯಾಕ್ಸಿನೇಷನ್‌ ಅಭಿಯಾನಕ್ಕೆ ಕರೆ ನೀಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಲಸಿಕೆ ಬೇಡವೆಂದು ಮನೆ ಏರಿದ್ದ ಯುವಕನ ಮನವೊಲಿಸಿದ ತಹಶೀಲ್ದಾರ್

Comments

Leave a Reply

Your email address will not be published. Required fields are marked *