ಮೈಕಲ್ ಭವಿಷ್ಯ ನುಡಿದಂತೆ ಬಿಗ್ ಬಾಸ್ ಮನೆಯ ‘ಟಾಪ್ 5’ ಯಾರು?

ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ ಮೈಕಲ್ ಅಜಯ್ (Michael). ಹುಟ್ಟಿದ ಮನೆಗೆ ವಾಪಸ್ಸಾಗಿರುವ ಮೈಕಲ್ ತನ್ನ ಜರ್ನಿ ಮತ್ತು ಬಿಗ್ ಬಾಸ್ ಮನೆಯ ಟಾಪ್ 5 ಕಂಟೆಸ್ಟೆಂಟ್ ಗಳ ಬಗ್ಗೆ ಮಾತನಾಡಿದ್ದಾರೆ. ಯಾಕೆ ಅವರು ಟಾಪ್ ಅನ್ನುವ ವಿಚಾರವನ್ನೂ ಹಂಚಿಕೊಂಡಿದ್ದಾರೆ.

ಮೈಕಲ್ ಟಾಪ್‌ 5 ಲೀಸ್ಟ್

ನನ್ನ ಪ್ರಕಾರ ವಿನಯ್, ಸಂಗೀತಾ, ಕಾರ್ತಿಕ್ ಸಂಗೀತಾ, ತುಕಾಲಿ ಮತ್ತು ಪ್ರತಾಪ್ ಇವರು ಕೊನೆಯ ಹಂತದಲ್ಲಿರುತ್ತಾರೆ. ಸಂಗೀತಾ ವಿನ್ ಆಗಬಹುದು ಅಂತ ನನಗನಿಸುತ್ತದೆ.  ಮುಂದಿನ ವಾರ ತನಿಷಾ ಎಲಿಮಿನೇಟ್ ಆಗಬಹುದು. ಯಾಕೆಂದರೆ, ಅವಳು ಲೌಡ್ ಆಗಿದ್ದಾಳೆ. ಅದರೆ ಅವಳ ಗೇಮ್ ತುಂಬ ಸ್ಲೋ ಆಗಿ ಹೋಗುತ್ತಿದೆ.

ಜಿಯೊ ಫನ್ ಫ್ರೈಡೆ

ಜಿಯೊ ಫನ್ ಫ್ರೈಡೆ ಟಾಸ್ಕ್‌ಗಳು ನನಗೆ ಯಾವಾಗಲೂ ಇಷ್ಟ. ಚೆನ್ನಗಿರುತ್ತಿದ್ದವು. ಫ್ರೈಡೆ ಮಾಡಲಿಕ್ಕೆ ಹೆಚ್ಚೇನೂ ಇರುತ್ತಿರಲಿಲ್ಲ. ಹಾಗಾಗಿ ಫನ್ ಫ್ರೈಡೆಗಾಗಿ ನಾವೆಲ್ಲ ಕಾಯುತ್ತಿದ್ದೆವು. ಅದೇ ದೊಡ್ಡ ಎಂಟರ್‍ಟೈನ್ಮೆಂಟ್‌. ಯಾವಾಗಲೂ ಒಂದು ಎಂಟರ್‍ಟೈನಿಂಗ್ ಟಾಸ್ಕ್‌ ಆಗಿರುತ್ತಿತ್ತು.

ನನಗೆ ತುಂಬ ದಿನಗಳವರೆಗೆ ಒಂದು ಫೀಲಿಂಗ್ ಇತ್ತು, ‘ಏನ್ ಗುರು, ನಾನು ಎಷ್ಟೆಲ್ಲ ಟಾಸ್ಕ್ ಗೆದ್ದಿದೀನಿ. ಕಿಚ್ಚನ ಚಪ್ಪಾಳೆ ತಗೊಂಡಿದೀನಿ. ಕ್ಯಾಪ್ಟನ್ ಆಗಿದ್ದೀನಿ. ಆದ್ರೆ ಜಿಯೊ ಟಾಸ್ಕ್ ಗೆದ್ದಿಲ್ಲವಲ್ಲ ಅಂತ. ಆದರೆ ಎರಡು ವಾರದ ಹಿಂದೆ  ಬ್ರೆಡ್ ತಿನ್ನುವ ಟಾಸ್ಕ್ ಬಂತು. ನನಗೋಸ್ಕರವೇ ಮಾಡಿದ ಟಾಸ್ಕ್ ಹಾಗಿತ್ತು ಅದು. ಅದನ್ನು ಗೆದ್ದೆ. ತುಂಬ ಖುಷಿಯಾಯ್ತು.

ಬಿಗ್‌ಬಾಸ್‌ನಲ್ಲಿ ಮಿಸ್‌ ಮಾಡ್ಕೊಳ್ಳೋದೇನು?

ಬೆಳಬೆಳಿಗ್ಗೆ ಹಾಡು ಹಾಕಿನಮ್ಮನ್ನು ಎಬ್ಬಿಸೋದನ್ನು ನಾನು ಮಿಸ್ ಮಾಡ್ತೀನಿ. ಬೆಳಿಗ್ಗೆ ಹಾಡು ಕೇಳಿ ಎದ್ದು, ಡಾನ್ಸ್ ಮಾಡಿ, ಕಾಫಿ ಕುಡಿದು, ವರ್ಕೌಟ್ ಮಾಡಿ ಹೋಗಿ ಪಾತ್ರೆ ತೊಳೆಯುವ ದಿನಚರಿಯನ್ನು ನಾನು ತುಂಬ ಮಿಸ್ ಮಾಡ್ಕೋತೀನಿ. 90 ದಿನಗಳ ಕಾಲ ಆ ದಿನಚರಿ ಮಾಡಿ ಸೆಟ್ ಆಗಿಬಿಟ್ಟಿದೆ ನನಗೆ. ಅದನ್ನು ಮಿಸ್ ಮಾಡ್ಕೋತೀನಿ.

 

ಬಿಗ್‌ಬಾಸ್ ಜರ್ನಿ ತುಂಬ ಅಮೇಜಿಂಗ್ ಆಗಿತ್ತು. ಎರಡೇ ವಾರ ಇರ್ತೀನಿ ಅಂದುಕೊಂಡು ಹೋದವನು ನಾನು. ಆದರೆ ಈ ಹದಿಮೂರು ವಾರದಲ್ಲಿ ಹಲವು ಬಗೆಯ ಸಂದರ್ಭಗಳಲ್ಲಿ ಹಾದೂ ನಾನು ನಾನೇ ಆಗಿ ಇದ್ದೀನಿ. ಹಾಗಾಗಿ ಇನ್ನೂ ಸಾಕಷ್ಟು ಸಾಧನೆ ಮಾಡಬಹುದು ಎಂದು ನನಗೆ ವಿಶ್ವಾಸ ಹುಟ್ಟಿದೆ.  ಬರೀ ತೊಂಬತ್ತು ದಿನಗಳಲ್ಲಿ ಒಂದು ಭಾಷೆಯನ್ನು ತುಂಬ ಚೆನ್ನಾಗಿ ಕಲಿತುಕೊಂಡು ಮಣ್ಣಿನ ಮಗ ಆಗಬಹುದು ಎಂಬುದನ್ನೂ ಬಿಗ್‌ಬಾಸ್ ನನಗೆ ಮನವರಿಕೆ ಮಾಡಿಕೊಟ್ಟಿದೆ.