ಹುಬ್ಬಳ್ಳಿ: ಮೋದಿ ಅವರು ದೇಶಕ್ಕೆ ಏನು ಮಾಡಿದ್ದಾರೆ? 45 ವರ್ಷ ಗಳ ನಂತರ ದೇಶದಲ್ಲಿ ದೊಡ್ಡ ನಿರುದ್ಯೋಗ ಭೀತಿ ಸೃಷ್ಟಿಯಾಗಿದೆ. ಅಧಿಕಾರಕ್ಕೆ ಬಂದು 5 ವರ್ಷವಾಯಿತು. ಎಲ್ಲಿ ಹೋಯಿತು ಅಚ್ಛೆ ದಿನ್ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಐದು ವರ್ಷವಾದ್ರೂ ಅಚ್ಛೇ ದಿನ್ ಮಾತ್ರ ಯಾಕೆ ಬರಲಿಲ್ಲ. ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ ರೂ. ಬರ ಪರಿಹಾರ ನೀಡಿದೆ. ನಮಗೆ ಕೇವಲ 900 ಕೋಟಿ ನೀಡಿದೆ. ಯಾಕೆ ಈ ರೀತಿಯ ತಾರತಮ್ಯ, ನಮ್ಮ ರಾಜ್ಯದ ಬಿಜೆಪಿ ಎಂಪಿಗಳು ಯಾಕೆ ಮೌನವಾಗಿದ್ದಾರೆ ಎಂಬುದಾಗಿಯೂ ಅವರು ಇದೇ ವೇಳೆ ಪ್ರಶ್ನೆ ಮಾಡಿದ್ರು.

ಕಾಂಗ್ರೆಸ್ ಶಾಸಕರ ರಾಜೀನಾಮೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಬಿಜೆಪಿಯ ಹಲವಾರು ನಾಯಕರು, ಬಜೆಟ್ ಮಂಡನೆ ಆಗಲ್ಲ ಎನ್ನುತ್ತಿದ್ದಾರೆ. ಅವರು ನಮ್ಮ ಶಾಸಕರ ಮೇಲೆ ಒತ್ತಡ ತರುತ್ತಿದ್ದಾರೆ. ಅವರಿಗೆ ಮತ್ತೊಮ್ಮ ಮುಖಭಂಗ ಆಗುತ್ತದೆ. ಇದು ನಾಲ್ಕನೇ ಬಾರಿ ಅವರು ಅಪರೇಷನ್ ಕಮಲ ಮಾಡ್ತಿರೋದು ಅಂದ್ರು.
ನಮ್ಮ ಶಾಸಕರು ಎಲ್ಲಿಯಾದ್ರು ಹೋಗ್ಲಿ ಬಿಜೆಪಿಯರಿಗೇನು ಸಂಬಂಧ? ಬಿಜೆಪಿಯವರಿಗೆ ಮಾನಮರ್ಯಾದೆ ಇಲ್ಲ. ನಮ್ಮ ಪಕ್ಷದ ಆಂತರಿಕ ಸಮಸ್ಯೆ ಅವರಿಗೇನು ಸಮಸ್ಯೆ? ಅವರು ಯಾಕೆ ಗುರುಗ್ರಾಮ ರೆಸಾರ್ಟ್‍ನಲ್ಲಿದ್ದರು ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply