ನೀರಿನ ದರ ಏರಿಕೆ ಮಾಡ್ತೀವಿ,ಬಸ್ ದರ ಏರಿಕೆ ನಾವು ಎಲ್ಲಿ ಹೇಳಿದ್ದೀವಿ: ಸಿಎಂ ಪ್ರಶ್ನೆ

ಬೆಂಗಳೂರು: ಜಲಮಂಡಳಿ (BWSSB) ನಷ್ಟದಲ್ಲಿದೆ. ಅದಕ್ಕಾಗಿ ನೀರಿನ ದರ (Water Bill) ಏರಿಕೆ‌ ಮಾಡುತ್ತಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ನೀರಿನ ದರ ಹೆಚ್ಚು ಮಾಡುವ ಬಗ್ಗೆ ಚರ್ಚೆ ಮಾಡಿದ್ದೇವೆ. ಆದರೆ ಇನ್ನೂ ಏರಿಕೆ ಮಾಡಿಲ್ಲ. ಸುಮಾರು ವರ್ಷಗಳಿಂದ ನೀರಿನ ದರ ಏರಿಕೆ ಆಗಿಲ್ಲ. ಹಾಗಾಗಿ ನೀರಿನ ದರ ಏರಿಕೆ ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: KSRTC ಬಸ್ ದರ ಏರಿಕೆ – ಮತ್ತೆ ಸುಳಿವು ನೀಡಿದ ರಾಮಲಿಂಗಾ ರೆಡ್ಡಿ

 

ಬಸ್ ದರ ಏರಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿದ ಸಿಎಂ, ಬಸ್ ದರ (Bus Fare) ಏರಿಕೆ ಬಗ್ಗೆ ನಾವು ಎಲ್ಲಿ ಹೇಳಿದ್ದೇವೆ? ನಮಗೆ ಅದು ಗೊತ್ತೇ ಇಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ವಿಮೆ ಹಣ ದೋಚಲು ಅಮಾಯಕ ವ್ಯಕ್ತಿಯ ಮರ್ಡರ್ ಮಿಸ್ಟ್ರಿ- ಹಾಸನದಲ್ಲಿ ನಟೋರಿಯಸ್ ದಂಪತಿ ಅರೆಸ್ಟ್

ಕೆಪಿಎಸ್‌ಸಿಯಲ್ಲಿ ಏನು ಗೊಂದಲವಿಲ್ಲ. ಕೆಲವು ಜನ ಪರೀಕ್ಷೆ ಮುಂದಕ್ಕೆ ಹಾಕಬೇಕು ಎಂದು ಹೇಳುತ್ತಿದ್ದಾರೆ. ನಾವು ಈಗ ಪರೀಕ್ಷೆ ಮುಂದಕ್ಕೆ ಹಾಕುವುದಿಲ್ಲ. ಒಂದು ಪತ್ರಿಕೆ ಮಾತ್ರ ಮುಂದೂಡಿಕೆ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

ರಾಜ್ಯಪಾಲರು ಮಸೂದೆಗಳನ್ನು ವಾಪಸ್ ಕಳುಹಿಸಿದ ವಿಚಾರ ಪ್ರಾಸ್ತಾಪಿಸಿ, ಇದರ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡುತ್ತೇವೆ. ಅವು ಸದನದಲ್ಲಿ ಪಾಸ್ ಆಗಿರುವ ಬಿಲ್‌ಗಳು ಇವೆ. ವಿವರಣೆ ಕೇಳಿದರೆ ಕೊಡುತ್ತಿದ್ದೇವೆ. ಆದರೆ ಬಿಲ್‌ಗಳು ವಾಪಸ್ ಕಳುಹಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.