ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ, ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು: ಎನ್‌ವೈ ಗೋಪಾಲಕೃಷ್ಣ

ಚಿತ್ರದುರ್ಗ: ಕೂಡ್ಲಿಗಿ ಶಾಸಕನಾಗಿದ್ದಾಗ ದೇಹ ಬಿಜೆಪಿಯಲ್ಲಿದ್ರೂ (BJP), ನನ್ನ ಹೃದಯ ಕಾಂಗ್ರೆಸ್‌ನಲ್ಲಿತ್ತು (Congress) ಎಂದು ಮೊಳಕಾಲ್ಮೂರು (Molakalmuru) ಕಾಂಗ್ರೆಸ್ ಶಾಸಕ ಎನ್‌ವೈ ಗೋಪಾಲಕೃಷ್ಣ (N.Y.Gopalakrishna) ಹೇಳಿದ್ದಾರೆ.

ಚಿತ್ರದುರ್ಗದ (Chitradurga) ಜಿಲ್ಲಾ ಕಾಂಗ್ರೆಸ್ ಕಚೇರಿ ಬಳಿ ಶನಿವಾರ ನಡೆದ ಭಾರತ್ ಜೋಡೋ (Bharat Jodo) ಯಾತ್ರೆಯ ವಾರ್ಷಿಕೋತ್ಸವದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಕೂಡ್ಲಿಗಿ ಕೇತ್ರದ ಬಿಜೆಪಿ ಶಾಸಕ ಆಗಿದ್ದಾಗ ಸಹ ಕಾಂಗ್ರೆಸ್ ಬೆಂಬಲಿಸಿದ್ದೆ. ಭಾರತ್ ಜೋಡೋ ಯಾತ್ರೆ ವೇಳೆ ಹಾನಗಲ್‌ನಿಂದ ಕಣುಕುಪ್ಪೆಯವರೆಗೆ ಮೊಳಕಾಲ್ಮೂರು ಕ್ಷೇತ್ರದ ಜನರನ್ನು ಯಾತ್ರೆಗೆ ಕಳುಹಿಸಿದ್ದೆ. ಆಗ ಡಿ.ಸುಧಾಕರ್ ನನಗೆ ಜನ ಕಳುಹಿಸುವಂತೆ ಹೇಳಿದ್ದರು. ಅವರೇ ಇಂದು ನಮ್ಮೊಂದಿಗೆ ಸಾಕ್ಷಿಯಾಗಿದ್ದಾರೆ ಎಂದರು. ಇದನ್ನೂ ಓದಿ: Aditya-L1: ಮತ್ತೊಂದು ಎತ್ತರದ ಕಕ್ಷೆ ಸೇರಿದ ಆದಿತ್ಯ ನೌಕೆ – ಸೂರ್ಯನಿಗೆ ಇನ್ನಷ್ಟು ಹತ್ತಿರ

ನಮ್ಮ ಸಹೋದರರಾದ ಮಾಜಿ ಸಂಸದ ಎನ್‌ವೈ ಹನುಮಂತಪ್ಪ ಅವರು ನಾನು ಬಿಜೆಪಿಗೆ ಸೇರಿದ್ದಾಗ ಮತ ಹಾಕಿರಲಿಲ್ಲ. ನಾನು ಬಿಜೆಪಿ ಸೇರಿದ್ದೇನೆ. ನನಗೆ ಮತ ಹಾಕಿ ಎಂದಾಗ ನೀನು ಬಿಜೆಪಿಗೆ ಹೋಗಿ ತಪ್ಪು ಮಾಡಿದೆ ಎಂದಿದ್ದರು. ಹಾಗೆಯೇ ನಾನು ನೆಹರೂ, ಇಂದಿರಾಗಾಂಧಿಯವರ ಅನುಯಾಯಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ಬೆಳೆದಿದ್ದೇನೆ. ಹೀಗಾಗಿ ಬಡವರಿರುವ ಕಾಂಗ್ರೆಸ್ ಪಾರ್ಟಿಯಲ್ಲಿ ನಾನಿರುತ್ತೇನೆ ಹೊರತು ಶ್ರೀಮಂತರೊಂದಿಗೆ ಸೇರಲ್ಲ. ಜೊತೆಗೆ ಬಡವರು, ಎಸ್ಸಿ, ಎಸ್ಟಿ, ಮೈನಾರಿಟಿ ಜನರು ಕಾಂಗ್ರೆಸ್‌ನಲ್ಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪತ್ನಿ ಅಕ್ಷತಾ ಮೂರ್ತಿಯೊಂದಿಗೆ ಅಕ್ಷರಧಾಮ ದೇವಾಲಯಕ್ಕೆ ಬ್ರಿಟನ್ ಪ್ರಧಾನಿ ಭೇಟಿ

ಕಾಂಗ್ರೆಸ್ ಇರುವವರೆಗೆ ಈ ದೇಶದ ಜನರು ಕಾಂಗ್ರೆಸನ್ನೇ ಬೆಂಬಲಿಸಲಿದ್ದಾರೆ. ಆದ್ದರಿಂದ ನೀನು ‘ಕೈ’ನೊಂದಿಗಿರು ಎಂದಿದ್ದ ಪರಿಣಾಮವಾಗಿ ನಾನು ಕೂಡ್ಲಿಗಿಯಲ್ಲೂ ಕಾಂಗ್ರೆಸ್ ಪಡೆ ಕಟ್ಟಿರುವೆ. ಕಾಂಗ್ರೆಸ್ ಕಾರ್ಯಕ್ರಮ ಅನುಷ್ಟಾನಗೊಳಿಸಿದೆ ಎಂದರು. ಈ ವೇಳೆ ಕೆಪಿಸಿಸಿ ಕಾರ್ಯಧ್ಯಕ್ಷ ಚಂದ್ರಪ್ಪ, ಸಚಿವ ಡಿ.ಸುಧಾಕರ್, ಶಾಸಕ ರಘುಮೂರ್ತಿ ಹಾಗೂ ‘ಕೈ’ ಕಾರ್ಯಕರ್ತರು ಉಪಸ್ಥಿತರಿದ್ದರು. ಇದನ್ನೂ ಓದಿ:  G20 Summit: ಮೊದಲ ದಿನದ ಅಧಿವೇಶನಗಳು ಯಶಸ್ವಿ – ಇಂದಿನ ಕಾರ್ಯಕ್ರಮಗಳೇನು?

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]