ನಾನು ತಿನ್ನುತ್ತೇನೆ, ನೀವು ತಿನ್ನಿ – ಬಿಜೆಪಿ, ಸಿಎಂ ನಡ್ವೆ ಟ್ವಿಟ್ಟರ್ ವಾರ್

ಬೆಂಗಳೂರು: ಐಎಂಎ ಮಾಲೀಕ ಮನ್ಸೂರ್ ಪರಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಮತ್ತು ಸಿಎಂ ನಡುವೆ ಟ್ವಿಟ್ಟರ್ ವಾರ್ ಆರಂಭಗೊಂಡಿದೆ.

ಬಿಜೆಪಿ ಐಎಂಎ ಮಾಲೀಕ ಮನ್ಸೂರ್ ನೊಂದಿಗೆ ಸಿಎಂ ಊಟ ಮಾಡುತ್ತಿರುವ ಫೋಟೋ ಹಾಕಿ ವ್ಯಂಗ್ಯ ಮಾಡಿದೆ. “ನಾನು ತಿನ್ನುತ್ತೇನೆ. ನೀವು ತಿನ್ನಿ ಎನ್ನುವುದು ಜೆಡಿಎಸ್ ಧ್ಯೇಯ. ಇದರಿಂದಾಗಿಯೇ ಮನ್ಸೂರ್ ನಂತಹ ವಂಚಕ ಲೂಟಿ ಮಾಡಿಕೊಂಡು ಹೋಗಿದ್ದಾರೆ” ಎಂದು ಬಿಜೆಪಿ ವ್ಯಂಗ್ಯವಾಗಿ ಟ್ವೀಟ್ ಮಾಡಿದೆ.

ಈ ಟ್ವೀಟ್‍ಗೆ ಸಿಎಂ, ಬಿಜೆಪಿ ಹಳೆಯ ಫೋಟೋ ಇಟ್ಟುಕೊಂಡು ಜನರ ದಾರಿ ತಪ್ಪಿಸುತ್ತಿರುವುದು ಬೇಸರ ತಂದಿದೆ. ಐಎಂಎ ಗಂಭೀರವಾದ ಪ್ರಕರಣ ಆಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.

ಐಎಂಎ ವಂಚನೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹೂಡಿಕೆದಾರರ ಆತಂಕವನ್ನು ಸರ್ಕಾರ ಅರ್ಥ ಮಾಡಿಕೊಂಡಿದ್ದು ಪ್ರಕರಣವನ್ನು ಸಿಸಿಬಿಗೆ ವಹಿಸಲಾಗಿದೆ. ಗೃಹ ಸಚಿವರಾದ ಎಂಬಿ ಪಾಟೀಲ್ ಅವರೊಂದಿಗೆ ಈ ಬಗ್ಗೆ ಮಾತನಾಡಿದ್ದು ಪ್ರಕರಣವನ್ನು ಶೀಘ್ರ ಇತ್ಯರ್ಥಗೊಳಿಸಲು ಸೂಚಿಸಿದ್ದೇನೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.

https://twitter.com/CMofKarnataka/status/1138360564340576257

ಬಿಜೆಪಿ ಮತ್ತೊಂದು ಟ್ವೀಟ್ ಮಾಡಿದ್ದು, ಈ ವಂಚಕ ನಿಮಗೆ ಮೊದಲಿನಿಂದಲೂ ಪರಿಚಯ. ಈ ವಂಚಕನನ್ನು ಸೆರೆ ಹಿಡಿಯುವುದು ನಿಮ್ಮ ಕೆಲಸ ಅದನ್ನು ಬಿಟ್ಟು ಟ್ವಿಟ್ಟರ್ ನಲ್ಲಿ ಅಳಬೇಡಿ ಎಂದು ಮತ್ತೊಂದು ಟ್ವೀಟ್ ಮಾಡಿ ಸಿಎಂಗೆ ಟಾಂಗ್ ನೀಡಿದೆ.

Comments

Leave a Reply

Your email address will not be published. Required fields are marked *