ಮಗಳ ಮದ್ವೆಯಲ್ಲಿ ಅಳಿಯನ ಫೋಟೋದೊಂದಿಗೆ ಅನಿಲ್ ಕಪೂರ್ ಟ್ರೋಲ್

ಮುಂಬೈ: ಬಾಲಿವುಡ್ ಬೆಡಗಿ ಸೋನಮ್ ಕಪೂರ್ ತನ್ನ ಬಹುದಿನದ ಗೆಳೆಯ ಹಾಗೂ ದೆಹಲಿಯ ಉದ್ಯಮಿ ಆನಂದ್ ಅಹುಜಾ ಜೊತೆ ಮಂಗಳವಾರ ವಿವಾಹವಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸೋನಮ್ ತಂದೆ ಅನಿಲ್ ಅಪೂರ್ ವರನಿಗಿಂತಲೂ ತರುಣನಂತೆ ಕಾಣಿಸುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳು ವೈರಲ್ ಆಗಿವೆ.

ಅನಿಲ್ ಕಪೂರ್ 60 ವರ್ಷದವರಾಗಿದ್ದು, 35 ವರ್ಷದ ವರನಿಗಿಂತ ಹೆಚ್ಚು ತರುಣನಂತೆ ಕಾಣಿಸಿಕೊಂಡಿದ್ದಾರೆ. ಮದುವೆ ಮನೆಯಲ್ಲಿ ಬಿಳಿ ಶೇರ್ವಾನಿ ಧರಿಸಿ ಅದರ ಮೇಲೊಂದು ಹಸಿರು ಬಣ್ಣದ ರೂಬಿ ನೆಕ್ಲೆಸ್ ಹಾಕಿಕೊಂಡು ಅನಿಲ್ ಕಪೂರ್ ಎಲ್ಲರ ಗಮನ ಸೆಳೆದಿದ್ದರು.

ಸೋನಮ್ ಕಪೂರ್, ರಿಯಾ ಕಪೂರ್ ಹಾಗೂ ಹರ್ಷವರ್ಧನ್ ಕಪೂರ್ ತಂದೆಯಾಗಿರುವ ಅನಿಲ್ ಕಪೂರ್ ಮಗಳ ಮದುವೆಯ ಪ್ರತಿಕ್ಷಣವನ್ನು ಸಂಭ್ರಮಿಸಿದರು. ಮದುವೆಯ ವೇದಿಕೆ ಮೇಲೆ ಮಕ್ಕಳೊಂದಿಗೆ ನೃತ್ಯ ಮಾಡಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ.

ಅನಿಲ್ ಕಪೂರ್ ತಮ್ಮ ಇಳಿ ವಯಸ್ಸಿನಲ್ಲಿಯೂ ಸಕಾರಾತ್ಮಕ ಜೀವನ ಶೈಲಿ, ಆರೋಗ್ಯಕರ ಆಹಾರ ಸೇವನೆ ಹಾಗೂ ನಿಯಮಿತ ವ್ಯಾಯಾಮದಿಂದ ಅನಿಲ್ ಕಪೂರ್ ತರುಣರಂತೆ ಈಗಲೂ ಕಾಣುತ್ತಾರೆ.

ಸಲ್ಮಾನ್ ಖಾನ್, ಶಾರುಖ್ ಖಾನ್, ಕತ್ರಿನಾ ಕೈಫ್, ಕರೀನಾ ಕಪೂರ್, ಕಂಗನಾ ರಾವತ್, ಸೈಫ್ ಅಲಿಖಾನ್, ಕರಣ್ ಜೋಹರ್ ಮತ್ತು ಅಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ನವದಂಪತಿಗೆ ಶುಭಕೋರಿದ್ದಾರೆ.

Comments

Leave a Reply

Your email address will not be published. Required fields are marked *