ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

ನವದೆಹಲಿ: ಟ್ವಿಟ್ಟರ್, ಫೇಸ್‍ಬುಕ್ ನಲ್ಲಿ ನೀವು ಸೆಲೆಬ್ರಿಟಿ, ರಾಜಕೀಯ ಪಕ್ಷ, ಕಂಪೆನಿಗಳ ಅಧಿಕೃತ ಖಾತೆಗಳು ಇರುವುದನ್ನು ನೀವು ನೋಡಿರಬಹುದು. ಇನ್ನು ಮುಂದೆ ವಾಟ್ಸಪ್‍ನಲ್ಲೂ ಇದೇ ರೀತಿಯ ಅಧಿಕೃತ ಖಾತೆಗಳು ಇರಲಿದೆ.

ಹೌದು. ಬಿಸಿನೆಸ್ ಪೇಜ್ ಹೊಂದಿರುವ ಮಂದಿಗೆ ಹೊಸ ವಿಶೇಷತೆ ಸೇರಿಸಲು ವಾಟ್ಸಪ್ ಪರೀಕ್ಷೆ ನಡೆಸುತ್ತಿದ್ದು, ಅಧಿಕೃತ ವಾಟ್ಸಪ್ ನಂಬರ್ ಹೊಂದಿರುವ ಬಳಕೆದಾರಿಗೆ ಟಿಕ್ ಮಾರ್ಕ್ ನೀಡಲು ಮುಂದಾಗಿದೆ.

ಬಿಸಿನೆಸ್ ಪೇಜ್ ಹೆಸರಿನ ಸಮೀಪವೇ ಹಸಿರು ಬಣ್ಣದ ಮಧ್ಯೆ ಬಿಳಿ ಟಿಕ್‍ಮಾರ್ಕ್ ಚಿಹ್ನೆಯನ್ನು ವಾಟ್ಸಪ್ ನೀಡಲಿದೆ. ಮೆಸೇಜ್ ಗಳು ಅಧಿಕೃತ ಪೇಜ್ ನಿಂದಲೇ ಬಂದಿದೆ ಎಂದು ಬಳಕೆದಾರರಿಗೆ ಗುರುತಿಸಲು ಚಾಟ್ ಮಾಡುವ ವೇಳೆ ಹಳದಿ ಬಣ್ಣದ ಮೆಸೇಜ್ ಬರುತ್ತದೆ ಮತ್ತು ಈ ಚಾಟ್ ಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ವಾಟ್ಸಪ್ ಹೇಳಿದೆ.

ಒಂದು ವೇಳೆ ನಿಮ್ಮ ಫೋನಲ್ಲಿ ಮೊದಲೇ ಬಿಸೆನೆಸ್ ಪೇಜ್ ಗಳ ಫೋನ್ ನಂಬರ್ ಸೇವ್ ಆಗಿದ್ದರೆ, ಮೆಸೇಜ್ ನೀವು ಸೇವ್ ಮಾಡಿದ ಹೆಸರಿನಲ್ಲೇ ಬರುತ್ತದೆ ಎಂದು ತಿಳಿಸಿದೆ.

ಈಗ ಇದು ಆರಂಭಿಕ ಹಂತದಲ್ಲಿದ್ದು, ವಾಟ್ಸಪ್ ಬೀಟಾದ ಆಂಡಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಪರೀಕ್ಷಾರ್ಥವಾಗಿ ಕೆಲ ಬುಸಿನೆಸ್ ಪೇಜ್ ಗಳಿಗೆ ಈ ವಿಶೇಷತೆ ನೀಡಿದ ಬಳಿಕ ಈ ಸೇವೆ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.

ಯಾವುದೇ ಕಾರಣಕ್ಕೂ ನಾವು ಜಾಹೀರಾತುಗಳನ್ನು ಪ್ರಕಟಿಸಿ ಬಳಕೆದಾರರಿಗೆ ಕಿರಿಕಿರಿ ಮಾಡುವುದಿಲ್ಲ ಎಂದು ಹೇಳಿರುವ ವಾಟ್ಸಪ್ ಕೆಲ ವರ್ಷಗಳಿಂದ ಜಾಹೀರಾತು ಮೂಲಗಳನ್ನು ಹುಡುಕುತ್ತಿದೆ. ಹೀಗಾಗಿ ಈಗ ಹೊಸದಾಗಿ ಆರಂಭಿಸಲಿರುವ ಈ ಬಿಸಿನೆಸ್ ಸೇವೆ ಉಚಿತವೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

ಇದನ್ನೂ ಓದಿ: ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

Comments

Leave a Reply

Your email address will not be published. Required fields are marked *