ಇನ್ನು ಮುಂದೆ ಫೋನ್ ಲಾಕ್ ಓಪನ್ ಆದ್ರೂ ವಾಟ್ಸಪ್ ತೆರೆಯಲ್ಲ!

ಕ್ಯಾಲಿಫೋರ್ನಿಯಾ: ಫೇಸ್‍ಬುಕ್ ಮಾಲೀಕತ್ವದ ವಿಶ್ವದ ನಂಬರ್ ಒನ್ ಮೆಸೆಂಜಿಂಗ್ ಅಪ್ಲಿಕೇಶನ್ ವಾಟ್ಸಪ್ ಬಳಕೆದಾರರ ಪ್ರೈವೆಸಿಯನ್ನು ಕಾಪಾಡಲು ಫಿಂಗರ್ ಪ್ರಿಂಟ್ ವಿಶೇಷತೆ ಸೇರಿಸಲು ಸಿದ್ಧತೆ ನಡೆಸುತ್ತಿದೆ.

ಪ್ರಸ್ತುತ ಫೋನ್ ಲಾಕ್ ಓಪನ್ ಮಾಡಿದರೆ ಯಾರೂ ಬೇಕಾದರೂ ವಾಟ್ಸಪ್ ಓಪನ್ ಮಾಡಿ ಚಾಟ್ ಗಳನ್ನು ಓದಬಹುದು. ಪ್ರೈವೆಸಿ ಇಲ್ಲದ ಕಾರಣ ಬಳಕೆದಾರರ ಮಾಹಿತಿ ಮತ್ತು ಖಾತೆ ದುರುಪಯೋಗ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಈ ರೀತಿಯ ದುರುಪಯೋಗ ಆಗುವುದನ್ನು ತಪ್ಪಿಸಲು ಮತ್ತು ಪ್ರೈವೆಸಿಗಾಗಿ ವಾಟ್ಸಪ್ ಫಿಂಗರ್ ಪ್ರಿಂಟ್ ದೃಢೀಕರಣವನ್ನು ಸೇರಿಸಲು ಮುಂದಾಗಿದೆ.

ಈಗ ಹೇಗೆ ಫೋನ್ ಲಾಕ್ ತೆಗೆಯಲು ಫಿಂಗರ್ ಪ್ರಿಂಟ್ ಸೆನ್ಸರ್ ಬಳಕೆಯಾಗುತ್ತದೋ ಅದೇ ರೀತಿಯಾಗಿ ವಾಟ್ಸಪ್ ಓಪನ್ ಮಾಡಬೇಕಾಗುತ್ತದೆ. ಈ ವಿಶೇಷತೆ ಬೇಕಾಗಿದ್ದಲ್ಲಿ ಸೆಟ್ಟಿಂಗ್ಸ್ –> ಆಕೌಂಟ್–> ಪ್ರೈವೆಸಿ ಹೋಗಿ ಫಿಂಗರ್ ಪ್ರಿಂಟ್ ಸೆನ್ಸರ್ ಎನೆಬಲ್ ಮಾಡಿಕೊಳ್ಳಬೇಕಾಗುತ್ತದೆ.

ಆರಂಭದಲ್ಲಿ ಈ ವಿಶೇಷತೆ ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಿಗಲಿದ್ದು ನಂತರ ಐಓಎಸ್ ಬಳಕೆದಾರರಿಗೆ ಸಿಗಲಿದೆ. ಆಂಡ್ರಾಯ್ಡ್ ಮಾರ್ಶ್ ಮೆಲ್ಲೋ ಮತ್ತು ನಂತರ ಬಿಡುಗಡೆಯಾಗಿರುವ ಎಲ್ಲ ಆಪರೇಟಿಂಗ್ ಸಿಸ್ಟಂಗಳಿಗೆ ಅಪ್‍ಡೇಟ್ ಆಗಲಿರುವ ವಾಟ್ಸಪ್ ಆ್ಯಪ್ ಬೆಂಬಲ ನೀಡಲಿದೆ ಎಂದು ವಾಟ್ಸಪ್‍ಬೀಟಾಇನ್ಫೋ ವರದಿ ಮಾಡಿದೆ.

ಫಿಂಗರ್ ಪ್ರಿಂಟ್ ಸೆನ್ಸರ್ ವಾಟ್ಸಪ್ ಖಾತೆ ತೆರೆಯಲು ಮಾತ್ರ ಬಳಕೆಯಾಗುತ್ತದೆ ಹೊರತು ಪ್ರತ್ಯೇಕವಾಗಿ ವ್ಯಕ್ತಿಗಳ ಚಾಟ್ ಓಪನ್ ಮಾಡಲು ಬಳಕೆಯಾಗುವುವುದಿಲ್ಲ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *